ಖತಾರ್: ಚಾಟಿಂಗ್, ಮೊಬೈಲ್ ಆ್ಯಪ್ ಉಪಯೋಗಕ್ಕೂ ದಂಡ-ಚಾಲಕರೇ ಎಚ್ಚರ

ದೋಹಾ: ವಾಹನ ಚಲಾಯಿಸುವ ವೇಳೆ ಸಂದೇಶ ರವಾನಿಸುವವರು ಮತ್ತು ಚಾಟಿಂಗ್ ನಡೆಸುವವರು ಇನ್ನು ಮುಂದೆ ತಮ್ಮ ಚಾಳಿ ಮುಂದುವರಿಸಿದರೆ ದಂಡ ಪಾವತಿಸಬೇಕಾದೀತು.

ಡ್ರೈವಿಂಗ್ ವೇಳೆ ಮೊಬೈಲ್ ಚಾಟಿಂಗ್, ಸಂದೇಶ ರವಾನೆ, ಗೈಂ ಆಡುವುದು, ಇತರ ಮೊಬೈಲ್ ಆ್ಯಪ್ ಗಳ ಪರಿಶೋಧನೆ ಎಲ್ಲವೂ ಇನ್ನು ಮುಂದೆ ಕಾನೂನು ಉಲ್ಲಂಘನಾ ಅಪರಾಧ ಗಣಕ್ಕೆ ಸೇರಲಿವೆ. ಸಧ್ಯ ಚಾಲಣಾ ವೇಳೆ ಮೊಬೈಲ್ ಫೋನ್ ನಲ್ಲಿ ಮಾತನಾಡುವುದಕ್ಕೆ ಮಾತ್ರ ನಿಷೇಧ ಹೇರಲಾಗಿತ್ತು. ಅಂತಹ ಅಪರಾಧ ಕ್ಕೆ 500 ರಿಯಾಲ್ ದಂಡ ಮತ್ತು ಮೂರು ಪಾಯಿಂಟ್ ಗಳನ್ನು ಕಡಿಮೆ ಮಾಡಲಾಗುತ್ತಿತ್ತು. ಡ್ರೈವಿಂಗ್ ವೇಳೆ ಚಾಟಿಂಗ್ ನಡೆಸುವವರನ್ನು ಪತ್ತೆಹಚ್ಚಲು ಕಾರ್ಯಾಚರಣಾ ಪ್ರಚಾರ ನಡೆಸಲಾಗುವುದು ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಅದಕ್ಕೆ ಮುಂಚಿತವಾಗಿ ಆ ಬಗ್ಗೆ ಜನಸಾಮಾನ್ಯರೆಡೆಯಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ವಕ್ತಾರ ತಿಳಿಸಿದ್ದಾರೆ.

ದೃಶ್ಯ ಮಾಧ್ಯಮಗಳು ಮತ್ತು ವಾರ್ತಾ ಮಾಧ್ಯಮಗಳ ಮೂಲಕ ಆ ಬಗ್ಗೆ ಜಾಗೃತಿ ಮೂಡಿಸಲಾಗುವುದು. ವಾಹನ ಚಲಾಯಿಸುವ ವೇಳೆ ಚಾಲಕರಲ್ಲಿ ಅನೇಕರು ವೀಡಿಯೋ ಗೇಮ್, ಚಾಟಿಂಗ್, ಫೇಸ್ಬುಕ್, ವಾಟ್ಸ್ ಆ್ಯಪ್ ಮುಂತಾದ ಮೊಬೈಲ್ ಆ್ಯಪ್ಗಳನ್ನು ಉಪಯೋಗಿಸುತ್ತಾರೆ. ಅಂತಹ ಉಪಯೋಗದಿಂದ ಉಂಟಾಗಲಿರುವ  ಅನಾಹುತಗಳನ್ನು ತಪ್ಪಿಸುವ ಸಲುವಾಗಿ ಈ ನಡೆಯನ್ನು ಸ್ವೀಕರಿಲಾಗಿದೆ ಎನ್ನಲಾಗಿದೆ. ಚಲಾವಣಾ ವೇಳೆ ಮೊಬೈಲ್ ಉಪಯೋಗಿಸುವ ಅನೇಕರನ್ನು ತಪಾಸಣಾ ವೇಳೆ ಪಟ್ರೋಲಿಂಗ್ ಸಂಘ ಪತ್ತೆ ಹಚ್ಚಿದೆ. ಚಾಲಕನ ಅಜಾಗರೂಕತೆಯಿಂದ ಇತರರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇರುವುದನ್ನು ಮನಗಂಡು ಈ ತೀರ್ಮಾನ ಕೈಗೊಳ್ಳಲಾಗಿದೆ.

ದೇಶದಲ್ಲಿನ ಅಪಘಾತಗಳಿಗೆ ಅತಿವೇಗದ ಚಾಲನೆ ಮಾತ್ರ ಕಾರಣವಲ್ಲ. ಮೊಬೈಲ್ ಬಳಕೆ ಕೂಡ ಅದಕ್ಕೆ ಕಾರಣವಾಗುತ್ತಿದೆ. ಕಾನೂನು ಉಲ್ಲಂಘನೆಗೆ ದಂಡವನ್ನು ಹೆಚ್ಚಿಸುವ ಬಗ್ಗೆ ಅಧಿಕೃತರೊಂದಿಗೆ ತಿಳಿಸಲಾಗಿತ್ತು. ಆದರೆ ಅದನ್ನು ನಿರಾಕರಿಸಲಾದ ಕಾರಣ ಮೊಬೈಲ್ ಉಪಯೋಗಕ್ಕೆ ಕಡಿವಾಣ ಹಾಕುವ ಸಲುವಾಗಿ, ಮೊಬೈಲ್ ಉಪಯೋಗವನ್ನು ಕಾನೂನು ಉಲ್ಲಂಘನಾ ಅಪರಾಧವಾಗಿ ಗಣಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

2022 ರ ಒಳಗೆ ಅಪಘಾತ ಮರಣ ಲೆಕ್ಕಾಚಾರವನ್ನು 130 ಆಗಿ ಕಡಿಮೆಗೊಳಿಸುವುದು, ಗಂಭೀರ ಗಾಯ ಉಂಟಾಗುವ ಅಪಘಾತ ಗಳನ್ನು 400 ಆಗಿ ಕಡಿಮೆಗೊಳಿಸುವುದು, ಪಾದಚಾರಿ ಗಳ ಸಾವು ನೋವುಗಳನ್ನು 32 ಶೇಕಡಾ ದಿಂದ 17 ಆಗಿ ಕಡಿಮೆಗೊಳಿಸುವುದು, ರಸ್ತೆ ಅಪಘಾತಗಳ ಲೆಕ್ಕಾಚಾರವನ್ನು ಒಂದು ಲಕ್ಷದಲ್ಲಿ 14 ಇರುವುದನ್ನು ಆರು ಆಗಿ ಕಡಿಮೆಗೊಳಿಸುವುದು ಮುಂತಾದ ಉದ್ದೇಶದಿಂದ ಜನವರಿ ಪ್ರಥಮ ವಾರದಲ್ಲಿ ದೇಶೀಯ ಸಾರಿಗೆ ಸುರಕ್ಷಾ ನೀತಿಯ ಭಾಗವಾಗಿ ಈ ನಿಲುವನ್ನು ಅಲ್ಲಿನ ಪ್ರಧಾನಿ ಶೈಖ್ ಅಬ್ದುಲ್ಲಾ ಬಿನ್ ನಾಸರ್ ಬಿನ್ ಖಲೀಫಾ ಅಲ್ ಥಾನಿ ತಾಳಿದ್ದರು

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!