janadhvani

Kannada Online News Paper

ಕೆಸಿಎಫ್ ಕುವೈತ್ ಮಹಬುಲ ಸೆಕ್ಟರ್ ನೂತನ ಅಧ್ಯಕ್ಷರಾಗಿ ಉಮರ್ ಝುಹ್ರಿ ಆಯ್ಕೆ

ಕೆಸಿಎಫ್ ಕುವೈತ್ ಮಹಬುಲ ಸೆಕ್ಟರ್ ಇದರ ಪುನರ್ರಚನೆ ಹಾಗೂ ಮಾಸಿಕ ಸ್ವಲಾತ್ ಮಜ್ಲಿಸ್ ದಿನಾಂಕ 12/04/2019 ರಂದು ಮಹಬುಲದ ಕಲಾ ಅಡಿಟೋರಿಯಂನಲ್ಲಿ ಸೆಕ್ಟರ್ ನ ಅಧ್ಯಕ್ಷರಾದ ಅಹಮದ್ ಬಾವಾಕ ರವರ ಅಧ್ಯಕ್ಷತೆಯಲ್ಲಿ ನಡೆಯ್ತು.ಬಹು: ಶಾಹುಲ್ ಹಮೀದ್ ಝುಹ್ರಿ ಉಸ್ತಾದರು ದಆ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ಶೈಕ್ಷಣಿಕ ಕನ್ವೀನರ್ ಬಹು:ಬಾದುಷ ಸಖಾಫಿ, ಕೆಸಿಎಫ್ ಅಂತಾರಾಷ್ಟ್ರೀಯ ಆಡಳಿತ ವಿಭಾಗದ ಕಾರ್ಯದರ್ಶಿ ಬಹು: ಹುಸೈನ್ ಎರ್ಮಾಡ್ ಉಸ್ತಾದ್, ಬಹು: ಉಮರ್ ಝುಹ್ರಿ ಉಸ್ತಾದ್, ಬಹು: ಜಬ್ಬಾರ್ ಮದನಿ, ಕೆಸಿಎಫ್ ಸೌತ್ ಝೋನ್ ಡೈರೆಕ್ಟರ್ ಅಬ್ದುಲ್ ಮಾಲಿಕ್ ಉಪಸ್ಥಿತರಿದ್ದರು.

ಮಹಬುಲ ಸೆಕ್ಟರ್ ಕಾರ್ಯದರ್ಶಿ ಮುಸ್ತಫಾ ಉಳ್ಳಾಲ ವರದಿ ವಾಚಿಸಿದರು.ಕೋಶಾಧಿಕಾರಿ ಮುನೀರ್ ಕಾರ್ಕಳ ಲೆಕ್ಕ ಪತ್ರ ಮಂಡಿಸಿದರು.

ನೂತನ ಅಧ್ಯಕ್ಷ ರಾದ ಬಹುಮಾನ್ಯ ಉಮರ್ ಝುಹ್ರಿ ಉಸ್ತಾದರು ಮಾತನಾಡಿ ಕೆಸಿಎಫ್ ಕಾರ್ಯಕರ್ತರು ಉತ್ತಮ ನಡವಳಿಕೆಯಿಂದ ಇನ್ನೊಬ್ಬರಿಗೆ ಮಾದರಿಯಾಗಿ, ಸೆಕ್ಟರ್ ನ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.

ಬಹು: ಬಾದುಷ ಸಖಾಫಿ ಉಸ್ತಾದರು ಕೌನ್ಸಿಲ್ ನಡೆಸಿ ಸಂಘಟನೆಯ ಜವಾಬ್ದಾರಿಯುತ ನಾಯಕರು ಮಾಡಬೇಕಾದ ಸೇವೆ, ಅದು ಪಾರತ್ರಿಕ ವಿಜಯಕ್ಕಾಗಿ ಎಂಬ ನಂಬಿಕೆಯಿಂದ ಕೂಡಿರಬೇಕು ಎಂದು ತಿಳಿಸಿದರು.

ನೂತನ ಪಧಾದಿಕಾರಿಗಳನ್ನು R.O ಆಗಿ ಬಂದ ಕೆಸಿಎಫ್ ರಾಷ್ಟ್ರೀಯ ಸಂಘಟನಾ ಚೆಯರ್ಮ್ಯಾನ್ ಝಕ್ರಿಯಾ ಆನೆಕಲ್ ಅವರ ನೇತ್ರತ್ವದಲ್ಲಿ ಆರಿಸಲಾಯಿತು.

ನೂತನ ಸಾರಥಿಗಳಾಗಿ ಅಧ್ಯಕ್ಷರು – ಉಮರ್ ಝುಹರಿ, ಕಾರ್ಯದರ್ಶಿ – ಮುನೀರ್ ಕಾರ್ಕಳ
ಕೋಶಾಧಿಕಾರಿ – ನೌಶಾದ್ ಕೊಡಗು
ಶಿಕ್ಷಣ ಅಧ್ಯಕ್ಷರು – ಮುಸ್ತಾಫಾ ಸುರಿಬೈಲ್
ಕಾರ್ಯದರ್ಶಿ – ಮೂಸಾ ಪುತ್ತೂರು
ಸಾಂತ್ವನ ಅಧ್ಯಕ್ಷರು – ಮುಸ್ತಾಕ್ ಮಂಗಳೂರ್
ಕಾರ್ಯದರ್ಶಿ – ಮಹಮೂದ್ ಸಿರಿಯಾ
ಪಬ್ಲಿಕೇಷನ್ ಅಧ್ಯಕ್ಷ – ಅಶ್ರಫ್ ಪಿ . ಎಸ್ ಕಾರ್ಗಳ್
ಪಬ್ಲಿಕೇಷನ್ ಕಾರ್ಯದರ್ಶಿ – ರವೂಫ್ ಉಳ್ಳಾಲ
ಹಾಗೂ ಇಪ್ಪತ್ತು ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆರಿಸಲಾಯಿತು.

ಮುಸ್ತಫಾ ಉಳ್ಳಾಲ ಸ್ವಾಗತಿಸಿ, ನೂತನ ಕಾರ್ಯದರ್ಶಿ ಮುನೀರ್ ಕಾರ್ಕಳ ವಂದಿಸಿದರು.

error: Content is protected !! Not allowed copy content from janadhvani.com