ಶಾಲಾ ವಿದ್ಯಾರ್ಥಿಯ ನಿಗೂಢ ಸಾವು: ನ್ಯಾಯಕ್ಕಾಗಿ ಎಸ್ ಡಿ ಪಿ ಐ ಒತ್ತಾಯ

ಮೈಸೂರು; ಶಾಲಾ ವಿದ್ಯಾರ್ಥಿಯ ನಿಗೂಢ ಸಾವು: ನ್ಯಾಯಕ್ಕಾಗಿ ಎಸ್.ಡಿ.ಪಿ.ಐ ಯಿಂದ ರಾಜ್ಯವ್ಯಾಪ್ತಿ ಪ್ರತಿಭಟನೆಗೆ ಕರೆ

ಮೈಸೂರು: ಇಲ್ಲಿನ ಕೆ.ಆರ್.ಪೇಟೆಯ ಅಲ್ಪಸಂಖ್ಯಾತ ಮಾದರಿ ವಸತಿ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕ ರವಿ ಎಂಬಾತನಿಂದ ನಿರಂತರ ಮೂರು ತಿಂಗಳು ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆ ನೀಡಿ 8ನೇ ತರಗತಿಯಲ್ಲಿ ಕಲಿಯುತ್ತಿದ್ದ ಝೈಬುನ್ನಿಸಾ ಎಂಬ ವಿದ್ಯಾರ್ಥಿನಿಯು ಜನವರಿ 24ರ ಸಂಜೆ ನಿಗೂಢವಾಗಿ ಸಾವನ್ನಪ್ಪಿರುವ ಘಟನೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿನಿಯ ಪೋಷಕರು ಅನುಮಾನ ವ್ಯಕ್ತಪಡಿಸಿದ್ದು, ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ.

ಶಿಕ್ಷಕನ ಚಿತ್ರಹಿಂಸೆಯನ್ನು ಈ ಮೊದಲೇ ವಿದ್ಯಾರ್ಥಿನಿ ವಸತಿ ಶಾಲೆಯ ಸಿಬ್ಬಂದಿಯೊಂದಿಗೆ ಹೇಳಿಕೊಂಡಿದ್ದು, ಈ ಸಂದರ್ಭ ಯಾರೊಂದಿಗೂ ಈ ಬಗ್ಗೆ ದೂರು ಕೊಡದಂತೆ ಮತ್ತು ದೂರು ನೀಡಿದಲ್ಲಿ ಶಾಲೆಗೆ ಧಕ್ಕೆ ಬರುತ್ತದೆ ಎಂದು ವಿದ್ಯಾರ್ಥಿನಿಗೆ ಹೇಳಿದ್ದರು. ಆದರೂ ವಿದ್ಯಾರ್ಥಿಯ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲದಿರುವುದು ವಿಪರ್ಯಾಸವೇ ಸರಿ.

ಜನವರಿ 24ರಂದು ಮದ್ಯಾಹ್ನ ತನ್ನ ಪೋಷಕರಿಗೆ ದೂರವಾಣಿ ಮೂಲಕ ಕರೆ ಮಾಡಿ, ‘ನನ್ನ ತಲೆಯನ್ನು ಹಿಡಿದು ಗೋಡೆಗೆ ಹೊಡೆದಿದ್ದಾರೆ’ ಎಂದು ತಾನು ಅನುಭವಿಸುತ್ತಿರುವ ಭೀಕರ ಚಿತ್ರಹಿಂಸೆಯನ್ನು ಹಂಚಿಕೊಂಡಿದ್ದಾಳೆ ಎಂದು ಪೋಷಕರು ಹೇಳಿದ್ದಾರೆ ಮತ್ತು ಈ ಬಗ್ಗೆ ಸಂಭಾಷಣೆಯ ರೇಕಾರ್ಡ್ ಮಾಧ್ಯಮಗಳಿಗೂ ನೀಡಿದ್ದಾರೆ. ಅದೇ ದಿನ 5 ಗಂಟೆಗೆ ಶಾಲೆಯಿಂದ ನಿಮ್ಮ ಮಗಳು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಪೋಷಕರಿಗೆ ತಿಳಿಸಲಾಗಿದೆ. ಎಚ್ಚೆತ್ತ ಪೋಷಕರು ಶಾಲೆಗೆ ಹೋದಾಗ ‘ನಿಮ್ಮ ಮಗಳು ಫ್ಯಾನಿಗೆ ಶಾಲು ಸುತ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಆ ಸಂದರ್ಭ ನಾವು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೇವೆ’ ಎಂದು ಹೇಳಿದ್ದಾರೆ.

‘ನಿಮ್ಮ ಮಗಳದ್ದು ಆತ್ಮಹತ್ಯೆ’ಯೆಂಬ ಹೇಳಿಕೆಯನ್ನು ಅಲ್ಲೆಗೆಳೆದಿರುವ ಪೋಷಕರು ಪ್ರತಿಭಾವಂತೆ ವಿದ್ಯಾರ್ಥಿನಿ ಆತ್ಮಹತ್ಯೆಗೈಯ್ಯಲು ಸಾಧ್ಯನೇ ಇಲ್ಲ ಎಂದು ಹೇಳಿದ್ದಾರೆ ಮತ್ತು ತಮ್ಮ ಮಗಳನ್ನು ಕಳೆದುಕೊಂಡ ದುಃಖವನ್ನು ಹಂಚಿಕೊಂಡಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ವಿದ್ಯಾರ್ಥಿನಿಯ ನಿಗೂಢ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದೆ. ಹಾಗೂ ವಿದ್ಯಾರ್ಥಿನಿಯ ನ್ಯಾಯಕ್ಕಾಗಿ ಘಟನೆ ಸಂಭಂವಿಸಿದ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಮತ್ತು ಇತರ ಸಂಘಟನೆಗಳೊಂದಿಗೆ ಪ್ರತಿಭಟಿಸಿ ದೂರು ದಾಖಲಿಸಲಾಗಿದೆ. ಈ ಬಗ್ಗೆ ವಿದ್ಯಾರ್ಥಿನಿಯ ನ್ಯಾಯಕ್ಕಾಗಿ ಮತ್ತು ಮುಂದೆಂದೂ ಇಂತಹ ಘಟನೆ ರಾಜ್ಯದ ಯಾವ ಭಾಗದಲ್ಲೂ ನಡೆಯಬಾರದು ಮತ್ತು ಸರಕಾರ ವಸತಿ ಶಾಲೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂಬ ಬೇಡಿಕೆ ಮತ್ತು ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ “ಜಸ್ಟೀಸ್ ಫಾರ್ ಝೈಬುನ್ನಿಸಾ” ‘ಎದ್ದೇಳಿ ಕರ್ನಾಟಕ’ ಎಂಬ ಘೋಷಣೆಯೊಂದಿಗೆ ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಪ್ರಕರಣಕ್ಕೆ ಸಂಬಂಧಿಸಿ ಎಸ್.ಡಿ.ಪಿ.ಐ ಯ ಪ್ರಮುಖ ಬೇಡಿಕೆಗಳು:
1. ಘಟನೆಯನ್ನು ಸಿಓಡಿ ತನಿಖೆಗೆ ಒಪ್ಪಿಸುವುದು.
2. ವಿದ್ಯಾರ್ಥಿಯ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ನೀಡುವುದು.
3. ವಿದ್ಯಾರ್ಥಿಯ ಸಾವಿಗೆ ಕಾರಣರಾದ ಶಿಕ್ಷಕನನ್ನು ವಜಾಗೊಳಿಸಬೇಕು.
4. ವಸತಿ ಶಾಲೆಯಲ್ಲಿ ನಿರಂತರವಾಗಿ ಮರುಕಳಿಸುತ್ತಿವ ವಿದ್ಯಾರ್ಥಿಗಳ ಸಾವಿನ ಬಗ್ಗೆ ಸರಕಾರ ತಕ್ಷಣ ಎಚ್ಚೆತ್ತುಕೊಂಡು ‘ಟಾಸ್ಕ್ ಪೋರ್ಸ್’ ರಚಿಸುವುದು.

ಪ್ರಕಟಣೆ:
ಅಬ್ದುಲ್ ಮಜೀದ್
ಪ್ರಧಾನ ಕಾರ್ಯದರ್ಶಿ, ಎಸ್.ಡಿ.ಪಿ.ಐ ಕರ್ನಾಟಕ

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!