ಬನ್ನೂರು ಸುನ್ನೀ ಸೆಂಟರ್ ವತಿಯಿಂದ ಬಡ ಹೆಣ್ಣಿನ ಮದುವೆಗೆ ಧನ ಸಹಾಯ

ಪುತ್ತೂರು : ಸುನ್ನೀ ಸೆಂಟರ್ ಬನ್ನೂರು ವತಿಯಿಂದ ಗಲ್ಫ್ ಕಾರ್ಪೋರೇಷನ್ ಕೌನ್ಸಿಲ್(ಜಿ,ಸಿ,ಸಿ) ಸಹಕಾರದಿಂದ ಬನ್ನೂರು ಜಮಾಅತಿಗೆ ಒಳಪಟ್ಟ ಬಡ ಹೆಣ್ಣಿನ ಮದುವೆ ಸಹಾಯ ಧನ ವಿತರಣಾ ಕಾರ್ಯಕ್ರಮ ಬನ್ನೂರು ಕಛೇರಿಯಲ್ಲಿ ಸಯ್ಯಿದ್ ಉಮರ್ ತಂಙಳ್ ನೇತೃತ್ವದಲ್ಲಿ ನಡೆಯಿತು

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸುನ್ನೀ ಸೆಂಟರ್ ಕಾರ್ಯನಿರ್ವಾಹಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್ಎಸ್ಎಫ್ ಬನ್ನೂರು ಶಾಖಾಧ್ಯಕ್ಷರಾದ ಸೈಫುಲ್ಲಾ ಸಅದಿ ಬನ್ನೂರು ಸುನ್ನೀ ಸೆಂಟರ್ ಬನ್ನೂರು ಜಮಾಅತಿನ ವ್ಯಾಪ್ತಿಯಲ್ಲಿ ಹಲವಾರು ಬಡವರ ಸೇವೆ ನಡೆಸುತ್ತಾ ಮುನ್ನಡೆಯುತ್ತಿದೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಾ ಸುನ್ನೀ ಸೆಂಟರ್ ಕಾರ್ಯವೈಖರಿ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಸುನ್ನೀ ಸೆಂಟರ್ ಕಾರ್ಯನಿರ್ವಾಹನ ಸಮಿತಿ ಪ್ರಮುಖರಾದ ಅಬೂಬಕ್ಕರ್ ಹಾಜಿ ಪಾಪ್ಲಿ, ಜಮಾಲ್ ಎಸ್.ಎಮ್, ಎಸ್ಎಸ್ಎಫ್ ಬನ್ನೂರು ಶಾಖಾ ಪ್ರಮುಖರಾದ ಶಮೀರ್,ಮಜೀದ್ ಮೊದಲಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!