janadhvani

Kannada Online News Paper

ಹಜ್ ಯಾತ್ರಿಕರ ಎಮಿಗ್ರೇಷನ್ ಸುಲಭ- ಮಕ್ಕಾ ರೋಡ್ ಯೋಜನೆ ಪಟ್ಟಿಯಲ್ಲಿ ಭಾರತ

ಮಕ್ಕಾ: ಹಾಜಿಗಳಿಗೆ ಎಮಿಗ್ರೇಷನ್ ಕಾರ್ಯವಿಧಾನಗಳನ್ನು ತಮ್ಮ ತಾಯ್ನಾಡಲ್ಲೇ ಅನುಷ್ಠಾನ ಗೊಳಿಸುವಂತಹ ಮಕ್ಕಾ ರೋಡ್ ಯೋಜನೆಯಲ್ಲಿ ಭಾರತವನ್ನು ಸೇರಿಸಿಕೊಳ್ಳಲು ಕ್ರಮ ಆಲಾರಂಭಿಸಿದವು. ಯೋಜನೆಯ ಜಾರಿಯೊಂದಿಗೆ, ಕಾರ್ಯವಿಧಾನಗಳಿಗಾಗಿ ಕಾಯದೆ ಜಿದ್ದಾ-ಮದೀನಾ ವಿಮಾನ ನಿಲ್ದಾಣಗಳ ಮೂಲಕ ತ್ವರಿತವಾಗಿ ಹಾಜಿಗಳಿಗೆ ಹೊರಬರುವುದು ಸಾಧ್ಯವಾಗಲಿದೆ.

ಹಜ್ ಯಾತ್ರಾರ್ಥಿಗಳಿಗೆ ಸೌದಿ ಪ್ರವೇಶಿಸಲು ಬೇಕಾಗುವ ಸಂಪೂರ್ಣ ಕಾರ್ಯವಿಧಾನಗಳನ್ನು ತಾಯ್ನಾಡಲ್ಲೇ ಪೂರ್ಣಗೊಳಿಸುವ ವಿಧಾನವಾಗಿದೆ ಮಕ್ಕಾ ರೋಡ್ ಯೋಜನೆ. ಈ ಯೋಜನೆಯ ವ್ಯಾಪ್ತಿಗೆ ಭಾರತವನ್ನು ಸೇರಿಸುವ ಕ್ರಮಗಳನ್ನು ಪ್ರಾರಂಭಿಸಲಾಗಿದ್ದು, ಜಿದ್ದಾ-ಮದೀನಾ ವಿಮಾನ ನಿಲ್ದಾಣಗಳ ಮೂಲಕ ಬರುವ ಯಾತ್ರಿಕರು ಸ್ಥಳೀಯ ಪ್ರಯಾಣಿಕರಂತೆ ಯಾವುದೇ ಕಾರ್ಯವಿಧಾನವಿಲ್ಲದೆ ಹೊರಬರಬಹುದಾಗಿದೆ. ಜವಾಝಾತ್, ಕಸ್ಟಮ್ಸ್ ಸೇರಿದಂತೆ ವಿವಿಧ ಪ್ರಕ್ರಿಯೆಗಳು ಊರಲ್ಲೇ ಮುಗಿಸಿ ಬಂದ ಕಾರಣ ಈ ಅನುಕೂಲ ಎನ್ನಲಾಗಿದೆ.

ಯೋಜನೆಯ ಮೂಲಕ ಬರುವ ಯಾತ್ರಿಕರ ಲಗೇಜ್ ಅನ್ನು ನೇರವಾಗಿ ಮಕ್ಕಾ ಮತ್ತು ಮದೀನಾದಲ್ಲಿನ ತಮ್ಮ ನಿವಾಸಕ್ಕೆ ತಲುಪಿಸಲಾಗುತ್ತದೆ. ಮಲೇಷಿಯಾ ಮತ್ತು ಇಂಡೋನೇಶಿಯಾದ ಹಜ್ ಯಾತ್ರಿಗಳಿಗೆ ಈ ಯೋಜನೆಯನ್ನು ಕಳೆದ ವರ್ಷಗಳಲ್ಲಿ ಭಾರೀ ಯಶಸ್ವಿಯಾಗಿ ಜಾರಿಗೆ ತರಲಾಗಿತ್ತು. ಮಕ್ಕಾ ರೋಡ್ ಯೋಜನೆ ಮೇಲ್ವಿಚಾರಣಾ ಸಮಿತಿಯು ಭಾರತದಲ್ಲಿನ ಸಂಬಂಧಪಟ್ಟ ಇಲಾಖೆಗಳೊಂದಿಗೆ ವಿಶ್ಲೇಷಣೆ ನಡೆಸುತ್ತಿದೆ.

error: Content is protected !! Not allowed copy content from janadhvani.com