ಸೂರಿಲ್ಲದೆ ಬೀದಿಪಾಲಾಗಿದ್ದ ಕುಟುಂಬಕ್ಕೆ ಆಸರೆಯಾದ ಸಅದಿಯಾ ಫೌಂಡೇಶನ್ ಬೆಂಗಳೂರು…!!

ಬೆಂಗಳೂರು:(ಜನಧ್ವನಿ ವಾರ್ತೆ ) ಕಳೆದ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳು, ಇನ್ನಿತರ ಕೆಲವು ಆನ್ ಲೈನ್ ಮೀಡಿಯಾಗಳಲ್ಲಿ ಬೆಂಗಳೂರಿನ ಫ್ರೆಝರ್ ಟೌನ್ ಸಮೀಪದ ಮಸೀದಿಯ ಮುಂಭಾಗದಲ್ಲಿ ಬಾಣಂತಿ ಮಹಿಳೆ ಹಾಗೂ ಆಕೆಯ ನಾಲ್ಕು ಮಕ್ಕಳು ಆಸರೆಯಿಲ್ಲದೆ ಬೀದಿಪಾಲಾಗಿ ನಿಂತಿದೆ ಅನ್ನುವ ವಾರ್ತೆಯೊಂದು ಸುದ್ದಿ ಮಾಡಿದ್ದವು.

ಆ ವರದಿಯೊಂದನ್ನು ಗಮನಿಸಿ ತಕ್ಷಣವಾಗಿ ಬೆಂಗಳೂರಿನ ಹಲವಾರು ಸ್ಲಂ ಪ್ರದೇಶಗಳ ಮಕ್ಕಳಿಗೆ ಶೈಕ್ಷಣಿಕವಾದ, ಧಾರ್ಮಿಕವಾದ ವಿದ್ಯಾಭ್ಯಾಸಗಳನ್ನು ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ತನ್ನ ಸ ಅದಿಯಾ ಎಜುಕೇಶನಲ್ ಫೌಂಡೇಶನ್ ಸಂಸ್ಥೆಯ ಮೂಲಕ ಪರಿಶ್ರಮಿಸುತ್ತಿರುವ ಮೌಲಾನ ಎನ್.ಕೆ.ಎಂ ಶಾಫಿ ಸ ಅದಿಯವರು ತನ್ನ ತಂಡವನ್ನು ಅಲ್ಲಿಗೆ ಕಳುಹಿಸಿ ಅಲ್ಲಿನ ಮಸೀದಿ ಆಡಳಿತ ಕಮಿಟಿ ಹಾಗೂ ಸ್ಥಳೀಯ ನಿವಾಸಿಗಳೊಂದಿಗೆ ಆ ಕುಟುಂಬದ ಹಿನ್ನಲೆಯನ್ನು ತಿಳಿದುಕೊಂಡಾಗ ಅವರೆಲ್ಲರೂ ಆ ಮಹಿಳೆಗೆ ಅದೆಷ್ಟೇ ಸಹಾಯ ಮಾಡಿದರೂ , ಮಕ್ಕಳಿಗೆ ವಿದ್ಯಾಭ್ಯಾಸದ ನೆರವನ್ನು ನೀಡಿದರೂ ಆ ಮಹಿಳೆ ಭಿಕ್ಷಾಟನೆಯನ್ನೇ ಕಾಯಕವನ್ನಾಗಿ ಜೀವಿಸುವಂತವರು ಅಂತ ತಿಳಿಯಲು ಸಾಧ್ಯವಾಯಿತು.ಇದನ್ನು ಮನಗಂಡ ಶಾಫಿ ಸಅದಿ ಯವರು ಖುದ್ದಾಗಿ ಕೊಡಗು ಜಿಲ್ಲಾ ವಕ್ಫ್ ಅಧ್ಯಕ್ಷ ಹಾಗೂ ವಕ್ಫ್ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಕಾರ್ಪೋರೇಟರ್ ಸಮ್ಮುಖದಲ್ಲಿ ಭೇಟಿಯಾಗಿ ಸಮಸ್ಯೆಯನ್ನು ಕೇಳಿದಾಗ ವಾಸಿಸಲು ಸೂರು ಒದಗಿಸಿಕೊಟ್ಟರೆ ಹೋಗುವುದಾಗಿಯೂ ಆ ಮಹಿಳೆ ಒಪ್ಪಿಕೊಂಡರು. ಅದರಂತೆ ಆ ಕುಟುಂಬದ ಪರಿಸ್ಥಿಯನ್ನು ಅರ್ಥೈಸಿಕೊಂಡು ಅವರ ನಾಲ್ಕು ಮಕ್ಕಳಿಗೆ ಸಂಪೂರ್ಣ ವಿದ್ಯಾಭ್ಯಾಸವನ್ನು ನೀಡಲು ಒಪ್ಪಿಗೆ ನೀಡುವುದರೊಂದಿಗೆ , ಆ ಕುಟುಂಬಕ್ಕೆ ಬೇಕಾದ ಮನೆಯೊಂದನ್ನು ನಿರ್ಮಿಸಿ ಕೊಡಲು ಮುಂದಾಗಿದೆ.
ಅದಕ್ಕಾಗಿ ಅಲ್ಲಿನ ಸ್ಥಳೀಯ ಕಾರ್ಪೋರೇಟರ್ ಎ. ಆರ್ ಝಾಕಿರ್ ರವರು ಕಾನೂನಾತ್ಮಕವಾದ ಎಲ್ಲಾ ಡಾಕ್ಯುಮೆಂಟ್ಸ್ ಗಳನ್ನು ಪಡೆದು ಆ ಮಕ್ಕಳನ್ನು ಸಅದಿಯಾ ಫೌಂಡೇಶನ್ ಗೆ ಕಳುಹಿಸಿಕೊಡಲು ಒಪ್ಪಿಗೆಯನ್ನು ನೀಡಿದ್ದಾರೆ.

ಈಗಾಗಲೇ ಅದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ತಯಾರಿಸಿ, ಆ ಕುಟುಂಬದ ಮುಂದಿನ ಜೀವನ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಸಅದಿಯಾ ಫೌಂಡೇಶನ್ ಸಂಸ್ಥೆಯೊಂದು ಮುಸ್ಲಿಂ ಸಮುದಾಯ ದೊಡ್ಡದಾದ ದೌತ್ಯವೊಂದನ್ನು ನೆರವೇರಿಸಿದೆ.

ಸಅದಿಯಾ ಫೌಂಡೇಶನ್ ಬೆಂಗಳೂರು ಬಗ್ಗೆ ಕಿರು ಪರಿಚಯ 

ಹದಿನೈದು ವರ್ಷಗಳ ಹಿಂದೆ ಬೆರಳಣಿಕೆಯ ತಲೆಕಟ್ಟು ಧರಿಸಿದ ಧಾರ್ಮಿಕ ನಾಯಕರನ್ನೊಳಗೊಂಡ ತಂಡವೊಂದು ರಾಜ್ಯ ರಾಜಧಾನಿಯಲ್ಲಿ ಶೈಕ್ಷಣಿಕ, ಧಾರ್ಮಿಕ ಕ್ರಾಂತಿಯ ಅಲೆಯನ್ನು ಸೃಷ್ಟಿಸಲು ಹೊರಟಾಗ ಅದಕ್ಕೆ ನಾಯಕತ್ವ ನೀಡಿ ಸ ಅದಿಯಾ ಫೌಂಡೇಶನ್ ಅನ್ನುವ ಸಂಸ್ಥೆಯೊಂದನ್ನು ಹುಟ್ಟು ಹಾಕಿ ರಾಜ್ಯ ರಾಜಧಾನಿಯಲ್ಲಿ ಶೈಕ್ಷಣಿಕ, ಧಾರ್ಮಿಕ ಕ್ರಾಂತಿಯನ್ನು ಸೃಷ್ಟಿಸುವುದರ ಮೂಲಕ ಸ ಅದಿಯಾ ಫೌಂಡೇಶನ್ ತನ್ನ ಸಂಸ್ಥೆಯ ಅಧೀನದಲ್ಲಿ ಮಹಿಳಾ ಶರೀಅತ್ ಕಾಲೇಜ್, ಹಿಫ್ಳುಲ್ ಕುರ್ ಆನ್, ಸ್ಲಂ ನಲ್ಲಿ ಕಷ್ಟದಾಯಕ ಜೀವನ ನಡೆಸುತ್ತಿದ್ದ ವಿದ್ಯಾರ್ಥಿಗಳಿಗಾಗಿ ಸ್ಲಂ ಕೇರ್ , ಇನ್ನಿತರ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳುವುದರ ಮೂಲಕ ಮುಂದುವರಿಯುತ್ತಿದೆ.

ಹಲವಾರು ಜೀವ ಕಾರುಣ್ಯ ಸೇವೆಯೊಂದಿಗೆ ಮುನ್ನೇರುತ್ತಾ ಅಸಹಾಯಕರ ಕಣ್ಣೀರನ್ನು ಒರೆಸುವ ಪ್ರಯತ್ನದೊಂದಿಗೆ ಮುನ್ನೇರುತ್ತಿರುವ ಸಅದಿಯಾ ಫೌಂಡೇಶನ್ ಇಂದು ಅದೆಷ್ಟೋ ಕುಟುಂಬಕ್ಕೆ ಆಸರೆಯ ನೆರಳಾಗಿ ಪರಿವರ್ತನೆಗೊಂಡಿದೆ.
ಮುಸ್ಲಿಂ ಸಮುದಾಯದ ಬೆರಳಣಿಕೆಯ ಮಂದಿಗಳು ಟಿವಿ ಪರದೆಯೊಳಗೆ ಕಾಣಿಸಿಕೊಳ್ಳತೊಡಗುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ವಿವಿಧ ಭಾಷೆಗಳಲ್ಲಿ ಪರಿಣತಿ ಹೊಂದಿ ಚರ್ಚಾಕೂಟಗಳಲ್ಲಿ ಭಾಗವಹಿಸಬಲ್ಲ ಹಲವಾರು ಸಾಧಕರನ್ನು ಇಂದು ಸಮಾಜಕ್ಕೆ ಸಮರ್ಪಿಸುವಲ್ಲಿ ಸ ಅದಿಯಾ ಫೌಂಡೇಶನ್ ಯಶಸ್ವಿಯಾಗಿದೆ.
ಸಮುದಾಯ ಪರವಾದ ಕಾಳಜಿ , ದೂರದೃಷ್ಟಿಯುಳ್ಳ ಚಿಂತನೆಯೊಂದಿಗೆ , ಸಮುದಾಯದೊಳಗೆ ಹೊಸ ಕ್ರಾಂತಿಯ ಅಲೆಯನ್ನು ಸೃಷ್ಟಿಸಿದ ಮೌಲಾನ ಶಾಫಿ ಸ ಅದಿ ಉಸ್ತಾದರ ಪ್ರಯತ್ನಗಳನ್ನು ಅಲ್ಲಾಹು ಸಫಲಗೊಳಿಸಲಿ.
ಸ ಅದಿಯಾ ಫೌಂಡೇಶನ್ ಸಮುದಾಯಕ್ಕೆ ನೆರಳಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ ಎಂದು ಪ್ರಾರ್ಥಿಸೋಣ.

ವರದಿ: ಸ್ನೇಹಜೀವಿ ಅಡ್ಕ

One thought on “ಸೂರಿಲ್ಲದೆ ಬೀದಿಪಾಲಾಗಿದ್ದ ಕುಟುಂಬಕ್ಕೆ ಆಸರೆಯಾದ ಸಅದಿಯಾ ಫೌಂಡೇಶನ್ ಬೆಂಗಳೂರು…!!

Leave a Reply

Your email address will not be published. Required fields are marked *

error: Content is protected !!