janadhvani

Kannada Online News Paper

ಕುವೈತಿಗಳ ಖರ್ಚಿನಲ್ಲಿ ವಿದೇಶಿಗಳು ಕೆಲಸ ಹುಡುಕ ಬೇಕಾಗಿಲ್ಲ- ಸಂಸತ್ ಸದಸ್ಯ

ಕುವೈಟ್ ಸಿಟಿ: ಕುವೈಟಿನ ಪ್ರಧಾನಿ ಮತ್ತು ಇತರ ಮಂತ್ರಿಗಳು ಸ್ವದೇಶೀಗಳಿಗೆ ಉದ್ಯೋಗವನ್ನು ಖಾತ್ರಿಪಡಿಸಿಕೊಳ್ಳಲು ವಿಫಲರಾಗಿದ್ದು, ಅವರ ವಿಚಾರಣೆ ನಡೆಸಬೇಕಿದೆ ಎಂದು ಸಂಸತ್ ಸದಸ್ಯ ಉಮರ್ ಅಲ್ ಥಬೀಬಿ ಒತ್ತಾಯಿಸಿದ್ದಾರೆ. ನೂರಾರು ಸ್ಥಳೀಯ ಇಂಜಿನಿಯರ್ಗಳು ಪೆಟ್ರೋಲಿಯಂ ವಲಯದಲ್ಲಿ ನಿರುದ್ಯೋಗಿಗಳಾಗಿದ್ದಾರೆ. ಆ ವಲಯದಲ್ಲಿ ವಲಸಿಗರನ್ನು ಬದಿಗಿಟ್ಟು ಸ್ವದೇಶೀಯರನ್ನು ನೇಮಕಗೊಳಿಸುವಂತೆ ಅವರು ಒತ್ತಾಯಿಸಿದರು.

ವಲಸಿಗರ ಮೌಲ್ಯಮಾಪನ ಮಾಡ ಬೇಕಾಗಿದ್ದರೆ ಅದು ಕುವೈತಿಗಳ ಖರ್ಚಿನಲ್ಲಿ ಮಾಡಬಾರದು. ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಮೂಲ ನಿವಾಸಿಗಳಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ನೀಡಬೇಕು. ಕುವೈತೀ ವಿದ್ಯಾರ್ಥಿಗಳಿಗೆ ಖಾಸಗಿ ವಲಯದಲ್ಲಿ ಅಗತ್ಯವಿಲ್ಲದ ಕೆಲವು ಕೋರ್ಸ್ ಗಳನ್ನು ಕಲಿಸಲಾಗುತ್ತಿದೆ. ಕಲಿತ ನಂತರ ಅವರು ನಿರುದ್ಯೋಗಿಗಳಾಗುತ್ತಾರೆ.ಅವರ ಉದ್ಯೋಗಗಳನ್ನು ವಲಸಿಗರು ಪಡೆಯುತ್ತಾರೆ ಎಂದು ಆರೋಪಿಸಿದರು.

ದಿನನಿತ್ಯದ ಆಧಾರದ ಮೇಲೆ ಮತ್ತು ಒಪ್ಪಂದದ ಆಧಾರದ ಮೇಲೆ ಸರಕಾರ ನೇಮಕಗೊಳಿಸಿದ ವಲಸಿಗರ ಸಂಖ್ಯೆಯನ್ನು ನೀಡುವಂತೆ ಕೋರಿದ್ದೇನೆ ಎಂದ ಅವರು, ಶಾಶ್ವತ ಉದ್ಯೋಗಿಗಳ ಪಟ್ಟಿಯಲ್ಲಿ ಸೇರದವರ ಪಟ್ಟಿಯನ್ನು ಕೇಳಲಾಗಿದೆ ಎಂದರು. ಪೆಟ್ರೋಲಿಯಂ ಇಂಜಿನಿಯರ್ ಆಗಿ ಕೆಲಸಮಾಡಲು ಸ್ವದೇಶಿಗಳಿಗೆ ಉಪಯುಕ್ತವಾಗುವಂತೆ ಉದ್ಯೋಗ ಮಾನದಂಡಗಳನ್ನು ಸರಳಗೊಳಿಸುವಂತೆ ಅವರು ಸರಕಾರವನ್ನು ಒತ್ತಾಯಿಸಿದರು.

error: Content is protected !! Not allowed copy content from janadhvani.com