ಲೆಕ್ಕ ಕೇಳುವ ಗಣಿತ ಮೇಷ್ಟ್ರು ಮಹದಾಯಿ ಬಗ್ಗೆ ಮೌನಿ ಯಾದದ್ದು ಯಾಕೆ? – ಮುಖ್ಯಮಂತ್ರಿ ಸಿದ್ಧರಾಮಯ್ಯ

ರಾಜ್ಯಕ್ಕೆ ಸುಮ್ನೆ ಬಂದು ಹೋಗೋದಲ್ಲ, ಮೊದಲು ಮಹದಾಯಿ ಬಗ್ಗೆ ಅಮಿತ್ ಶಾ ಅವರಿಗೆ ಮಾತನಾಡಲು ಹೇಳಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಪ್ರಧಾನಿಯವರು ಮಧ್ಯಪ್ರವೇಶಿಸಿ ಮಹದಾಯಿ ವಿವಾದವನ್ನು ಬಗೆಹರಿಸಬೇಕೆಂದು ಆಗ್ರಹಿಸಿ, ಕರ್ನಾಟಕ ಬಂದ್ ನಡೆದ ದಿನವೇ ರಾಜ್ಯಕ್ಕೆ ಬಂದರೂ ಅಮಿತ್ ಶಾ ಅವರು ಮಹದಾಯಿ ಬಗ್ಗೆ ಮಾತನಾಡಿಲ್ಲ.

ಈ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಸಿದ್ಧರಾಮಯ್ಯ, ಅಮಿತ್ ಶಾ ಅವರು ಮಹದಾಯಿ ಬಗ್ಗೆ ಮಾತನಾಡಲಿ. ಸುಮ್ನೆ ಬಂದು ಸುಳ್ಳು ಹೇಳಿ ಹೋಗುವುದಲ್ಲ, ಮಹದಾಯಿ ಯೋಜನೆಗಾಗಿ ಜನ ಕಾಯುತ್ತಿದ್ದಾರೆ. ಪ್ರಧಾನಿಯವರಿಗೆ ಹೇಳಿ ಸಮಸ್ಯೆಯನ್ನು ಬಗೆಹರಿಸಲಿ ಎಂದು ಹೇಳಿದ್ದಾರೆ.

ರಾಜ್ಯಕ್ಕೆ ಬಂದರೂ ಮಹದಾಯಿ ಬಗ್ಗೆ ಮಾತನಾಡದ ಅಮಿತ್ ಶಾ ಅವರಿಗೆ ಲೆಕ್ಕ ಕೇಳುವ, ಭ್ರಷ್ಟಚಾರದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.

One thought on “ಲೆಕ್ಕ ಕೇಳುವ ಗಣಿತ ಮೇಷ್ಟ್ರು ಮಹದಾಯಿ ಬಗ್ಗೆ ಮೌನಿ ಯಾದದ್ದು ಯಾಕೆ? – ಮುಖ್ಯಮಂತ್ರಿ ಸಿದ್ಧರಾಮಯ್ಯ

Leave a Reply

Your email address will not be published. Required fields are marked *

error: Content is protected !!