janadhvani

Kannada Online News Paper

ಸೌದಿ: ದೀರ್ಘಾವಧಿ ಇಖಾಮಾ ಯೋಜನೆಗೆ ಅನುಮತಿ

ರಿಯಾದ್: ವಿದೇಶೀಯರಾದ ಅಪೂರ್ವ ಪ್ರತಿಭೆಗಳನ್ನು ಸೌದಿಗೆ ಆಕರ್ಷಿಸಲು ದೀರ್ಘ ಕಾಲದ ಇಖಾಮಾ ಯೋಜನೆಗೆ ಅನುಮತಿ ನೀಡಲಾಗಿದೆ ಎಂದು ಸೌದಿ ಸಮಾಜ.ಕಲ್ಯಾಣ ಸಚಿವಾಲಯ ತಿಳಿಸಿದೆ.

ಸೌದಿ ಅರೇಬಿಯಾಕ್ಕೆ ಅಂತರ್‌ರಾಷ್ಟ್ರೀಯ ಮಟ್ಟದ ಪ್ರತಿಭೆಗಳನ್ನು ಮತ್ತು ತಜ್ಞರನ್ನು ಆಕರ್ಷಿಸುವುದು ದೀರ್ಘಾವಧಿ ಇಖಾಮಾ ನೀಡುವುದರ ಉದ್ದೇಶವಾಗಿದೆ. ಯೋಜನೆಯು ಗೋಲ್ಡನ್ ಕಾರ್ಡ್ ನೀಡುವ ಮೂಲಕ ಆರಂಭಗೊಳ್ಳಲಿದ್ದು, ತಜ್ಞರ ಅಭಿಪ್ರಾಯ ಪಡೆದ ನಂತರ ಮಾತ್ರವೇ ಜಾರಿಗೊಳಿಸಲಾಗುವುದು.

ಗೋಲ್ಡನ್ ಕಾರ್ಡಿನಲ್ಲಿ ಸುದೀರ್ಘ ಕಾಲ ಸೌದಿಯಲ್ಲಿ ಉಳಿಯಲು ಅನುಮತಿಸಲಾಗುವವರಿಗೆ ಲಭ್ಯವಿರುವ ಪ್ರಯೋಜನಗಳನ್ನು ನಂತರ ಘೋಷಿಸಲಾಗುತ್ತದೆ. ಆದರೆ, ಇಖಾಮ ಎಷ್ಟು ದೀರ್ಘಾವಧಿಯೆಂದು ಸಚಿವಾಲಯ ಸ್ಪಷ್ಟಪಡಿಸಿಲ್ಲ.

ಯಾವ ವಲಯಗಳ ಪ್ರತಿಭೆಗಳಿಗೆ ದೀರ್ಘಾವಧಿಯ ಇಖಾಮವನ್ನು ನೀಡುವುದು ಎಂಬುದರ ಬಗ್ಗೆ ತಜ್ಞರ ಅಭಿಪ್ರಾಯದ ನಂತರ ಇಲಾಖೆಯು ನಿರ್ಧರಿಸುತ್ತದೆ. ಇದು ಪರಿಣಾಮಕಾರಿಯಾಗಲು ಸುಮಾರು 32 ತಿಂಗಳ ಕಾಲಾವಕಾಶ ಬೇಕಿದೆ.

error: Content is protected !! Not allowed copy content from janadhvani.com