janadhvani

Kannada Online News Paper

ವಿದೇಶೀ ಕೆಲಸಗಾರರ ‘ಲೆವಿ’ ಮರಳಿಸಲಾಗಿದೆ- ಮುನ್ಶಆತ್

ರಿಯಾದ್: ಸೌದಿ ಅರೇಬಿಯಾದಲ್ಲಿ ವಿದೇಶೀ ಕೆಲಸಗಾರರಿಗೆ ವಿಧಿಸಲಾದ ಲೆವಿಯಲ್ಲಿ 9800 ಕಂಪೆನಿಗಳಿಗೆ ಮರಳಿಸಲಾಗಿದೆ ಎಂದು ಸಣ್ಣ ಮತ್ತು ಮಧ್ಯಮ ಉದ್ಯೋಗ ಪ್ರಾಧಿಕಾರ (ಮುನ್ಶಆತ್) ತಿಳಿಸಿದೆ. ಲೆವಿ ಮುಂತಾದವುಗಳಿಂದಾಗಿ ವೆಚ್ಚ ಹೆಚ್ಚಾದಂತೆ ಸಣ್ಣ ಪ್ರಮಾಣದ ಉದ್ಯಮಿಗಳು ಉದ್ಯಮವನ್ನು ನಿಲ್ಲಿಸಿದ್ದವು. ಈ ಹಿನ್ನೆಲೆಯಲ್ಲಿ ಪಾವತಿಸಿದ ಲೆವಿಯನ್ನು ಹಿಂತಿರುಗಿಸಲು ಅಲ್ಲಿನ ಆಡಳಿತಗಾರ ಸಲ್ಮಾನ್ ರಾಜ ಆದೇಶ ನೀಡಿದ್ದರು.

ಲೆವಿ ಪಾವತಿಸಿದ ಮತ್ತು ನಿಶ್ಚಿತ ವಿದೇಶೀ ಕಾರ್ಮಿಕರನ್ನು ನಿಯುಕ್ತಿಗೊಳಿಸಿದ ಕಂಪೆನಿಗಳಿಗೆ ಅವರು ಸರಕಾರದ ಇಲಾಖೆಗಳಿಗೆ ಪಾವತಿಸಿದ ಲೆವಿ ಬಾಬ್ತನ್ನು ಮರಳಿಸಲಾಗಿದೆ. ಇದು ವರೆಗೆ 9810 ಕಂಪೆನಿಗಳಿಗೆ 23.3 ಕೋಟಿ ರಿಯಾಲ್‌ಗಳನ್ನು ಮರುಪಾವತಿ ಮಾಡಲಾಗಿದೆ ಎಂದು ಅಥಾರಿಟಿ ವ್ಯಕ್ತಪಡಿಸಿದೆ. ಮರು ಪಾವತಿಸುವ ಈ ವಿಧಾನವು ಎರಡು ವರ್ಷಗಳ ವರೆಗೆ ಮುಂದುವರಿಯಲಿದೆ.

ಇದಕ್ಕಾಗಿ 700 ಕೋಟಿ ರಿಯಾಲ್‌ಗಳನ್ನು ಕಾಯ್ದಿರಿಸಲಾಗಿದೆ. ಸಣ್ಣಮಟ್ಟದ ಉದ್ಯಮಗಳು ನಿಷ್ಕ್ರಿಯಗೊಳ್ಳುವ ಮೂಲಕ ಆರ್ಥಿಕ ವಲಯಕ್ಕೆ ಭಾರೀ ಹೊಡೆತ ಬೀಳಲಿದ್ದು, ಆ ಕಾರಣಕ್ಕಾಗಿ ಅವರು ಪಾವತಿಸಿದ ಲೆವಿಯನ್ನು ಮರಳಿಸಲಾಗುತ್ತಿದೆ.

ಪ್ರತೀ ಸಂಸ್ಥೆಗೆ 26,200 ರಿಯಾಲ್‌ಗಳನ್ನು ಪ್ರಥಮ ಹಂತವಾಗಿ ಪಾವತಿಸಲಾಗುವುದು ಎಂದು ಅಥಾರಿಟಿಯ ಡೆಪ್ಯುಟಿ ಗವರ್ನರ್ ಮುಹಮ್ಮದ್ ಅಲ್ ಮಾಲಿಕಿ ಹೇಳಿದ್ದಾರೆ. ಲೆವಿ ಮರು ಪಾವತಿಗಾಗಿ ಇದುವರೆಗೆ 15,500 ಅರ್ಜಿಗಳು ಬಂದಿರುವುದಾಗಿ ಅವರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com