ಯುಎಇ ವಿಶ್ವದ ಅತ್ಯಂತ ವಿಶ್ವಸನೀಯ ಎರಡನೇ ಆಡಳಿತ

ದುಬೈ: ಯುಎಇ ವಿಶ್ವದ ಅತ್ಯಂತ ವಿಶ್ವಸನೀಯ ಎರಡನೇ ಆಡಳಿತವಾಗಿದೆ ಎಂದು ವರದಿಯಾಗಿದೆ.
ನ್ಯುಯಾರ್ಕ್ ಕೇಂದ್ರವಾಗಿಸಿ ಕಾರ್ಯಾಚರಿಸುವ ಎಟಲ್ಮೋನ್ ಟ್ರಸ್ಟ್ ಬಾರೋಮೀಟರ್ ಅಧಿಕೃತರು ಈ ವರದಿಯನ್ನು ಬಹಿರಂಗ ಪಡಿಸಿದ್ದಾರೆ.

ವಿಶ್ವದ ಅತ್ಯಂತ ವಿಶ್ವಸನೀಯ ಆಡಳಿತ ಯುಎಇ ದೇಶದಲ್ಲಿದೆ ಎಂದು ಯುಎಇ ಉಪಾಧ್ಯಕ್ಷ, ಪ್ರಧಾನಿ, ದುಬೈನ ಆಡಳಿತಾಧಿಕಾರಿ ಶೈಖ್ ಮುಹಮ್ಮದ್ ಬಿನ್ ರಾಷಿದ್ ಅಲ್ ಮಕ್ತೂಮ್ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಜನರಿಗೆ ಸರಕಾರದ ಮೇಲಿರುವ ವಿಶ್ವಾಸವನ್ನು ಸದೃಢ ಗೊಳಿಸಲು ಸಾಧ್ಯಾವಾಗಿದೆ ಎಂದು ಶೈಖ್ ಮುಹಮ್ಮದ್ ಅಭಿಪ್ರಾಯ ಪಟ್ಟಿದ್ದಾರೆ.

ಏಳು ವರ್ಷಗಳಲ್ಲಿ ಇತರ ದೇಶಗಳಿಗಿಂತ ಉನ್ನತ ಮಟ್ಟದ ಸ್ಥಾನವನ್ನು ಯುಎಇ ತನ್ನದಾಗಿಸಿಕೊಂಡಿದೆ. ನಿರಂತರವಾದ ಪ್ರಯತ್ನಗಳ ಮೂಲಕ ರಾಷ್ಟ್ರ ನಿರ್ಮಾಣ ವನ್ನು ಉನ್ನತ ಮಟ್ಟಕ್ಕೆ ಏರಿಸಿದೆ. ಆತ್ಮ ವಿಶ್ವಾಸ ದೇಶದ ಆಸ್ತಿಯಾಗಿದೆ. ಅದು ವಿಶೇಷವಾದ ಸ್ಥಾನವನ್ನು ಪಡೆಯುವಲ್ಲಿ ನಮಗೆ ದೃಢತೆಯನ್ನು ನೀಡಿದೆ ಎಂದು ಶೈಖ್ ಮುಹಮ್ಮದ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಕಳೆದ ಅಕ್ಟೋಬರ್‌ ನಿಂದ ನವೆಂಬರ್ ವರೆಗೆ 28 ದೇಶಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಯುಎಇ ಎರಡನೇ ಸ್ಥಾನವನ್ನು ತನ್ನದಾಗಿಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!