ಖತ್ತರ್-ಯೂರೋಪಿಯನ್ ಯೂನಿಯನ್ ಗಳ ನಡುವಿನ ವ್ಯಾಪಾರ ಸಂಬಂಧವು ಇನ್ನಷ್ಟು ವೃದ್ಧಿ

ದೋಹಾ: ಖತ್ತರ್ ಮತ್ತು ಯೂರೋಪಿಯನ್ ಯೂನಿಯನ್ ಗಳ ನಡುವಿನ ವ್ಯಾಪಾರ ಸಂಬಂಧವು ಇನ್ನಷ್ಟು ವೃದ್ಧಿಯಾಗಲಿದೆ ಎಂದು ವರದಿಯಾಗಿದೆ. ಅವುಗಳ ನಡೆವೆ ವಿಮಾನ ಮಾರ್ಗ ಸರಕು ಸಾಗಣೆಯಿಂದ 39.4 ಶೇಕಡಾ ಶ್ರೇಯಸ್ಸು ಕಂಡಿದ್ದರೆ, ಕೆರೆ ಮಾರ್ಗದಲ್ಲಿ 121.7 ಶೇಕಡಾ ವೃದ್ಧಿಯಾಗಲಿದೆ ಎಂದು ಎಮೇರ್ಜಿಂಗ್ ಮಾರ್ಕೆಟ್ಸ್ ಲಾಜಿಸ್ಟಿಕ್ಸ್ ಇಂಡೆಕ್ಸ್ ನ ಆಧಾರದಲ್ಲಿ ‘ದಿ ಪೆನ್ಸುಲ’ ದಿನಪತ್ರಿಕೆ ವರದಿ ಮಾಡಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ವೃದ್ಧಿ ಕಂಡುಬರುತ್ತಿರುವ 50 ಮಾರ್ಕೆಟಿಂಗ್ ಗಳ ಕುರಿತು ಅಧ್ಯಯನ ನಡೆಸಿ ಇಂಡೆಕ್ಸ್ ತಯಾರಿಸಲಾಗುತ್ತದೆ. ಈ ವಲಯದಲ್ಲಿ ಖತ್ತರ್ ಉನ್ನತ ವಿಜಯ ತನ್ನದಾಗಿಸಿದೆ ಎನ್ನಲಾಗಿದೆ. ರಾಂಕಿಂಗ್ ನಲ್ಲಿ ಖತ್ತರ್ 11 ನೇ ಸ್ಥಾನವನ್ನು ತನ್ನದಾಗಿಸಿದೆ. ಪಾಯಿಂಟ್ ಆಧಾರದಲ್ಲಿ 0.24 ಸ್ಕೋರ್ ತನ್ನದಾಗಿಸಿ, 6.02 ಕ್ಕೆ ತಲುಪಿದೆ.
ಮೂಲ ಸೌಕರ್ಯ, ಸಾರಿಗೆ ವಲಯದಲ್ಲಿ ಖತ್ತರ್ ಎಂಟನೇ ಸ್ಥಾನದಲ್ಲಿದೆ. ಬಿಸಿನೆಸ್ ಆಧಾರವಾಗಿ ಎರಡನೇ ಸ್ಥಾನದಲ್ಲೂ ಇದೆ. 30,000 ಕೋಟಿ ಡಾಲರ್‌ಗಳಿಗಿಂತ ಕೆಲಗಿನ ಜಿಡಿಪಿ ಇರುವ ರಾಷ್ಟ್ರಗಳ ಪೈಕಿ ಮುನ್ನುಗ್ಗುವ ವ್ಯವಹಾರದಲ್ಲಿ ಎರಡನೇ ಸ್ಥಾನ ಖತ್ತರ್ ಗೆ ಸಲ್ಲುತ್ತದೆ.ಮಲೇಷ್ಯಾ ಒಂದನೇ ಸ್ಥಾನವನ್ನು ತನ್ನದಾಗಿಸಿ ಕೊಂಡಿದೆ. ಕಳೆದ ವರ್ಷದ ಲೆಕ್ಕಾಚಾರ ದಂತೆ ಅತ್ಯಂತ ಲಾಭದಾಯಕ ವ್ಯಾಪಾರ ಮಾರ್ಗದಲ್ಲಿ ಖತ್ತರ್- ಯುರೋಪಿಯನ್ ಯೂನಿಯನ್ ಮಾರ್ಗವು ಎರಡನೇ ಸ್ಥಾನದಲ್ಲಿದೆ. ಯುಕ್ರೇನ್- ಯುರೋಪಿಯನ್ ಯೂನಿಯನ್ ಪ್ರಥಮ ಸ್ಥಾನದಲ್ಲಿದೆ.

Leave a Reply

Your email address will not be published. Required fields are marked *

error: Content is protected !!