ಹಾಜಿ ಹಮೀದ್ ಕಂದಕ್ ನಿಧನ, ಕೆಸಿಎಫ್ ಕುವೈತ್ ತೀವ್ರ ಸಂತಾಪ

ಕುವೈತ್ (ಜನಧ್ವನಿ ನ್ಯೂಸ್ ): ಅಹ್ಲ್ ಸುನ್ನತ್ ವಲ್ ಜಮಾಅತಿನ ಕಾರ್ಯಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ, ಮುಸ್ಲಿಂ ಸಮುದಾಯದ ಪರ ಎಂದೆಂದೂ ಧ್ವನಿಯಾಗುತಿದ್ದ ನಮ್ಮೆಲ್ಲರ ಆತ್ಮೀಯ ಪ್ರಮುಖ ಉಮರಾ ಮುಖಂಡ ಹಾಜಿ ಹಮೀದ್ ಕಂದಕ್ ರವರ ನಿಧನಕ್ಕೆ ಕೆಸಿಎಫ್ ಅಂತರಾಷ್ಟ್ರೀಯ ಸಮೀತಿ ತೀವ್ರ ಸಂತಾಪ ಸೂಚಿಸಿದೆ. ಸುನ್ನೀ ಸಂಘಟನೆಗಳ ಜೊತೆ, ಸಾದಾತುಗಳ ಜೊತೆ, ಸುನ್ನೀ ನಾಯಕರ ಜೊತೆ ಸದಾ ನಿಕಟ ಸಂಪರ್ಕವನ್ನು ಬೆಳೆಸಿ ಸುನ್ನತ್ ಜಮಾಅತಿನ ವೃಂದದವರಿಗೆ, ಸುನ್ನಿಗಳಿಗೆ ಬೆನ್ನು‌ತಟ್ಟಿ ಪ್ರೊತ್ಸಾಹಿಸುತ್ತಾ ಸಹಕಾರ ನೀಡುತಿದ್ದ ಹಮೀದ್ ಹಾಜಿಯವರ ವಿಯೋಗವು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಎಂದು ಯಾಕೂಬ್ ಕಾರ್ಕಳ ಪ್ರಧಾನ ಕಾರ್ಯದರ್ಶಿ ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!