janadhvani

Kannada Online News Paper

ಅಕ್ರಮ ವಲಸಿಗರನ್ನು ಕೆಲಸಕ್ಕೆ ನೇಮಿಸುವವರ ವಿರುದ್ಧ ಕಠಿಣ ಕ್ರಮ

ದುಬೈ: ಅಕ್ರಮ ವಲಸಿಗರನ್ನು ಕೆಲಸಕ್ಕೆ ನೇಮಕಗೊಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿರುವುದಾಗಿ ದುಬೈ ಎಮಿಗ್ರೇಷನ್ ಇಲಾಖೆ ಎಚ್ಚರಿಕೆ ನೀಡಿದೆ. ಅಕ್ರಮ ವಲಸಿಗರಿಗೆ ಸಂರಕ್ಷಣೆ ನೀಡುವವರಿಗೆ 50,000 ಸಾವಿರ ದಿರ್ಹ ದಂಡ ವಿಧಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಅಕ್ರಮ ವಲಸಿಗರಿಗೆ ಯುಎಇಯಲ್ಲಿ ತಮ್ಮ ಇರುವಿಕೆಯನ್ನು ಕಾನೂನುಬದ್ಧವಾಗಿಸಲು ಅಥವಾ ದಂಡವಿಲ್ಲದೆಯೇ ದೇಶವನ್ನು ಬಿಡಲು ಅನುಮತಿಸಿ, ಕಳೆದ ವರ್ಷ ಸಾರ್ವಜನಿಕ ಕ್ಷಮಾಪಣೆ ಘೋಷಿಸಲಾಗಿತ್ತು. ಐದು ತಿಂಗಳ ವರೆಗೆ ಅದು ಮುಂದುವರಿದಿತ್ತು. ಡಿಸೆಂಬರ್ ಕೊನೆಯವರೆಗೂ ಅದನ್ನು ಬಳಸದವರಿಗೆ ಇನ್ನು ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ ಎಂದು ದುಬೈ ವಲಸೆ ಇಲಾಕೆ ಹೇಳಿದೆ.

ದುಬೈನಲ್ಲಿ ಮಾತ್ರ 1,05809 ಜನರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ದುಬೈ ಎಮಿಗ್ರೇಷನ್ ಖಾತೆಯ ನಿರ್ದೇಶಕ ಮೇಜರ್ ಜನರಲ್ ಮುಹಮದ್ ಅಹ್ಮದ್ ಅಲ್-ಮರ್ರಿ ಹೇಳಿದ್ದಾರೆ. ಇವುಗಳ ಪೈಕಿ, 1,212 ಮಂದಿ ಯುದ್ಧ ಪೀಡಿತ ದೇಶಗಳಿಂದ ಬಂದವರಾಗಿದ್ದಾರೆ ಎಂದವರು ವಿವರಿಸಿದರು.

2013-13ರಲ್ಲಿ 13,843 ಜನರು ತಮ್ಮ ವೀಸಾ ಸ್ಥಿತಿಯನ್ನು ಬದಲಾಯಿಸಿದ್ದಾರೆ, 18,530 ವೀಸಾಗಳನ್ನು ನವೀಕರಿಸಲಾಗಿದೆ ಮತ್ತು 6,288 ಮಂದಿಗೆ ಹೊಸ ನಿವಾಸ ವೀಸಾ ಕೂಡ ಲಭಿಸಿದೆ. ಅದೇ ಸಮಯದಲ್ಲಿ, ದೇಶವನ್ನು ಬಿಟ್ಟ ಜನರ ಸಂಖ್ಯೆಯು 30,000 ಕ್ಕಿಂತ ಹೆಚ್ಚಿದೆ ಎಂದವರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com