janadhvani

Kannada Online News Paper

ಸೌದಿ ಅರೇಬಿಯಾ: ಸಣ್ಣ ವ್ಯವಹಾರಗಳಿಗೆ ಲೆವಿ ವಿನಾಯ್ತಿ

ರಿಯಾದ್: ನಾಲ್ಕಕ್ಕಿಂತ ಕಡಿಮೆ ವಿದೇಶಿ ಕಾರ್ಮಿಕರು ದುಡಿಯುವ ಸಣ್ಣ ವ್ಯವಹಾರಗಳಿಗೆ ಲೆವಿ ಅನ್ವಯಿಸುವುದಿಲ್ಲ ಎಂದು ಸೌದಿ ಕಾರ್ಮಿಕ ಸಚಿವಾಲಯ ತಿಳಿಸಿದೆ. ಹಲವರಿಗೆ ಈ ಬಗ್ಗೆ ಸಂದೇಹವಿರುವ ಕಾರಣಕ್ಕಾಗಿ ಸಚಿವಾಲಯದ ಈ ವಿವರಣೆ ನೀಡಿದೆ.

ನಾಲ್ಕು ವಿದೇಶಿ ಪ್ರಜೆಗಳು ಕೆಲಸಮಾಡುವ ಸಂಸ್ಥೆಗಳು ತೆರಿಗೆಯನ್ನು ಪಾವತಿಸಬೇಕಾದ ಅಗತ್ಯವಿಲ್ಲ. ಕಾರ್ಮಿಕ ಸಚಿವಾಲಯದ ಪ್ರಕಾರ, ಒಂಬತ್ತು ವಿದೇಶಿ ಕಾರ್ಮಿಕರಿರುವ ಕಂಪೆನಿಗಳಿಗೆ ನಿಬಂಧನೆಗೆ ಅನುಗುಣವಾಗಿ ಲೆವಿಯಲ್ಲಿ ವಿನಾಯಿತಿ ಲಭಿಸಲಿದೆ. ಒಂಬತ್ತು ಉದ್ಯೋಗಿಗಳೊಂದಿಗೆ ಉದ್ಯೋಗದಾತನು ಕೂಡ ಉದ್ಯೋಗಿಯಾಗಿರಬೇಕು.

ಅಲ್ಲದೆ, ಸಾಮಾಜಿಕ ವಿಮಾ ಸಂಸ್ಥೆಯಲ್ಲಿ ನೋಂದಣಿ ಮಾಡಿರಬೇಕು. ನೌಕರರ ವಿಭಾಗದಲ್ಲಿ ಸಂಸ್ಥೆಯ ಮಾಲೀಕರ ಹೆಸರನ್ನೂ ಹೊಂದಿರಬೇಕು. ಇಂತಹ ಕಂಪೆನಿಗಳಿಗೆ ಲೆವಿಯಲ್ಲಿ ವಿನಾಯಿತಿ ಲಭ್ಯವಿದೆ. ಹೊಸದಾಗಿ ಪ್ರಾರಂಭಿಸಲಾಗುವ ಸಣ್ಣ ಪ್ರಮಾಣದ ವಾಣಿಜ್ಯೋದ್ಯಮಿಗಳಿಗೆ ಲೆವಿ ವಿನಾಯಿತಿಯು ಆಶಾದಾಯಕವಾಗಲಿದೆ ಎನ್ನಲಾಗಿದೆ.

error: Content is protected !! Not allowed copy content from janadhvani.com