ಕರ್ನಾಟಕ ಬಂದ್ – ರಾಜಧಾನಿಯ ಜನಸಂಚಾರದಲ್ಲಿ ಏರು ಪೇರು

ವಿವಾದ ಇತ್ಯರ್ಥಕ್ಕೆ ಪ್ರಧಾನಿ ಮಧ್ಯೆ ಪ್ರವೇಶೀಸಬೇಕೆಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ‘ಕರ್ನಾಟಕ ಬಂದ್‌’ ಬಿಸಿ ಬೆಂಗಳೂರಿನಲ್ಲಿ ಜನಸಂಚಾರದಲ್ಲಿ ಏರು ಪೇರು ಮಾಡಿದೆ.

ಆಟೊಗಳು ಸೇರಿದಂತೆ ಸಾರಿಗೆ ವ್ಯತ್ಯಯಗೊಂಡ ಪರಿಣಾಮವಾಗಿ ಮೆಜೆಸ್ಟಿಕ್‌ನಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ನಗರದಲ್ಲಿ ಬೆಳಗ್ಗಿನಿಂದಲೇ ಬಿಎಂಟಿಸಿ, ಕೆಎಸ್ಸಾರ್ಟಿಸಿ ಬಸ್‌ಗಳ ಸಂಚಾರ ವಿರಳವಾಗಿದೆ. ಮೆಟ್ರೊ ಸಂಚಾರ ಎಂದಿನಂತಿದ್ದರೂ ಪ್ರಯಾಣಿಕರ ಸಂಖ್ಯೆ ಬಹಳಷ್ಟು ಕಡಿಮೆಯಿದೆ.ಮಂಗಳೂರಿನಲ್ಲಿ ಬಂದ್‌ ಇಲ್ಲ ಎಂದು ಹೇಳಲಾಗಿದ್ದರೂ ಅಲ್ಲಿಂದ ಬೆಂಗಳೂರು ಮತ್ತು ಇತರೆಡೆ ಸಂಚರಿಸುವ ಕೆಎಸ್ಸಾರ್ಟಿಸಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ.

One thought on “ಕರ್ನಾಟಕ ಬಂದ್ – ರಾಜಧಾನಿಯ ಜನಸಂಚಾರದಲ್ಲಿ ಏರು ಪೇರು

Leave a Reply

Your email address will not be published. Required fields are marked *

error: Content is protected !!