janadhvani

Kannada Online News Paper

ಕೆಸಿಎಫ್ ಮದೀನಾ ಮುನವ್ವರ ಸೆಕ್ಟರ್ ಗೆ ನೂತನ ನಾಯಕತ್ವ

ಮದೀನಾ: ಕೆಸಿಎಫ್ ಮದೀನಾ ಮುನವ್ವರ ಸೆಕ್ಟರ್ ನ ಮಹಾಸಭೆಯು ಇತ್ತೀಚೆಗೆ ಮದೀನಾ ಮುನವ್ವರದ ಕೆಸಿಎಫ್ ಭವನದಲ್ಲಿ ನಡೆಯಿತು.

ಇಸ್ಮಾಯಿಲ್ ಸಅಃದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು, ಸಾಂತ್ವನ ಪ್ರವರ್ತನೆಗಳಲ್ಲಿ ಮದೀನಾ ಮುನವ್ವರದ ಕೆಸಿಎಫ್ ಕಾರ್ಯಕರ್ತರ ಕೆಲಸ ಶ್ಲಾಘನೀಯವಾಗಿದೆ.ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಹಾಗೂಸ್ವಹಾಬಿಗಳ ಚರ್ಯೆಯನ್ನು ಪಾಲಿಸುವ ಅಹ್ಲ್ ಸುನ್ನತ್ ಜಮಾತ್ ನ ಆದರ್ಶದಡಿಯಲ್ಲಿ ಉತ್ತಮ ನಿಯ್ಯತ್ ನೊಂದಿಗೆ ಕಾರ್ಯಕರ್ತರು ಕೆಲಸವನ್ನು ಮಾಡಬೇಕೆಂದರು.

ಮದೀನಾ ಸೆಕ್ಟರ್ ಕಾರ್ಯದರ್ಶಿ ಅಶ್ರಫ್ ದೇರಳಕಟ್ಟೆ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಕೆಸಿಎಫ್ ಮದೀನಾ ಸೆಕ್ಟರ್ ಅಧ್ಯಕ್ಷ, ಅಶ್ರಫ್ ಸಖಾಫಿ ನೂಜಿ ಮಾತನಾಡಿ, ಧರ್ಮ ಪ್ರಬೋಧನೆ ಪ್ರತಿಯೊಬ್ಬ ಮುಸ್ಲಿಮನಕರ್ತವ್ಯವಾಗಿದ್ದು, ಒಬ್ಬ ತಾನು ಉತ್ತಮನಾಗುದರೊಂದಿಗೆ ಇತರರನ್ನು ಉತ್ತಮಗೊಳಿಸಲು ಪ್ರಯತ್ನಿಸಬೇಕು. ನಮ್ಮಿಂದಾಗಿ ಒಬ್ಬ ತಪ್ಪಿನಿಂದ ದೂರ ಸರಿದಲ್ಲಿ ಇಹ-ಪರ ಲೋಕದಲ್ಲಿರುವ ಎಲ್ಲದಕ್ಕಿಂತಲೂ ಉತ್ತಮವಾಗಿದೆ ಎಂದು ನಬಿ ಸ.ಅ ತಿಳಿಸಿದ್ದು, ಹಬೀಬರ ಸನ್ನಿಧಿಯಲ್ಲಿ ಜೀವಿಸುವುದು ನಮ್ಮ ಭಾಗ್ಯ ವಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿ ಉತ್ತಮ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸ ಬೇಕೆಂದರು.

ಸೆಕ್ಟರ್ ರಿ-ಒರ್ಗನೈಝನ್ ಡೈರೆಕ್ಟರ್ (SRD)ಯೂಸುಫ್ ಮದನಿ ಅವರ ನೇತೃತ್ವದಲ್ಲಿ ಹಳೆ ಕಮಿಟಿ ಬರಕಾಸ್ತುಗೊಳಿಸಿ ನೂತನ ಕಮಿಟಿಯನ್ನು ರಚಿಸಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಅಶ್ರಫ್ ಸಖಾಫಿ ನೂಜಿಯವರನ್ನು ಮರುನೇಮಕಗೊಳಿಸಲಾಯಿತು. ಕಾರ್ಯದರ್ಶಿಯಾಗಿ ಅಶ್ರಫ್ ದೇರಳಕಟ್ಟೆ (ನ್ಯಾಷನಲ್) ಮರು ಆಯ್ಕೆಗೊಂಡರು. ಖಜಾಂಚಿ ಯಾಗಿ ಸುಲೈಮಾನ್ ತುರ್ಕಳಿಕೆ ಅವರನ್ನು ನೇಮಕ ಗೊಳಿಸಲಾಯಿತು.

ನೂತನ ಸಮಿತಿಯ ಪದಾಧಿಕಾರಿಗಳ ವಿವರ

ಸಂಘಟನಾ ವಿಭಾಗ

ಅಧ್ಯಕ್ಷ : ಇಕ್ಬಾಲ್ ಕುಪ್ಪೆಪದವು
ಕಾರ್ಯದರ್ಶಿ: ಅಸಿಫ್ ಅಬ್ಬಾಸ್ ಬದ್ಯಾರ್

ಶಿಕ್ಷಣ ವಿಭಾಗ

ಅಧ್ಯಕ್ಷ : ಇಸ್ಮಾಯಿಲ್ ಸ’ಅದಿ ಬೇಂಗಿಲ
ಕಾರ್ಯದರ್ಶಿ :ಹುಸೈನಾರ್ ಉರುವಾಲ್ ಪದವು

ಸಾಂತ್ವನ ವಿಭಾಗ

ಅಧ್ಯಕ್ಷ :ತಾಜುದ್ದೀನ್ ಸುಳ್ಯ
ಕಾರ್ಯದರ್ಶಿ :ರಝ್ಝಾಖ್ ಉಳ್ಳಾಲ್,

ಪಬ್ಲಿಶಿಂಗ್ ವಿಭಾಗ
ಅಧ್ಯಕ್ಷ : ಇಕ್ಬಾಲ್ ಕುಪ್ಪೆಪದವು
ಕಾರ್ಯದರ್ಶಿ : ಹಕೀಂ ಬೋಳಾರ್.
ಇನ್ನು ಶರೀಫ್ ಮರವೂರು, ಮುಹಮ್ಮದಾಲಿ ಪಾಣೆಮಂಗಳೂರು, ರಜಾಕ್ ಅಳಕೆಮಜಲು, ಇಸ್ಮಾಯಿಲ್ ಕುಂಬ್ರಾ ಅಲ್ ಮರಾಯಿ
ಮುಹಮ್ಮದ್ ಅಶ್ರಫ್ ಹಾಜಿ ಕಿನ್ಯ, ರಝಾಕ್ ಬೈತಡ್ಕ, ಸೇರಿದಂತೆ ಹಲವರನ್ನು
ಕಾರ್ಯಕಾರಿ ಸಮಿತಿಗೆ ನೇಮಿಸಲಾಯಿತು.
ಹುಸೇನಾರ್ ಉರುವಾಲ್ ಪದವು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ವರದಿ : ಹಕೀಂ ಬೋಳಾರ್

error: Content is protected !! Not allowed copy content from janadhvani.com