ದೈಹಿಕ ಶಿಕ್ಷಕನ ಹಿಂಸೆಗೆ ಉಪ್ಪಿನಂಗಡಿ ಪರಿಸರದ ಹತ್ತನೇ ತರಗತಿಯ ವಿದ್ಯಾರ್ಥಿನಿ ಬಲಿ…!

ಮಂಡ್ಯ : ಶಾಲಾ ಶಿಕ್ಷಕನ ಚಿತ್ರ ಹಿಂಸೆ ಸಹಿಸಿಕೊಳ್ಳಲಾಗದೆ ಹತ್ತನೇ ತರಗತಿಯ ಉಪ್ಪಿನಂಗಡಿ ಮೂಲದ ವಿದ್ಯಾರ್ಥಿನಿಯೊರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ನವೋದಯ ಅಲ್ಪಸಂಖ್ಯಾತ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದ ಉಪ್ಪಿನಂಗಡಿ ಪರಿಸರದ ವಿದ್ಯಾರ್ಥಿನಿ ಝೈಬುನ್ನಿಸಾ ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಶಾಲಾ ಶಿಕ್ಷಕರು ಜುಟ್ಟು ಹಿಡಿದು ಶಿಕ್ಷೆ ನೀಡಿದ್ದು, ಚಿತ್ರಹಿಂಸೆ ತಾಳಲಾರದೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿನಿ ಸಾವಿಗೆ ಸಂಬಂಧಿಸಿದಂತೆ ಸಾಯುವ ಮುನ್ನ ಹೆತ್ತವರಿಗೆ ಕರೆ ಮಾಡಿ ಶಾಲಾ ಶಿಕ್ಷಕರು ತಲೆಗೆ ಹೊಡೆದಿದ್ದಾರೆ ಎಂದು ಅಳುತ್ತಿದ್ದಳು ಎಂದು ತಿಳಿದಿದೆ.‌ ಇದರಿಂದ ಗಾಬರಿಗೊಂಡ ಪೋಷಕರು ಅತ್ತ ಧಾವಿಸಿದಾಗ ಮಗಳು ನೇಣು ಹಾಕಿಕೊಂಡಾಗಿದೆ ಎಂದು ಬಲ್ಲ ಮೂಲಕ ತಿಳಿದು ಬಂದಿದೆ.

ಮಂಡ್ಯ ಕೆ.ಆರ್.ಪೇಟೆ ಪಟ್ಟಣದ ಮುಸ್ಲಿಂ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿ ಪ್ರಕರಣ ನಡೆದಿದ್ದು, ಮೃತ ವಿದ್ಯಾರ್ಥಿನಿ ತಾಯಿಯಿಂದ ದೈಹಿಕ ಶಿಕ್ಷಕನ ವಿರುದ್ದ ಗಂಭೀರ ಆರೋಪ ಹೊರಿಸಲಾಗಿದೆ

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!