ಏರ್ ಇಂಡಿಯಾದ ಶೇರು ಪಡೆಯಲು ತಾತ್ಪರ್ಯವಿಲ್ಲ: ಖತ್ತರ್ ಏರ್ವೇಸ್

ದೋಹಾ: ಭಾರತೀಯ ವಿಮಾನ ಕಂಪನಿಯಾದ ಏರ್ ಇಂಡಿಯಾದ ಶೇರು ಪಡೆಯಲು ಸಧ್ಯ ತಾತ್ಪರ್ಯವಿಲ್ಲ ಎಂದು ಖತ್ತರ್ ಏರ್ವೇಸ್ ಸಿಇಒ ಅಕ್ಬರ್ ಅಲ್ ಬಕರ್ ಹೇಳಿದ್ದಾರೆ. ಪಾಕಿಸ್ಥಾನದ ಏರ್ ಲೈನ್ಸ್ ನ ಶೇರು ಕೂಡ ಪಡೆಯುವ ತಾತ್ಪರ್ಯ ಇಲ್ಲ ಎಂದು ಅಲ್ ಬಕರ್ ದೋಹಾದಲ್ಲಿ ನಡೆಸಿದ ಸುದ್ದಿ ಗೋಷ್ಠಿಯಲ್ಲಿ ವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಪಾಕಿಸ್ಥಾನ ತನ್ನ ದೇಶೀಯ ವಿಮಾನ ಕಂಪೆನಿಗಳಲ್ಲಿ ವಿದೇಶೀ ನಿಕ್ಷೇಪಗಳನ್ನು ಪಡೆಯಲು ತೀರ್ಮಾನ ಕೈಗೊಂಡ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.ಸಧ್ಯ ಬ್ರಿಟಿಷ್ ಏರ್ವೇಸ್, ದಕ್ಷಿಣ ಅಮೆರಿಕದ ಲತಾಂ ಏರ್ಲೈನ್ ಗ್ರೂಪ್, ಏಷ್ಯಾದ ಕಾತೇ ಪೆಸಿಫಿಕ್‌, ಇಟಲಿಯ ಮೆರಿಡಿಯಾನ ಮುಂತಾದಡೆಗಳಲ್ಲಿ ಖತ್ತರ್ ಶೇರು ವಿನಿಮಯ ಮಾಡಿಕೊಂಡಿದೆ.

ಖತ್ತರ್ ಏರ್ವೇಸ್ ಪ್ರಥಮವಾಗಿ ಖರೀದಿಸಿರುವ  ಏರ್ ಬಸ್ ಎ 350-1000 ಮುಂದಿನ ತಿಂಗಳಲ್ಲಿ ದೋಹಾಗೆ ತಲುಪಲಿದೆ ಎಂದು ಬೇಕರ್‌ ಹೇಳಿದ್ದಾರೆ. ವಿಮಾನದ ಸೀಟುಗಳ ಕಾಂಫಿಗರೇಷನ್ ತಡವಾಗುತ್ತಿರುವ ಕಾರಣದಿಂದ ವಿಮಾನ ತಲುಪಲು ವಿಳಂಬವಾಗುತ್ತಿದೆ. ಬೋಯಿಂಗ್‌‌ ಕಂಪನಿಯ 777 ಎಸ್ ವಿಮಾನಕ್ಕೆ ಸಮಾನವಾದ ಏರ್ ಬಸ್‌ನ ಬೃಹತ್ ವಿಮಾನವಾಗಿದೆ ಎ 350-1000. ಡಬಲ್ ಇಂಜಿನ್ ಗಳ ಯಾತ್ರಾ ವಿಮಾನದ ಮಧ್ಯ ಪೌರಸ್ತ್ಯ ವಲಯದ ಪ್ರಥಮ ವಾರಸಿಯಾಗುವ ತಯಾರಿಯನ್ನು ಕಳೆದ ವರ್ಷ ಕೊನೆಯಲ್ಲಿ ಖತ್ತರ್ ನಡೆಸಿತ್ತು. ಆರ್ಡರ್ ನೀಡಲಾದ 37 ವಿಮಾನಗಳ ಪೈಕಿ ಪ್ರಥಮ ವಿಮಾನ ಮುಂದಿನ ತಿಂಗಳು ದೋಹಾ ತಲುಪುವ ನಿರೀಕ್ಷೆ ಇದೆ.

Leave a Reply

Your email address will not be published. Required fields are marked *

error: Content is protected !!