janadhvani

Kannada Online News Paper

ನ್ಯೂಝಿಲೆಂಡ್:ಉಗ್ರರ ದಾಳಿಯ ಆಘಾತ ಮರೆಯಲಾಗಿಲ್ಲ-ತಮೀಮ್ ಇಕ್ಬಾಲ್

ಕ್ರೈಸ್ಟ್‌ ಚರ್ಚ್‌, ಮಾ.16-ನ್ಯೂಝಿಲೆಂಡ್ ಕ್ರೈಸ್ಟ್‌ ಚರ್ಚ್‌ನಲ್ಲಿ ನಿನ್ನೆ ಮಸೀದಿಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯ ಆಘಾತದಿಂದ ಹೊರ ಬರಲು ಇನ್ನೂ ಹೆಚ್ಚಿನ ಸಮಯ ಅಗತ್ಯವಿದೆ ಎಂದು ಬಾಂಗ್ಲಾದೇಶ ಹಿರಿಯ ಆಟಗಾರ ತಮೀಮ್‌ ಇಕ್ಬಾಲ್‌ ತಿಳಿಸಿದ್ದಾರೆ.

ಇಂದು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ಈ ದುರ್ಘಟನೆಯಿಂದ ನಮ್ಮ ತಂಡದ ಆಟಗಾರರ ಕುಟುಂಬಗಳು ಆಘಾತಕ್ಕೆ ಒಳಗಾಗಿವೆ. ಹಾಗಾಗಿ, ಮೂರನೇ ಪಂದ್ಯವಾಡದೆ ತವರಿಗೆ ಮರಳುತ್ತಿರುವುದು ಉತ್ತಮ” ಎಂದು ಹೇಳಿದ್ದಾರೆ.

ಈಗಾಗಲೇ ನ್ಯೂಝಿಲೆಂಡ್ ವಿರುದ್ಧ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಬಾಂಗ್ಲಾದೇಶ ಇಂದು ಮೂರನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಆಡಬೇಕಿತ್ತು. ಆದರೆ, ಶುಕ್ರವಾರ ಕ್ರೈಸ್ಟ್‌ ಚರ್ಚ್ ನಲ್ಲಿರುವ ಎರಡು ಮಸೀದಿಗಳಿಗೆ ದಾಳಿ ಮಾಡಿದ ಬಂದೂಕುಧಾರಿಗಲಾದ ಉಗ್ರರು ಕನಿಷ್ಠ 49 ಮಂದಿಯನ್ನು ಬಲಿ ತೆಗೆದುಕೊಂಡಿದ್ದರು.

ಬಾಂಗ್ಲಾದೇಶದ ಆಟಗಾರರು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದರು. ಈ ದುರ್ಘಟನೆ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಅಂತಿಮ ಟೆಸ್ಟ್ ಪಂದ್ಯವನ್ನು ಐಸಿಸಿ ಒಪ್ಪಿಗೆ ಮೆರೆಗೆ ರದ್ದುಗೊಳಿಸಲಾಗಿದೆ. ಪ್ರವಾಸ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ತಂಡ ತವರಿಗೆ ಮರಳಿದೆ.

error: Content is protected !! Not allowed copy content from janadhvani.com