ಡಿಕೆಎಸ್ಸಿ ಬಹರೈನ್ ರಾಷ್ಟ್ರೀಯ ಸಮಿತಿ ವತಿಯಿಂದ ಜಲಾಲಿಯ್ಯ ರಾತೀಬ್ ಹಾಗೂ ಸ್ವಲಾತ್ ವಾರ್ಷಿಕ

 

ಬಹರೈನ್ : ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (ರಿ) ಮಂಗಳೂರು ಬಹರೈನ್ ರಾಷ್ಟ್ರೀಯ ಸಮಿತಿ ವತಿಯಿಂದ ಜಲಾಲಿಯ್ಯ ರಾತೀಬ್ ಹಾಗೂ ಸ್ವಲಾತ್ ವಾರ್ಷಿಕ ಜನವರಿ 26 & 27 ನೆೇ ಶುಕ್ರವಾರ ಮತ್ತು ಶನಿವಾರ ಮನಾಮದಲ್ಲಿ ನಡೆಯಲಿದೆ.ಪ್ರಸ್ತುತ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಸಯ್ಯದ್ ಕುಟುಂಬದ ಕಣ್ಮಣಿ  ಡಿ ಕೆ ಎಸ್ ಸಿ ಇದರ ಕೆಂದ್ರೀಯ ಅಧ್ಯಕ್ಶರಾದ ಅಸ್ಸಯ್ಯದ್ ಆಟಕೋಯ ತಂಗಳ್ ಕುಂಬೋಳ್ ಇವರ ಸುಪುತ್ರ ಅಸ್ಸಯ್ಯದ್ ಅಹ್ಮದ್ ಮುಕ್ತಾರ್ ತಂಗಳ್ ಕುಂಬೋಳ್ ನೇತೃತ್ವ ವಹಿಸಲಿದ್ದು , ಪ್ರಭಾಷಣ ರಂಗದ ಬೆಳ್ಳಿ ನಕ್ಷತ್ರ ಬಹು ನೌಫಲ್ ಸಖಾಫಿ ಕಳಸ ಮುಖ್ಯ ಪ್ರಭಾಷಣ ಮಾಡಲಿದ್ದಾರೆ . ಅದಲ್ಲದೆ ಹಲವಾರು ಉಲಮಾ , ಉಮರಾ ನೇತಾರರು ಭಾಗವಹಿಸುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸ್ವಾಗತ ಸಮಿತಿಯ ಚೇರ್ಮನ್ ಹಂಝ ಮಾನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

Leave a Reply

Your email address will not be published. Required fields are marked *

error: Content is protected !!