janadhvani

Kannada Online News Paper

ಕೊಪ್ಪ ಡಿವಿಶನ್ ಕಾನ್ಫಿಡೆನ್ಸ್ ಟೆಸ್ಟ್ , ವಿಜೇತರಿಗೆ ಬಹುಮಾನ ವಿತರಣೆ

ವಿದ್ಯಾರ್ಥಿ ಜೀವನದ ಮಹತ್ವದ ಅವಧಿಯಾದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗೆ ಪೂರ್ವಭಾವಿಯಾಗಿ ಕೊಪ್ಪ ಡಿವಿಷನ್ ವ್ಯಾಪ್ತಿಯಲ್ಲಿ ನಡೆಸಿದ ಕಾನ್ಫಿಡೆನ್ಸ್ ಟೆಸ್ಟ್ -2019 ಇತ್ತೀಚೆಗೆ ಸರ್ಕಾರಿ ಪ್ರೌಢಶಾಲೆಗಳಾದ ಕುದುರೆಗುಂಡಿ,ಶೆಟ್ಟಿಕೊಪ್ಪ,ಬೆಳ್ಳೂರು ಶಾಲೆಗಳಲ್ಲಿ ಎಸ್ ಎಸ್ ಎಫ್ ಕ್ಯಾಂಪಸ್ ವಿಭಾಗದಿಂದ ನಡೆಸಲಾಯಿತು.

ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ಈ ಅವಧಿಯಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದು ನಿಮಿಷವನ್ನು ಕೂಡ ಕಲಿಕೆಯತ್ತ ಗಮನ ಹರಿಸಬೇಕೆಂದು ಹಾಗೂ ಮುಂದಿನ ಉಜ್ವಲ ಭವಿಷ್ಯಕ್ಕೆ ತಮ್ಮ ಈ ಅವಧಿಯನ್ನು ಸಂಪೂರ್ಣವಾಗಿ ಉಪಯೋಗಿಸಿ ಉತ್ತಮ ಅಂಕ ಪಡೆದು ಶಾಲೆಗೆ ಮತ್ತು ಪೋಷಕರಿಗೆ ಹೆಸರು ತರಬೇಕೆಂದು ಕೊಪ್ಪ ಡಿವಿಷನ್ ಪ್ರಧಾನ ಕಾರ್ಯದರ್ಶಿ ಶರೀಫ್ ಕುದುರೆಗುಂಡಿ ಸಲಹೆ ನೀಡಿದರು.

ಸರ್ಕಾರಿ ಪ್ರೌಢಶಾಲೆ ಕುದುರೆಗುಂಡಿಯ ವಿದ್ಯಾರ್ಥಿನಿ ನಾಗವೇಣಿ(ಪ್ರಥಮ), ಸಾತ್ವಿಕ್(ದ್ವಿತೀಯ),ಮುಹಮ್ಮದ್ ನೌಫಲ್(ತೃತೀಯ).

ಬರ್ಕ್ ಮನ್ಸ್ ಪ್ರೌಢಶಾಲೆ ಶೆಟ್ಟಿಕೊಪ್ಪದ ರಿತುನ್(ಪ್ರಥಮ),ಪದ್ಮಾ(ದ್ವಿತೀಯ),ದೀಕ್ಷಾ(ತೃತೀಯ)

ಸರ್ಕಾರಿ ಪ್ರೌಢಶಾಲೆ ಬೆಳ್ಳೂರು ಸಂಜಯ್ (ಪ್ರಥಮ,ರಕ್ಷಿತ್(ದ್ವಿತೀಯ)ದೀಕ್ಷಾ(ತೃತೀಯ) ಸ್ಥಾನಗಳನ್ನು ಪಡೆದರು.
ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಮತ್ತು ಬಹುಮಾನಗಳನ್ನು ನೀಡಿ ಅಭಿನಂದಿಸಲಾಯಿತು.
ಸಹಕರಿಸಿದ ಮುಖ್ಯೋಪಾಧ್ಯಾಯರಿಗೆ ಕೃತಜ್ಞತಾ ಫಲಕ ನೀಡಲಾಯಿತು

ಈ ಸಂದರ್ಭದಲ್ಲಿ SSF ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರ್ಫುದ್ದೀನ್ ಕುದುರೆಗುಂಡಿ, SSF ಕೊಪ್ಪ ಡಿವಿಷನ್ ಅಧ್ಯಕ್ಷರಾದ ಸ್ವಾದಿಕ್ ಶೃಂಗೇರಿ,SSF ಕೊಪ್ಪ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಮುಸ್ತಫ ಜೋಗಿಸರ, ಜಿಲ್ಲಾ ಸದಸ್ಯರಾದ ಶಮೀಮ್,ಸಲೀಮ್ ಹಾಜರಿದ್ದರು.

error: Content is protected !! Not allowed copy content from janadhvani.com