janadhvani

Kannada Online News Paper

ಇವಿಎಂ ದುರ್ಬಳಕೆ: ಸುಪ್ರೀಂ ಕೋರ್ಟ್‌ನಲ್ಲಿ ನಾಳೆ ವಿಚಾರಣೆ

ದೆಹಲಿ: ವಿದ್ಯುನ್ಮಾನ ಮತ ಯಂತ್ರಗಳ ದುರ್ಬಳಕೆ ಮಾಡದಂತೆ ಆದೇಶ ಹೊರಡಿಸಬೇಕು ಎಂದು ಸುಮಾರು 21 ಪಕ್ಷಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ವಿಚಾರಣೆಗೆ ಬರಲಿದೆ.

ಮತ ಯಂತ್ರಗಳ ದುರ್ಬಳಕೆಯಾಗದಂತೆ ಸುರಕ್ಷತಾ ನಿಯಮಗಳನ್ನು ಅಳವಡಿಸಬೇಕು ಎಂದು ಈ ಪಕ್ಷಗಳು ಅರ್ಜಿಯಲ್ಲಿ ಮನವಿ ಮಾಡಿಕೊಂಡಿವೆ. ಅಲ್ಲದೆ ಶೇ.50ರಷ್ಟು ಮತ್ತು ಮತ ಯಂತ್ರಗಳಿಗೂ ಹೋಲಿಕೆಯಾಗಬೇಕು ಎಂದೂ ಆಗ್ರಹಪಡಿಸಿವೆ. ಕಾಂಗ್ರೆಸ್, ತೆಲುಗು ದೇಶಂ, ಎನ್‌ಸಿಪಿ, ಎಎಪಿ, ಸಿಪಿಐಎಂ, ಟಿಎಂಸಿ, ಸಿಪಿಐ, ಎನ್‌ಸಿ, ಎಸ್‌ಪಿ, ಆರ್‌ಎಲ್‌ಡಿ, ಎಲ್‌ಜೆಡಿ ಡಿಎಂಕೆ ಸೇರಿದಂತೆ 21 ಪಕ್ಷಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಫೆಬ್ರವರಿಯಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವಿಎಂಗಳ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದರು.

ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಸೇರಿದಂತೆ ಬಹುತೇಕ ಪ್ರತಿಪಕ್ಷಗಳು ಮತ ಯಂತ್ರಗಳ ಕಾರ್ಯವೈಖರಿ ಕುರಿತು ಸಂಶಯ ಆದರೆ ಚುನಾವಣಾ ಆಯೋಗ ಈ ಆರೋಪಗಳನ್ನು ನಿರಾಕರಿಸಿ ಯಾವುದೇ ಕಾರಣಕ್ಕೂ ಮತಯಂತ್ರಗಳ ದುರ್ಬಳಕೆ ಸಾಧ್ಯವಿಲ್ಲ ಎಂದು ಪ್ರತಿಪಾದಿಸಿತ್ತು. ಜನವರಿ 24ರಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಆರೋರಾ ದೇಶ, ಮತ್ತೆ ಮತಪತ್ರಗಳ ಮೊರೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಹೆಚ್ಚು ಸುರಕ್ಷಾ ನಿಯಮ ಪಾಲನೆ ಮತ್ತು ಇವಿಎಂ ಬಳಕೆ ವೇಳೆ ಕಟ್ಟುನಿಟ್ಟಾದ ಮಾನದಂಡ ಬಳಕೆ ಮಾಡುವಂತೆ ಅರ್ಜಿಯಲ್ಲಿ ಕೋರಲಾಗಿದೆ. ವಿವಿಪ್ಯಾಟ್(ಪೇರ್ಪ) ಹಾಗೂ ಇವಿಎಂನಲ್ಲಿ ಆದ ಮತದಾನದ ಪರೀಕ್ಷೆ ಮಾಡಬೇಕು ಎಂದು ಕೋರಿರುವ 21 ಪಕ್ಷಗಳು, ಶೇ 50ರಷ್ಟು ವಿವಿಪ್ಯಾಟ್ಗಳನ್ನ ಪರೀಕ್ಷೆ ಮಾಡಿದ ಬಳಿಕವೇ ಫಲಿತಾಂಶ ಘೋಷಣೆ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಪಟ್ಟು ಹಿಡಿದಿವೆ.

ಕಾಂಗ್ರೆಸ್, ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಾರ್ಟಿ, ಶರದ್ ಪರ್ವಾ ನೇತೃತ್ವದ ಎನ್ಸಿಪಿ, ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ, ಎಡರಂಗ, ಸಮಾಜವಾದಿ ಪಕ್ಷ ಹಾಗೂ ಮಾಯಾವತಿ ಅವರ ಬಿಎಸ್ಪಿ ಈ ಬಗ್ಗೆ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸುಪ್ರೀಂಕೋರ್ಟ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

error: Content is protected !! Not allowed copy content from janadhvani.com