ಹಾಜಿ ಹಮೀದ್ ಕಂದಕ್ ನಿಧನ: ರಾಜ್ಯ ಎಸ್ಸೆಸ್ಸೆಫ್ ತೀವ್ರ ಸಂತಾಪ

ಮಂಗಳೂರು(ಜನಧ್ವನಿ):ಕರಾವಳಿ ಪ್ರದೇಶದಲ್ಲಿ ಸುನ್ನಿ ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದ, ಸದಾ ಮುಸ್ಲಿಂ ಸಮುದಾಯದ ಪರ ಧ್ವನಿಯಾಗುತಿದ್ದ ಪ್ರಮುಖ ಉಮರಾ ಮುಖಂಡ ಹಾಜಿ ಹಮೀದ್ ಕಂದಕ್ ರವರು ನಿಧನ ಹೊಂದಿದ್ದಾರೆ إنا لله وإنا إليه راجعون.ಇಂದು ಮಂಗಳೂರಿನ ಉಡ್ ಲ್ಯಾಂಡ್ ಹೋಟೆಲಿನಲ್ಲಿ ಅಹಿಂದ ಸಭೆಯಲ್ಲಿ ಭಾಷಣ ಮಾಡುತ್ತಿರುವಾಗ ಕುಸಿದ ಬಿದ್ದ ಅವರನ್ನು, ಕೂಡಲೇ ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದರು.

ರಾಜ್ಯ ಎಸ್ಸೆಸ್ಸೆಫ್ ಸಂತಾಪ:ಹಾಜಿ ಯವರ ನಿಧನಕ್ಕೆ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ತೀವ್ರ ಸಂತಾಪ ಸೂಚಿಸಿದೆ. ಸುನ್ನೀ ಸಂಘಟನೆಗಳ ಜೊತೆ, ಸಾದಾತುಗಳ ಜೊತೆ, ಸುನ್ನೀ ನಾಯಕರ ಜೊತೆ ಸದಾ ನಿಕಟ ಸಂಪರ್ಕವನ್ನು ಬೆಳೆಸಿ ಅಹ್ಲುಸುನ್ನತಿ ವಲ್ ಜಮಾಅತಿನ ಕಾರ್ಯ ಚಟುವಟಿಕೆಗಳಿಗೆ ಬೆನ್ನು‌ತಟ್ಟಿ ಪ್ರೊತ್ಸಾಹಿಸುತ್ತಾ ಸಹಕಾರ ನೀಡುತಿದ್ದ ಹಮೀದ್ ಹಾಜಿಯವರ ವಿಯೋಗವು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಪರಮ ದಯಾಮಯನಾದ ಅಲ್ಲಾಹನು ಅವರಿಗೆ ಮಗ್‌ಫಿರತ್, ಮರ್‌ಹಮತ್ ದಯಪಾಲಿಸಲಿ, ಅವರ ಬರ್ಝಖೀ ಜೀವನ ಸಂತೋಷಗೊಳಿಸಲಿ – ಆಮೀನ್. ಸುನ್ನೀ ಸಂಘ ಕುಟುಂಬದ ಸದಸ್ಯರೆಲ್ಲರೂ ಮೃತರಿಗಾಗಿ ಪ್ರಾರ್ಥನೆ ಮಾಡಬೇಕಾಗಿಯು ಮಯ್ಯಿತ್ ಸಂಸ್ಕರಣೆಯಲ್ಲಿ ಸಾದ್ಯವಿದ್ದವರೆಲ್ಲರೂ ಭಾಗವಹಿಸಬೇಕಾಗಿಯೂ ಕೇಳಿಕೊಳ್ಳುತ್ತೇವೆ.

ಇಸ್ಮಾಈಲ್ ಸಖಾಫಿ, ಕೊಂಡಂಗೇರಿ.
(ಅಧ್ಯಕ್ಷರು, SSF ಕರ್ನಾಟಕ ರಾಜ್ಯ ಸಮಿತಿ),- ಅಡ್ವಕೇಟ್ ಇಲ್ಯಾಸ್, ನಾವುಂದ.
(ಪ್ರ ಕಾರ್ಯದರ್ಶಿ ), – ಶರೀಫ್, ಬೆಂಗಳೂರು. (ಕೋಶಾಧಿಕಾರಿ)ಎನ್ ಕೆ ಎಂ ಶಾಫಿ ಸಅದಿ ಬೆಂಗಳೂರು (ಅಧ್ಯಕ್ಷರು ಇಹ್ಸಾನ್ ಕರ್ನಾಟಕ)

ಇವುಗಳನ್ನೂ ಓದಿ

One thought on “ಹಾಜಿ ಹಮೀದ್ ಕಂದಕ್ ನಿಧನ: ರಾಜ್ಯ ಎಸ್ಸೆಸ್ಸೆಫ್ ತೀವ್ರ ಸಂತಾಪ

Leave a Reply

Your email address will not be published. Required fields are marked *

error: Content is protected !!