ರಾಸಲ್ ಖೈಮ ರಸ್ತೆಗಳಲ್ಲಿ ವಿನೂತನ ರಡಾರುಗಳ ಅಳವಡಿಕೆ

ರಾಸ್ ಅಲ್ ಖೈಮ: ಎಮಿರೇಟ್ಸ್‌ ನ ರಹದಾರಿಗಳಲ್ಲಿ ವಾಹನ ಚಲಾಯಿಸುವವರೇ ಎಚ್ಚರ. ಕಾನೂನನ್ನು ಉಲ್ಲಂಘನೆ ಮಾಡುವವರ ಚಿತ್ರಗಳು ಮತ್ತು ವೀಡಿಯೋ ಸೆರಹಿಡಿಯಬಲ್ಲ 9 ವಿನೂತನ ರೆಡಾರ್‌ಗಳನ್ನು ರಾಸ್ ಅಲ್ ಖೈಮಾದಲ್ಲಿ ಸ್ಥಾಪಿಸಲಾಗಿದೆ.

ಅಪಘಾತಕ್ಕೆ ಸಾಧ್ಯತೆ ಉಂಟಾಗುವ ರೀತಿಯಲ್ಲಿ ವಾಹನಗಳ ಮಧ್ಯೆ ಅಂತರವನ್ನು ಪಾಲಿಸದಿರುವುದು, ಡಿವೇಡ್ ಲೈನ್‌ಗಳಲ್ಲಿ ವಾಹನ ಚಲಾಯಿಸುದು, ನಿಷೇಧಿಸಿದ ಸಮಯದಲ್ಲಿ ಟ್ರಕ್‌ಗಳು ಮುಂತಾದ ವಾಹನಗಳನ್ನು ಚಲಾಯಿಸುವುದು ಮುಂತಾದ ಕಾನೂನು ಉಲ್ಲಂಘನೆಗಳನ್ನು ರೆಡಾರ್ ಗಳು ಸೆರೆ ಹಿಡಿಯಲಿದೆ ಎಂದು ರಾಕ್ ಪೊಲೀಸ್ ಸೆಂಟ್ರಲ್ ಆಪರೇಷನ್ ಡಿಪಾರ್ಟ್ಮೆಂಟ್ ಡಯರಕ್ಟರ್ ಜನರಲ್ ಬ್ರಿಗೇಡಿಯರ್ ಡಾ.ಮುಹಮ್ಮದ್ ಸ‌ಈದ್ ಅಲ್ ಹುಮೈದಿ ತಿಳಿಸಿದ್ದಾರೆ

ಆಫಿಸರ್ಸ್ ಕ್ಲಬ್‌, ಪೊಲೀಸ್ ಪೋಸ್ಟ್, ಅಲ್ ಮನಾರ್, ಗಲ್ಫ್ ಸಿನೆಮಾ, ಎಮಿಗ್ರೇಷನ್, ನಾಸ್ ನಾಸ್, ಶಮಾಲ್ ಮುಂತಾದೆಡೆಗಳ ಇಂಟರ್ ಸೆಕ್ಷನ್ ಗಳಲ್ಲಿ ಹೊಸ ರೆಡಾರ್ ಗಳನ್ನು ಸ್ಥಾಪಿಸಲಾಗಿದೆ. 32 ಮೊಬೈಲ್ ಸ್ಪೀಡ್ ಕ್ಯಾಮರಾ ಸಮೇತ 69 ರೆಡಾರ್ ಗಳನ್ನು ಪೊಲೀಸರು ಈಗಾಗಲೆ ಸ್ಥಾಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!