ಸುನ್ನಿಗಳು ಐಕ್ಯವಾಗುವುದು ಯಾರಿಗೆ ತಳಮಳವನ್ನುಂಟು ಮಾಡುತ್ತಿದೆ?

 

✍ ರಹ್ಮತುಲ್ಲಾ ಸಖಾಫಿ ಎಳಮರಂ.
ಕನ್ನಡಕ್ಕೆ: ಅಬೂಶಝ

ಶಂಸುಲ್ ಉಲಮಾ ವಫಾತಾದ ಮರುದಿವಸ ಇಕೆ ವಿಭಾಗ ಸುನ್ನೀ ನೇತಾರ ಅಬ್ದುರ್ರಹ್ಮಾನ್ ಕಲ್ಲಾಯಿ ಬರೆದ ಲೇಖನವನ್ನು ಚಂದ್ರಿಕಾ ಪತ್ರಿಕೆ ಅಚ್ಚುಹಾಕಿತು.
“ಸಮಸ್ತದ ಪುನರ್ ಏಕೀಕರಣ ಅವರ ಕೊನೆಯ ಅಭಿಲಾಷೆಯಾಗಿತ್ತು. ಎರಡು ವಿಭಾಗದ ವಿದ್ವಾಂಸರಲ್ಲಿ ನಾನು ಕಳಕಳಿಯಾಗಿ ವಿನಂತಿ ಮಾಡುತ್ತಿದ್ದೇನೆ. ಎರಡು ಸಮಸ್ತದ ಐಕ್ಯತೆ ಶೈಖುನಾ ರಿಗೆ ನಾವು ಕಟ್ಟುವ ಸೂಕ್ತವಾದ ಸ್ಮಾರಕವಾಗಿರುತ್ತದೆ. ಮೂರು ದಿನದ ಮುಂಚೆ ನಾನು ಶೈಖುನಾರವರನ್ನು ಸಂದರ್ಶಿಸಿದಾಗ ಸುನ್ನೀ ಐಕ್ಯದ ಕುರಿತು ಧೀರ್ಘಸಮಯ ಮಾತನಾಡಿದರು.ಶೈಖುನಾ ಸಮ್ಮತಿ ನೀಡಿದರೆ ನಾನು ಶ್ರಮಿಸುವೆನು ಎಂದಾಗ,ಹೌದು ಎರಡು ವಿಭಾಗ ಸುನ್ನಿಗಳು ಐಕ್ಯವಾಗಬೇಕು ಅದು ಸಮುದಾಯ ಸಬಲೀಕರಣ ಕ್ಕೆ ಅತ್ಯಗತ್ಯವಾಗಿದೆ ಎಂದುತ್ತರಿಸಿದರು.
(ಚಂದ್ರಿಕ 1996,ಆಗಸ್ಟ್30)

ಮುಂದುವರಿದ ಭಾಗವಾಗಿ ಸೆಯ್ಯದ್ ಮುಹಮ್ಮದಲಿ ಶಿಹಾಬ್ ತಂಙಳ್,ಉಮರಲಿ ಶಿಹಾಬ್ ತಂಙಳ್, ಹೈದರಲಿ ಶಿಹಾಬ್ ತಂಙಳ್, ಸಾದಿಕಲಿ ಶಿಹಾಬ್ ತಂಙಳ್, ಕುಞ್ಞಾಲಿಕುಟ್ಟಿ ಸಹಿತ ಎಲ್ಲರೊಂದಿಗೂ ಶೈಖುನಾರವರ ಅಂತ್ಯ ಅಭಿಲಾಷೆಯ ಕುರಿತು ಮಾಹಿತಿ ನೀಡಿದ ವಿಷಯವನ್ನು ಕೂಡಾ ಅಬ್ದುರ್ರಹ್ಮಾನ್ ಕಲ್ಲಾಯಿ ಬರೆಯುತ್ತಾರೆ.

ಖಮರುಲ್ ಉಲಮಾ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ನೇತೃತ್ವ ನೀಡುವ ಸಮಸ್ತ ಕೂಡಾ ಸುನ್ನಿಗಳ ಐಕ್ಯತೆಗಾಗಿ ಆ ಕಾಲದಿಂದಲೇ ಬಧ್ಧತೆ ತೋರಿಸುತ್ತಾ , ಕೆಲವೊಂದು ಉಮರಾಗಳ ಕಠಿಣ ಪ್ರಯತ್ನದೊಂದಿಗೆ ಚರ್ಚೆಗಳು ಪ್ರಗತಿಪರವಾಗಿ ಮುಂದೆ ಸಾಗುತ್ತಿದೆ.ಸದರಿ ಪ್ರಯತ್ನ ಈಗಲೂ ಮುಂದುವರಿಯುತ್ತಿದೆ.

ಮುಸ್ಲಿಂ ಸಮುದಾಯದ ಸಾರ್ವತ್ರಿಕ ಫ್ಲಾಟ್ ಫೋರ್ಮ್ ಎಂದು ವಾದ ಮಂಡಿಸುವ ಮುಸ್ಲಿಂ ಲೀಗ್ ಎಂಬ ರಾಜಕೀಯ ಪಕ್ಷದ ಭಾಗದಿಂದ ಮರ್ಹೂಮ್ ಸಂಶುಲ್ ಉಲಮಾರವರ ಫರ್ಮಾನು ಬಂದ ನಂತರವೂ ಎರಡು ಸಮಸ್ತದ ಐಕ್ಯತೆಗೆ ಬೇಕಾಗಿ ಹ್ರದಯ ತಟ್ಟುವ ಒಂದು ಪ್ರಯತ್ನ ಯಾಕಾಗಿ ನಡೆಯಲಿಲ್ಲ?
ಇದೀಗ ಸೆಯ್ಯದ್ ಜಿಫ್ರೀ ಮುತ್ತು ಕ್ಕೋಯ ತಂಙಳ್ ಹಾಗೂ ಕಾಂತಪುರಂ ಎಪಿ ಉಸ್ತಾದ್ ಜಂಟಿಯಾಗಿ ಸುನ್ನೀ ಐಕ್ಯತೆಗಾಗಿ ಆಹ್ವಾನ ನೀಡಿದ್ದು ಮಾತ್ರವಲ್ಲ ಅದರ ಸಫಲತೆಗಾಗಿ ನಾಲ್ಕು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿದಾಗಲೂ ಸಮುದಾಯದ ಫ್ಲ್ಯಾಟ್ ಫೋರ್ಮ್ ಎಂದು ಹೇಳುವ ಮುಸ್ಲಿಂ ಲೀಗ್ ಐಕ್ಯ ಆಹ್ವಾನವನ್ನು ಸ್ವಾಗತಿಸಲೂ ಕೂಡಾ ತಯ್ಯಾರಾಗದೆ ಮೌನಪಾಲಿಸಿದ್ದರ ಹಿಂದಿರುವ ಗೂಢಾಲೋಚನೆ ಆತಂಕಕಾರಿಯಾಗಿರುತ್ತದೆ.

ಸಳಪಿಗಳು ಹಲವು ಗ್ರೂಪುಗಳಾಗಿ ಛಿದ್ರವಾದಾಗ ಅವರನ್ನು ಐಕ್ಯಗೊಳಿಸಲಿಕ್ಕಾಗಿ ಇದೇ ಮುಸ್ಲಿಂ ಲೀಗ್ ಪಕ್ಷದ ನಾಯಕರು ನಿದ್ದೆ ಬಿಟ್ಟು ಕಠಿಣ ಪ್ರಯತ್ನ ಮಾಡಿದಾಗ ಯಾಕಾಗಿ ಇದೇ ನಾಯಕರು ಸುನ್ನೀ ಐಕ್ಯ ವಿಷಯದಲ್ಲಿ ಉದಾಸೀನತೆಯ ಮನೋಭಾವ ತೋರುತ್ತಿರುವುದು?

INLಸಹಿತ ರಾಜಕೀಯ ಸಂಘಟನೆಗಳು ಹಾಗೂ ಸಾಮಾನ್ಯ ಜನರು ಐಕ್ಯ ಶ್ರಮಗಳನ್ನು ಸಂತೋಷಪೂರ್ವಕ ಸ್ವಾಗತಿಸುವಾಗ ಮುಸ್ಲಿಂ ಲೀಗ್ ಅನಗತ್ಯವಾಗಿ ಜನರಲ್ಲಿ ಭೀತಿಯನ್ನುಂಟು ಮಾಡುತ್ತಾ, ಪಟ್ಟಿಕ್ಕಾಡ್ ಸಮ್ಮೆಳನದಲ್ಲಿ ಅದನ್ನು ಬಹಿರಂಗವಾಗಿ ಪ್ರದರ್ಶಿಸುವ ಮೂಲಕ ಲೀಗ್ ಸಳಪೀ ಬಾಧೆಯಿಂದ ಮುಕ್ತವಾಗಲಿಲ್ಲವೆಂದು ಮತ್ತೊಮ್ಮೆ ಪ್ರೂಫ್ ಮಾಡಿದರು!

ಸಮುದಾಯದ ಫ್ಲಾಟ್ ಫೋರ್ಮ್ ಆಗಿರುವ ಮುಸ್ಲಿಂ ಲೀಗ್ ಸಮುದಾಯದ ಭೌತಿಕ ಸಬಲೀಕರಣ ಮತ್ತು ಪ್ರಗತಿಗಾಗಿ ಅವರೆಡೆಯಲ್ಲಿ ತಾರತಮ್ಯವಿಲ್ಲದೆ ಕಾರ್ಯಚರಿಸಿದರೆ, ಮತ ಸಂಘಟನೆಗಳೆಂಬ ರೀತಿಯಲ್ಲಿ ಎರಡು ಸಮಸ್ತಕ್ಕೂ ಲೀಗ್ ನೊಂದಿಗೆ ಅಸಹಕಾರಿಸಬೇಕಾದ ಅಗತ್ಯ ಬರುವುದಿಲ್ಲ.
ಆದರೆ ಪಕ್ಷದ ನಾಯಕರಾಗಿ ಗುರುತಿಸುವ ಕೆಲವರು ಸುನ್ನಿಗಳನ್ನು ಭಿನ್ನತೆಗೆ ತಳ್ಳುತ್ತಾ, ಸಳಫಿಸಂ ನ್ನು ಬೆಳೆಸುತ್ತಿದ್ದಾರೆ.ಅದಕ್ಕಾಗಿ ಗೂಢತಂತ್ರಗಳನ್ನು ಹಣೆಯುತ್ತಿದ್ದಾರೆ.ಅದರ ವಿರುದ್ಧ ಸುನ್ನಿಗಳು ಆಕ್ರೋಶಿಸುತ್ತಿರುವುದು ಮತ್ತು ಖಂಡಿಸುತ್ತರುವುದು ತಪ್ಪಾ?

ಮುಸ್ಲಿಂ ಲೀಗ್ ಪಕ್ಷದ ನೇತೃತ್ವದ ಲ್ಲಿರುವವರನ್ನು ಕೂಡಾ ವಂಚಿಸಿ ಸುನ್ನೀ ವಿಧ್ವಾಂಸರ ತೇಜೋವಧೆ ಮಾಡಲಿಕ್ಕಾಗಿ ಸಳಫಿಸ್ಟ್ಗಳು ಹಿಂಬದಿ ಸೀಟಲ್ಲಿ ಕುಳಿತು ಕುತಂತ್ರ ಹೆಣೆದುದಕ್ಕೆ ಆದೆಷ್ಟೋ ಉದಾಹರಣೆಗಳಿವೆ.
ಸಂಶುಲ್ ಉಲಮಾ ಇಕೆ ಉಸ್ತಾದರನ್ನು ಅವಹೇಳಿಸಿ ತೇಜೋವಧೆ ಮಾಡಲಿಕ್ಕಾಗಿ ಪಕ್ಷದ ಮುಖವಾಣಿ ಚಂದ್ರಿಕಾ ಪತ್ರಿಕೆ ಯನ್ನು ಅವರು ಬಳಸಿದ್ದರು.

ಸಳಪಿಗಳು ಮುಸ್ಲಿಂ ಲೀಗನ್ನು ತಮ್ಮ ಆಶಯ ಪ್ರಚಾರಕ್ಕಾಗಿ ಬಳಸಿದ್ದರಿಂದ ಸಂಶುಲ್ ಉಲಮಾ ಇಕೆ ಉಸ್ತಾದ್ ಕಾಂಗ್ರೆಸ್ ನೊಂದಿಗೆ ಕೈಜೋಡಿಸಿ ವಡಗರ ಎಂಬ ಪ್ರದೇಶದಲ್ಲಿ ಕೆ.ಕರುಣಾಕರನೊಂದಿಗೆ ವೇದಿಕೆ ಹತ್ತಿ, ಕಾಂಗ್ರೆಸ್ ಗೆ ಬೇಕಾಗಿ ಇಕೆ ಉಸ್ತಾದ್ ಮತಯಾಚಿಸಿದ ಪ್ರಸಂಗವೂ ನಡೆಯಿತು.ಇದೆಲ್ಲದರ ಚರಿತ್ರೆ ಪುರಾವೆ ಕೈವಶವಿದೆ.

ಇಕೆ ಉಸ್ತಾದರನ್ನು ವಿರೋಧಿಸಿ ಲೀಗ್ ಪಕ್ಷದ ಅಂಕಣಗಾರ ಎಂ ಸಿ ವಡಗರ ಈ ರೀತಿ ಬರೆದ
ಕಾಂಗ್ರೆಸ್ ಮತಯಾಚನೆ ವೇದಿಕೆಗಳಲ್ಲಿ ಕಿರಾಅತ್ ಹಾಗೂ ಫಾತಿಹ ಪಾರಾಯಣ ಆರಂಭಿಸಲಾಗಿದೆ ,ಹಣ ಕೊಟ್ಟರೆ ಬಾಲ ಅಲ್ಲಾಡಿಸುವ ಧನಮೋಹಿಗಳಾದ ಕೆಲವು ಕೂಲಿ ಮೌಲಾನಗಳು ನಿಲುವಂಗಿ ಧರಿಸಿ ಕಾಂಗ್ರೆಸ್ ಸ್ಟೇಜುಗಳಲ್ಲಿ ಪ್ರತ್ಯಕ್ಷ ರಾಗುತ್ತಿದ್ದಾರೆ. ಕೇವಲ ವಾರ್ಡೊಂದರ ಉಪಚುನಾವಣೆ ರಾಷ್ಟ್ರದ ಚುನಾವಣೆಕ್ಕಿಂತಲೂ ಕಾವು ಪಡೆಯಿತು. ನೆಬಿ ಮದ್ಹಹ್ ಹಾಗೂ ಇಂದಿನ ರಾಜಕೀಯ ದಲ್ಲಿ ಮುಸ್ಲಿಮರ ಭಾದ್ಯತೆ ಏನೆಂದು ತಿಳಿಸಲು ಕರೆದ ಸಭೆಯಲ್ಲಿ ಕಾಂಗ್ರೆಸ್ ಗೆ ಮತ ಹಾಕುವುದಾಗಿದೆ ಮುಸ್ಲಿಮರ ಭಾದ್ಯತೆ ಎಂದು ಇ.ಕೆ ಅಬೂಬಕರ್ ಮುಸ್ಲಿಯಾರ್ ಹೇಳಿದರು.ಅದಕ್ಕೆ ಬೇಕಾದ ಕುರ್ಆನ್ ಆಯತ್ ಗಳನ್ನು ಮುಸ್ಲಿಯಾರ್ ತೆಗೆದುಕೊಂಡು ಬಂದಿದ್ದರು. ಮುಸ್ಲಿಯಾರರ ಪ್ರಭಾಷಣ ಹಳಿತಪ್ಪಿತ್ತು.ಮುಸ್ಲಿಯಾರ್ ಮಾಡಿದ ಭಾಷಣವೆಲ್ಲವೂ ಅಚ್ಚು ಹಾಕಲು ಅರ್ಹತೆ ಪಡೆದಿಲ್ಲವಾದರೂ ಈ ಗೆರೆಯೊಂದನ್ನು ಬರೆಯಬಹುದು.”ಮುಸ್ಲಿಂ ಲೀಗ್ ಪಕ್ಷ; ಸೀದಿ ಹಾಜಿ,ಉಪ್ಪಿ, ಸಿ. ಎಚ್ ಮುಫ್ತಿ, ನಿಲುವಂಗಿಯ ಬಾಫಖಿ ನೇತೃತ್ವದ ‘ಮುಸ್ಲಿಂ ಜನಾಬತ್’,ಆಗಿದೆ. ಆಲ್ಲದೆ ಮುಸ್ಲಿಂ ಜಮಾಅತ್ ಅಲ್ಲ”
(ಸಿ ಎಚ್ ಮುಹಮ್ಮದ್ ಕೋಯ ಜೀವಚರಿತ್ರಂ ಪೇಜ್ 297)

ನೋಡಿ….
ಇದು ಮುಸ್ಲಿಂ ಲೀಗ್ ಎಂಬ ಸಮುದಾಯ ಪಕ್ಷದ ಸಂಸ್ಕೃತಿ. ಮರ್ಹೂಂ ಸಂಶುಲ್ ಉಲಮಾರನ್ನು ಧನಮೋಹಿ,ಬಾಲ ಅಲ್ಲಾಡಿಸುವ ಪ್ರಾಣಿ,ನಿಲುವಂಗಿಯವ ಮುಂತಾದ ಅವಹೇಳನಕಾರಿ ಪದ ಉಪಯೋಗಿಸವ ಮೂಲಕ ನಿಂದಿಸಿ,ಮಹಾನುಭಾವರು ಸೆಯ್ಯದ್ ಅಬ್ದುರ್ರಹ್ಮಾನ್ ಬಾಫಖಿ ತಂಙಳ್ ರವನ್ನು ಕೆಟ್ಟ ಪದಗಳಿಂದ ಟೀಕಿಸಿದ್ದಾರೆಂದು ಈ ಪುಸ್ತಕದಲ್ಲಿ ಗೀಚಲಾಗಿದೆ.
ಮಾತ್ರವಲ್ಲ ಇದೇ ಪುಸ್ತಕಕ್ಕೆ ಸೆಯ್ಯದ್ ಮುಹಮ್ಮದಲಿ ಶಿಹಾಬ್ ತಂಙಳ್ ರವರ ಹೆಸರಲ್ಲಿ ಸಂದೇಶ ಬರಹವನ್ನು ಅಚ್ಚು ಹಾಕಲಾಗಿದೆ.
ಆದರೆ ಇ.ಕೆ ಉಸ್ತಾದರ ಬಗ್ಗೆ ತಿಳಿದಿರುವ ಯಾರೂ ಕೂಡಾ ಉಸ್ತಾದರು ಬಾಫಖಿ ತಂಙಳ್ ರವರ ಕುರಿತು ನಿಂದಿಸಿ ಬರೆಯುತ್ತಾರೆಂದೊ,ಇ.ಕೆ ಉಸ್ತಾದರ ಬಗ್ಗೆ ಕೆಟ್ಟದ್ದಾಗಿ ಬರೆದಿರುವ ಪುಸ್ತಕದ ಭಾಗ ನೋಡಿದ ನಂತರ ಶಿಹಾಬ್ ತಂಙಳ್ ಅದಕ್ಕೆ ಶುಭಹಾರೈಸಿ ಸಂದೇಶ ಬರೆದಿದ್ದಾರೆಂದೊ ಸಮ್ಮತಿಸಲು ಸಾದ್ಯವಿಲ್ಲ.

ಲೀಗ್ ಪಕ್ಷದ ಖರ್ಚಿನಲ್ಲಿ ಪ್ರಕಾಶಗೈದ ಪುಸ್ತಕದಲ್ಲಿ ಸುನ್ನೀ ಉಲಮಾಗಳನ್ನು ಅತ್ಯಂತ ಕಿಳಾಗಿ ಸಳಪಿಗಳು ತೇಜೋವಧೆ ಮಾಡಿದ್ದರು.ಇಂತಹ ಎಡಬಿಡಂಗಿ ತನವನ್ನು ಪ್ರಶ್ನಸಿದರೆ ಅದು ಲೀಗ್ ನ ಅಸ್ತಿತ್ವಕ್ಕೆ ಕೊಡಲಿಯೇಟು ಹಾಕುವುದೆಂದು ಯಾರೂ ಬಾವಿಸಬೇಡಿ.ಇದರ ಹೆಸರಲ್ಲಿ ಸುನ್ನಿಗಳು ಐಕ್ಯವಾಗುವುದರಲ್ಲಿ ಅಸಹಿಷ್ಣುತೆ ಪ್ರದರ್ಶಿಸ ಬಾರದು.
ಮುಸ್ಲಿಂ ಮಹಲ್ಲುಗಳಲ್ಲಿ,ಕುಟುಂಬ ಗಳಲ್ಲಿ, ಅವರ ಮಸೀದಿಗಳಲ್ಲಿ ಕಠಿಣವಾದ ಛಿಧ್ರತೆಯುಂಟು ಮಾಡುವುದಕ್ಕೆ ನೇತೃತ್ವ ನೀಡಿದ ವಹ್ಹಾಬಿ ನಾಯಕರನ್ನು ನವೋತ್ಥಾನ ಶಿಲ್ಪಿಗಳಾಗಿ ಚಿತ್ರೀಕರಿಸುವ ಪ್ರಯತ್ನ ಮುಸ್ಲಿಂ ಲೀಗ್ ಪಕ್ಷದ ಪರದೆಯ ಹಿಂದೆ ನಡೆಯಿತು.
ಆಡಳಿತದಲ್ಲಿ ಸಹಭಾಗಿತ್ವ ಲಭಿಸಿದ ಕಾಲಘಟ್ಟದಿಂದ ಹಿಡಿದು ಇಂದಿನವರೆಗೂ ಲೀಗ್ ಸಲಫಿಸಂ ನ್ನು ಬೆಳೆಸಲು ಸುನ್ನೀಸಂ ನ್ನು ಚಿವುಟಿ ಹಾಕಲು ಅದರಲ್ಲಿರುವ ಸಳಫಿಗಳು ಪ್ರಯತ್ನಿಸುತ್ತಾ ಇದ್ದಾರೆ.ಆದರೆ ಸುನ್ನಿಗಳಾದ ಹಲವರು ಕೇವಲ ನಿಸ್ಸಹಕಾರಿಯಾಗಿ ನೋಡಿದರೇ ವಿನಹ ಬದಲಾವಣೆ ತರಲು ಶ್ರಮಿಸಲೇ ಇಲ್ಲ.

1960 ರ ವಿಧಾನಸಭಾ ಸ್ಪೀಕರ್ ಪದವಿ ಅಲಂಕರಿಸುವ ಮೂಲಕ ಮುಸ್ಲಿಂ ಲೀಗ್ ಪಕ್ಷ ಅಧಿಕಾರದಲ್ಲಿ ಸಹಭಾಗಿತ್ವ ಪಡೆಯಿತು.ಅಂದಾಗಿದೆ ಕೇರಳ ವಖ್ಫ್ ಬೋರ್ಡ್ ರೂಪೀಕರಿಸಿದ್ದು.
ವಖ್ಫ್ ಸೊತ್ತುಗಳಲ್ಲಿ ನೂರು ಶೇಖಡಾ ಸುನ್ನಿಗಳ ಸೊತ್ತಾಗಿದ್ದು ಕೂಡಾ ಅಂದು ರಚನೆಯಾದ ವಖಫ್ ಬೊರ್ಡ್ ನ ಸದಸ್ಯರುಗಳಾಗಿ ವಹ್ಹಾಬಿಗಳನ್ನು ಮತ್ತು ಅವರನ್ನು ಹೊತ್ತುನಡೆಯುವ ಸಿಂಗಡಿಗಳನ್ನು ನೇಮಕ ಮಾಡಲಾಯಿತು.
ಇದರ ವಿರುಧ್ಧ ಸೆಯ್ಯದ್ ಬಾಫಖಿ ತಂಙಳ್ ರವರ ಪಾಂಡಿಕಾಶಾಲೆಯಲ್ಲಿ ಸೇರಿದ ಸಭೆಯಲ್ಲಿ ನಿರ್ಣಯ ಹೊರಡಿಸಿದ್ದನ್ನು ಅವಿಭಕ್ತ ಸಮಸ್ತ ಹೊರತಂದ ವಾರ್ಷಿಕ ಸುವನೀರ್ ನಲ್ಲಿ ನೋಡಬಹುದು.
ನಂತರ ಅರಬೀ ಭಾಷಾ ಕಲಿಕೆಗಾಗಿ ರಚಿಸಿದ ಪಾಠ ಪುಸ್ತಕ ಸಮಿತಿಯ ರಚಿಸಿದಾಗಲೂ ಅದರ ಎಲ್ಲಾ ಸದಸ್ಯರಾಗಿ ಮುಸ್ಲಿಂ ಲೀಗ್ ಸಲಫಿಗಳನ್ನು ಆಯ್ಕೆ ಮಾಡಿತು.
ಇದರ ಫಲವಾಗಿ ಬರೋಬ್ಬರಿ 20 ವರ್ಷಗಳಿಗಿಂತಲೂ ಹೆಚ್ಚು ಕಾಲ ಸಲಫೀ ಆಶಯವಿರುವ ಪಾಠ ಭಾಗಗಳನ್ನು ಸರಕಾರದ ಖರ್ಚಿನಲ್ಲಿ ಸುನ್ನಿಗಳ ಮಕ್ಕಳಿಗೆ ಕಲಿಸಲಾಯಿತು.
ಅರಬೀ ಅಧ್ಯಾಪಕರನ್ನು ಸ್ರೃಷ್ಟಿಸುವ ಓರಿಯಂಟಲ್ ಅರಬೀ ಕಾಲೇಜುಗಳನ್ನು ಪೂರ್ಣವಾಗಿ ಸಳಪಿಗಳ ಪಾಲಿಗೆ ನೀಡಲಾಯಿತು.ಇಂದು ಕಾಣುವ ಅಧಿಕ ಸಲಫಿ ಮೌಲವಿಗಳು ಈ ಸರಕಾರದ ಕಾಲೇಜಿನ ಪ್ರೊಡಕ್ಟ್ ಗಳಾಗಿದೆ.
ಇಂತಹ ಪಾಶ್ವೀಕರಣದ ನಿಲುವಿನೊಂದಿಗೆ ಸುನ್ನಿಗಳು ಪ್ರತಿರೋಧ ವ್ಯಕ್ತಪಡಿಸುತ್ತಾ ಇದ್ದಾರೆ.
ಇದು ಮುಸ್ಲಿಂ ಲೀಗ್ ವಿರುದ್ಧ ಚಳುವಳಿಯಾಗಿ ವ್ಯಾಖ್ಯಾನಿಸುವುದಕ್ಕೆ ಬದಲು ಸುನ್ನಿಗಳೊಂದಿಗೆ
ನ್ಯಾಯಯುತವಾಗಿ ವರ್ತಿಸುವ ಬಧ್ಧತೆ ತೋರಿಸಿ ಅವರನ್ನು ಸಹ ಐಕ್ಯಯತೆಯ ದಾರಿಗೆ ತಂದು ಸಮುದಾಯ ಸಬಲೀಕರಣಕ್ಕೆ ಲೀಗ್ ನೇತೃತ್ವ ತಯ್ಯಾರಾಗಿದ್ದರೆ ಅದೆಷ್ಟು ಒಳಿತಾಗುತ್ತಿತ್ತು.

ಆದರೆ ಇಲ್ಲಿ ಸುನ್ನಿಗಳು ಸದಾ ಭಿನ್ನತೆಯಿಂದಲೇ ಇರಬೇಕೆಂಬ ಸಳಫಿಗಳ ಆಗ್ರಹಕ್ಕೆ ಮನ್ನಣೆ ನೀಡಲಾಗುತ್ತಿದೆ.

ಸುನ್ನಿಗಳು ಐಕ್ಯದ ಕುರಿತು ಆಲೋಚನೆ ನಡೆಸಿದರೆ,ಚರ್ಚೆ ಗಳು ನಡೆಸಿದರೆ ಲೀಗ್ ನ ಮುಖವಾಣಿ ಚಂದ್ರಿಕಾ ಪತ್ರಿಕೆಯಲ್ಲಿ ಅವಿತು ಕುಳಿತಿರುವ ಸಳಪಿಗಳು,ಸಾಮಾಜಿಕ ತಾಣದಲ್ಲಿ ಅಡಗಿ ಕುಳಿತಿರುವ ವಹ್ಹಾಬಿಗಳು ಸುನ್ನಿಗಳು ಪರಸ್ಪರ ಕಾದಾಟ ಮಾಡುವಂತೆ ಪೋಸ್ಟ್ ಗಳನ್ನು ಹಾಕಿ ಭಿನ್ನತೆಗೆ ಶ್ರಮಿಸುವರು.
ಕೊನೆಯದಾಗಿ ಮುಸ್ಲಿಂ ಲೀಗ್ ರಾಜಕೀಯ ಪಕ್ಷದ ನಾಯಕರೇ ಸುನ್ನಿಗಳು ಐಕ್ಯವಾಗುವುದಕ್ಕೆ ನೀರಸ ಪ್ರತಿಕ್ರಿಯೆ ನೀಡಿದ್ದು ನಾವು ದರ್ಶಿಸಿದ್ದೆವೆ.

ಈ ಸಂದರ್ಭದಲ್ಲಿ ಎರಡು ವಿಭಾಗದ ಸುನ್ನಿಗಳು ಅತ್ಯಂತ ಜಾಗರುಕರಾಗಿ ಕಾರ್ಯಚರಿಸಬೇಕು.ರಾಜಕಾರಣಿಗಳು ಹಾಕಿದ ಗಾಳದಲ್ಲಿ ಜಿಗಿದು ದಾಳವಾಗಬೇಡಿ.ಅವರ ಮಾತು ಕೇಳಿ ಐಕ್ಯ ಶ್ರಮ ಮುರಿಯಿತೆಂದು ಬಾವಿಸಿ ಪರಸ್ಪರ ಕೆಸರೆರಚಬೇಡಿ.ಸಾಮಾಜಿಕ ತಾಣ ಅತ್ಯಂತ ಸೂಕ್ಷಮವಾಗಿ ಉಪಯೋಗಿಸದೆ ಇದ್ದಲ್ಲಿ, ಸಮುದಾಯದ ಮಧ್ಯೆ ನಾವುಂಟು ಮಾಡುವ ಗಾಯ,ಮಾರಕವಾಗಿ ನಮ್ಮಿಂದಲೇ ಒಣಗಿಸಲು ಸಾದ್ಯವಾಗದೆ ಹೋದೀತು!
ಅತ್ಯಂತ ಕ್ಷಮಾಶೀಲರಾಗಿ ಕಾಯುತ್ತಾ ಇರಿ.ಬುಧ್ಧಿವಂತಿಕೆಯ ತಂತ್ರ ಉಪಯೋಗಿಸಿರಿ ಹಖ್ಖ್(ಸತ್ಯ)ನ ಪರವಾಗಿರುವವರು ಐಕ್ಯವಾಗಿಯೇ ತೀರುವರು.
ಇನ್ಶಾಅಲ್ಲಾ…..

ಮೂಲ:sirajlive.com

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!