ನಾಳೆ ಕರ್ನಾಟಕ ಬಂದ್ ಮಾಡಿಯೇ ಸಿದ್ಧ – ವಾಟಾಳ್ ನಾಗರಾಜ್

ಕಳಸಾ ಬಂಡೂರಿ ಮಹದಾಯಿ ಜಾರಿಗೆ ಆಗ್ರಹಿಸಿ ಪ್ರಧಾನ ಮಂತ್ರಿ ಮಧ್ಯಪ್ರವೇಶಕ್ಕೆ ಒತ್ತಾಯಿಸಿ ಜ.25ರಂದು ಕರ್ನಾಟಕ ಬಂದ್‌ ನಡದೇ ನಡೆಯುತ್ತೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ತಿಳಿಸಿದರು.

ಕನ್ನಡ ಒಕ್ಕೂಟವು ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಮಹದಾಯಿ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶಕ್ಕೆ ಆಗ್ರಹಿಸಿ ಕೇಂದ್ರ ಸರಕಾರದ ವಿರುದ್ಧ ನಡೆಸಿದ ಪ್ರತಿಭಟನೆ ನಂತರ ಅವರು ಮಾತನಾಡಿದರು. ”ಉತ್ತರ ಕರ್ನಾಟಕ ಭಾಗದ ನೀರಿನ ಬವಣೆ ನೀಗಿಸುವುದಕ್ಕೋಸ್ಕರ ನಾವು ಯಾವ ತ್ಯಾಗಕ್ಕಾದರೂ ಸಿದ್ಧ . ಕರ್ನಾಟಕ ಬಂದ್‌ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕಾಗಿದೆ. ಕೇಂದ್ರ ಹಾಗೂ ಗೋವಾ, ಮಹಾರಾಷ್ಟ್ರ ಸರಕಾರಗಳಿಗೆ ಸ್ಪಷ್ಟ ಸಂದೇಶ ನೀಡಬೇಕು. ಮಹದಾಯಿಯ ನಮ್ಮ ಪಾಲಿನ ಹಕ್ಕನ್ನು ಪಡೆಯಬೇಕಿದೆ. ಅದನ್ನು ನಾವು ಪಡದೇ ಪಡೆಯುತ್ತೇವೆ ,”ಎಂದು ಹೇಳಿದರು

Leave a Reply

Your email address will not be published. Required fields are marked *

error: Content is protected !!