janadhvani

Kannada Online News Paper

ಕಾರ್ಮಿಕರ ವಾರ್ಷಿಕ ರಜಾದಿನವನ್ನು ಹೆಚ್ಚಿಸಲು ಕ್ಯಾಬಿನೆಟ್ ಅಂಗೀಕಾರ

ಕುವೈತ್ ಸಿಟಿ: ಖಾಸಗಿ ವಲಯದ ಕಾರ್ಮಿಕರ ವಾರ್ಷಿಕ ರಜಾದಿನಗಳನ್ನು 35 ದಿನಗಳಿಗೆ ಏರಿಸುವ ಯೋಜನೆಯನ್ನು ಕ್ಯಾಬಿನೆಟ್ ಅಂಗೀಕರಿಸಿದ್ದು, ಈ ಪ್ರಸ್ತಾವನೆಯನ್ನು ಸಂಸತ್ತಿನ ಆರೋಗ್ಯ ಮತ್ತು ಸಾಮಾಜಿಕ ಭದ್ರತಾ ಸಮಿತಿಯು ಅನುಮೋದಿಸಿದೆ.

ಖಾಸಗಿ ವಲಯದ ಕಾರ್ಮಿಕರ ವಾರ್ಷಿಕ ರಜಾದಿನಗಳು ಪ್ರಸ್ತುತ 30 ದಿನಗಳಾಗಿದ್ದು, ಸಂಸತ್ತಿನ ಸಮಿತಿಯು ಇದನ್ನು 35 ದಿನಗಳಾಗಿ ಹೆಚ್ಚಿಸುವ ಪ್ರಸ್ತಾಪವನ್ನು ಅನುಮೋದಿಸಿದೆ. ಸಮಿತಿಯು ಖಾಸಗಿ ಕಾರ್ಮಿಕ ಕಾನೂನಿನಲ್ಲಿ ತಿದ್ದುಪಡಿಯನ್ನು ಮಾಡುವಂತೆ ಶಿಫಾರಸು ಮಾಡಿದೆ.

ಸಂಸದ ಉಸಾಮಾ ಅಲ್ ಷಾಹೀನ್ ಈ ಬಗ್ಗೆ ಮಾತನಾಡಿ, ಪ್ರಸಕ್ತ ನಿಯಮವು ಸ್ವದೇಶೀ ಮತ್ತು ವಿದೇಶಿಯರಿಗೂ ಅನ್ವಯವಾಗುತ್ತದೆ ಎಂದು ಹೇಳಿದರು. ತಿದ್ದುಪಡಿಗಾಗಿ ಸಂಸತ್ತಿನ ಅನುಮೋದನೆ ಪಡೆಯಬೇಕಾದ ಅಗತ್ಯವಿದೆ. ಕಾನೂನಿನ ಕರಡು ಮಸೂದೆ ನಿಯಮವಾಗಿ ಚಲಾವಣೆಗೆ ಬಂದಲ್ಲಿ, ಖಾಸಗಿ ವಲಯದ ಸಾವಿರಾರು ಕಾರ್ಮಿಕರಿಗೆ ಅದು ಪ್ರಯೋಜನವಾಗಲಿದೆ.

error: Content is protected !! Not allowed copy content from janadhvani.com