ಹಾದಿಯಾ ಪ್ರಕರಣ : ವಿವಾಹ ರದ್ದುಗೊಳಿಸಲಾಗದು-ಸುಪ್ರಿಂಕೋರ್ಟ್

ನವದೆಹಲಿ,ಜ.23:- ಕೇರಳದ ಷಫಿನ್ ಜಹಾನ್ -ಹಾದಿಯಾ ಪ್ರಕರಣ ಸಂಬಂಧಿಸಿ ಮಹತ್ವದ ತೀರ್ಪು ಪ್ರಕಟಿಸಿರುವ ಸುಪ್ರೀಂ ಕೋರ್ಟ್  ವೈವಾಹಿಕ ಸ್ಥಿತಿಗತಿಯ ಬಗ್ಗೆ ತನಿಖೆ ನಡೆಸುವಂತಿಲ್ಲ ಎಂದು ಹೇಳಿದೆ.

ಹಾದಿಯಾ – ಷಫಿನ್ ಜಹಾನ್ ವಿವಾಹ ಕುರಿತಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ. ಖಾನ್ ವಿಲ್‌ಕರ್ ಮತ್ತು ಡಿ.ವೈ. ಚಂದ್ರಚೂಡ ಅವರಿದ್ದ ತ್ರಿಸದಸ್ಯ ಪೀಠದ ಮುಂದೆ ಇಂದು ವಿಚಾರಣೆ ನಡೆಯಿತು. ಹಾದಿಯಾ ಪ್ರಾಪ್ತ ವಯಸ್ಕಳಾಗಿರುವುದರಿಂದ ಆಕೆಯ ವೈವಾಹಿಕ ಸ್ಥಿತಿಗತಿಯ ಬಗ್ಗೆ ತನಿಖೆ ನಡೆಸಲು ಎನ್.ಐ.ಎ ಗೆ ಅವಕಾಶವಿಲ್ಲ . ಆದರೆ ಲವ್ ಜಿಹಾದ್ ಪ್ರಕರಣದ ಬಗ್ಗೆ ತನಿಖೆ ನಡೆಸಬಹುದು ಎಂದು ಹೇಳಿದೆ.

Leave a Reply

Your email address will not be published. Required fields are marked *

error: Content is protected !!