janadhvani

Kannada Online News Paper

ಸೌದಿ ಅರೇಬಿಯಾದಲ್ಲಿ ಈವೆಂಟ್ ವಿಸಾ ಜಾರಿ

ಜಿದ್ದಾ: ಸೌದಿಯಲ್ಲಿ ಸಂಘಟಿಸಲಾಗುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಿದ್ಧರಿರುವವರಿಗೆ ವಿಶೇಷ ವೀಸಾ ನೀಡಲು ಸೌದಿ ಸರಕಾರ ನಿರ್ಧರಿಸಿದೆ. “ಈವೆಂಟ್ ವೀಸಾ”ವನ್ನು ನೀಡಲು ಕ್ಯಾಬಿನೆಟ್ ಅನುಮೋದನೆ ಲಭಿಸಿರುವ ಸಲುವಾಗಿ ಹೊಸ ಯೋಜನೆ ಪ್ರಾರಂಭವಾಗಲಿದೆ. ವೀಸಾವನ್ನು ವಿದೇಶಾಂಗ ಸಚಿವಾಲಯ ಮತ್ತು ನ್ಯಾಷನಲ್ ಡಾಟಾ ಸೆಂಟರ್ ಜಂಟಿಯಾಗಿ ಆಯೋಜಿಸಲಿದೆ.

ಇವೆಂಟ್ ಗಳ ವಿವಿಧ ವೇದಿಕೆಗಳು ಮತ್ತು ಅವುಗಳಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು, ಎರಡು ತಿಂಗಳ ಮುಂಚಿತವಾಗಿ ರಾಷ್ಟ್ರೀಯ ಮಾಹಿತಿ ಕೇಂದ್ರ, ವಿದೇಶಾಂಗ ಸಚಿವಾಲಯಕ್ಕೆ ನೀಡಬೇಕು. ಮಾಹಿತಿಯ ಅನುಸಾರ ವಿದೇಶೀ ಎಂಬಸಿಗಳ ಮೂಲಕ ವೀಸಾವನ್ನು ಹೊಂದಿಸುವ ಕಾರ್ಯವನ್ನು ಒದಗಿಸಲಿದೆ. ವಿದೇಶಿ ದೂತಾವಾಸಗಳಿಗೆ ಮಾಹಿತಿ ಲಭಿಸಿದ 24 ಗಂಟೆಗಳ ಒಳಗೆ ವೀಸಾ ನೀಡಲಾಗುತ್ತದೆ. ಶುಲ್ಕಗಳು ಇತರ ಸಂದರ್ಶನ ವಿಸಾಗಳಿಗೆ ಅನ್ವಯವಾಗುವಂತೆ ಇವೆಂಟ್ ವಿಸಾಗಳಿಗೂ ಅನ್ವಯಿಸುತ್ತದೆ.

ರಾಜ ಅಧಿಸೂಚನೆ ಎಂ 68ರಲ್ಲಿ ಉಲ್ಲೇಖಿಸಲಾದ ಪ್ರಕಾರ ವೀಸಾ ಶುಲ್ಕ ವಿಧಿಸಲಾಗುವುದು. ಗೃಹಖಾತೆ, ವ್ಯಾಪಾರ, ಹೂಡಿಕೆ, ಮತ್ತು ಸಾಂಸ್ಕೃತಿಕ ವ್ಯವಹಾರಗಳ, ದೇಶ ಸುರಕ್ಷಾ ಪ್ರಾಧಿಕಾರ, ಸೌದಿ ಜನರಲ್ ಬಂಡವಾಳ ಪ್ರಾಧಿಕಾರ, ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ಸಹಕಾರದೊಂದಿಗೆ ಸರಳಗೊಳಿಸುವ ಯೋಜನೆಯಿದ್ದು, ಈ ಬಗ್ಗೆ ಉಂಟಾಗ ಬಹುದಾದ ಬಿಕ್ಕಟ್ಟಿನ ಕುರಿತು ಆರು ತಿಂಗಳೊಳಗೆ ವರದಿಯನ್ನು ಸಲ್ಲಿಸುವಂತೆ ವಿದೇಶಾಂಗ ಸಚಿವಾಲಯಕ್ಕೆ ಕ್ಯಾಬಿನೆಟ್ ಸೂಚಿಸಿದೆ

error: Content is protected !! Not allowed copy content from janadhvani.com