ಸುನ್ನೀ ಐಕ್ಯತೆ: ಲೀಗ್ ಪಾಳಯದಲ್ಲಿ ಯಾಕಿಷ್ಟು ಭಯ?

ಕಲ್ಲಿಕೋಟೆ(ಜನಧ್ವನಿ):ಅವಿಭಜಿತ ಸಮಸ್ತದ ಕಾಲದಿಂದಲೇ ಸಮಸ್ತ ಮತ್ತು ಮುಸ್ಲಿಂ ಲೀಗ್‌ನ ಸಂಬಂಧದ ಗತಿ ನಿರ್ಣಯಿಸುವಲ್ಲಿ ಮಹತ್ತರ ಪಾತ್ರವಹಿಸಿದ ಸ್ಥಾಪನೆಯಾಗಿದೆ ಪಟ್ಟಿಕ್ಕಾಡ್ ಜಾಮಿಯಾ ನೂರಿಯ್ಯಾ.
ಸುನ್ನಿಗಳೊಂದಿಗಿನ ತಮ್ಮ ನಿಲುವನ್ನು ಅವರು ಯಥಾವತ್ತಾಗಿ ಮತ್ತು ಕಟ್ಟುನಿಟ್ಟಾಗಿ ಪಾಲಿಸುತ್ತಾ ಬಂದಿದ್ದು ಕೂಡ ಅದೇ ಜಾಮಿಯಾ ನೂರಿಯ್ಯಾದ ವೇದಿಕೆಗಳ ಮೂಲಕವಾಗಿತ್ತು. ಅಲ್ಲಿನ ಸನದುದಾನ ಸಮ್ಮೇಳನಗಳನ್ನು ಲೀಗ್ ನಾಯಕರು ಹೈಜಾಕ್ ಮಾಡುತ್ತಾ ,ಮತ್ತು ಸುನ್ನಿಗಳೊಂದಿಗಿನ ತಮ್ಮ ನೀರಸವನ್ನು ತೋರ್ಪಡಿಸುತ್ತಾ ಬಂದಿದ್ದು ಇತ್ತೀಚಿನ ಜಾಯಮಾನವಲ್ಲ. ಸನದು ಪಡೆಯಲು ಕುತೂಹಲದಿಂದ ಕಾಯುತ್ತಾ ನೀಂತ ಉಲಮಾರನ್ನು ಬೊಟ್ಟುಮಾಡುತ್ತಾ ‘ಉಲಮಾಗಳೆಂದರೆ ವೇದವ ಹೊರುವ ಕತ್ತೆಗಳಾಗಬಾರದು’ ಎಂದು ಸಿ.ಎಚ್ ಮುಹಮ್ಮದ್ ಕೋಯಾಗೆ ಅಂದು ಹಿಯಾಲಿಸಲು ಇಂಥಹ ಒಂದು ವೇದಿಕೆ ಸಾಕ್ಷಿಯಾಗಿತ್ತು.

ಸುನ್ನೀ ಸಮ್ಮೇಳಕ್ಕೆ ಆಗಮಿಸಿ ರಾಜಕೀಯ ನಾಯಕರ ಭಾಷಣ ಕೇಳಿ ಮರಳುವ ಹೀನಾಯ ಪರಿಸ್ಥಿತಿ ಸುನ್ನಿಗಳನ್ನು ಕಾಡಿದ್ದು ಕೂಡ ಪಟ್ಟಿಕ್ಕಾಡ್ ಜಾಮಿಯಾ ನೂರಿಯಾದ ಸಮ್ಮೇಳನಗಳಲ್ಲಾಗಿತ್ತು. 70ರ ದಶಕದಲ್ಲಿ ಫೈಝಿ ಬಿರುದು ಪಡೆದ ಓರ್ವ ಗೆಳೆಯನ ತಂದೆ ಮಾರನೇ ದಿನದ ‘ ಚಂದ್ರಿಕಾ’ ಪತ್ರಿಕೆ ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದನ್ನು ಈಗಲೂ ಹೇಳುತ್ತಾರೆ. ಲೀಗ್ ನಾಯಕರ ಹೆಸರು ಮತ್ತು ಅವರ ಮಾತುಗಾರಿಕೆಯ ವಿವರಣೆ ಗಳ ನಂತರ ಅಪ್ರಧಾನ ವಿಷಯವಾಗಿ ‘ಸನದುದಾನ’ ಸಮ್ಮೇಳನ ಗೋಚರಿಸುತ್ತಿತ್ತು. ಅಲ್ಲಿ ಶಂಸುಲ್ ಉಲಮಾರಿಗೂ ಅಷ್ಟೇ ಪ್ರಾಧಾನ್ಯತೆ ನೀಡಲಾಗಿತ್ತು.

ಮರ್ಹೂಂ ಶಂಸುಲ್ ಉಲಮಾ ಈ.ಕೆ ಅಬೂಬಕ್ಕರ್ ಮುಸ್ಲಿಯಾರ್‌ರ ಭಾಷಣ ಕುರಿತು ಕೀಲಾಗಿ ಬರೆದ ವಾರ್ತೆ ನೋಡಿ ಆ ಶಿಷ್ಯ ನಿಗೆ ಅಳು ತಡೆಯಲಾಗಿರಲಿಲ್ಲ. ವರ್ಷಗಳ ನಂತರ ಲೀಗ್ ಪ್ರಥಮ ಹೋಳಾದ ವೇಳೆ ಶಂಸುಲ್ ಉಲಮಾರಂತಹ ಉಲಮಾರನ್ನು ಹೊರದಬ್ಬುವುದಕ್ಕೂ ಲೀಗ್ ನಾಯಕರಿಗೆ ಸಾಧ್ಯವಾಗಿತ್ತು ಎನ್ನುವುದನ್ನು ನೆನಸುವಾಗ, ಕಳೆದ ದಿವಸ ಜಾಮಿಯಾ ನೂರಿಯಾದ ಸಮ್ಮೇಳನದಲ್ಲಿ ಲೀಗ್ ನಾಯಕರ ಭಾಷಣದಲ್ಲಿ ಇತಿಹಾಸ ಬಲ್ಲವರಾದ ಯಾರೂ ಆಶ್ಚರ್ಯ ಪಡಲಾರರು.

ಲೀಗ್‌ನ ಹಿಡಿತದಿಂತ ತಪ್ಪಿಸಲು ಹಾತೊರೆಯುವ ಇ.ಕೆ ವಿಭಾಗ ಸಮಸ್ತ ನಾಯಕರಲ್ಲಿ ಆತ್ಮವಿಶ್ವಾಸ ಇರುವ ಉಲಮಾರಿಗೆ ಸವಾಲು ಹಾಕುತ್ತಾ ಮಾತನಾಡಿದ ಕುಞಾಲಿ ಕುಟ್ಟಿ ಸಾಹಿಬರ ಭಾಷಣವನ್ನು ಕೇಳಲಿಲ್ಲವೇ?.

ಅನುಸರಣೆ ಇಲ್ಲದ ಬಗ್ಗೆ ಮತ್ತು ಒಗ್ಗಟ್ಟಿಗೆ ಕುಂದು ಉಂಟು ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಅವರ ಮಾತುಗಳ ಸಾರ ಎಲ್ಲಿಗೆ ಮುಟ್ಟುತ್ತದೆ ಎನ್ನುವ ಬಗ್ಗೆ ವಿವರಿಸಬೇಕಾದ ಅಗತ್ಯವಿಲ್ಲ.ಸುನ್ನಿಗಳ ಮಧ್ಯೆ ಸಂಜಾತ ವಾದ ಮಾನಸಿಕ ಐಕ್ಯತೆಯನ್ನು ಅರಗಿಸಿ ಕೊಳ್ಳುವುದು ಕುಞಾಲಿ ಕುಟ್ಟಿ ಮತ್ತು ಲೀಗಿನಲ್ಲಿರುವ ಸಲಫಿ ಗ್ಯಾಂಗ್ ಗೆ ಸಾಧ್ಯವಾಗುತ್ತಿಲ್ಲ. ಅದರ ಸ್ಪಷ್ಟವಾದ ಉದಾಹರಣೆಯಾಗಿತ್ತು ಆ ಧ್ವನಿ.

ಸಮಸ್ತದ ಅಸ್ತಿತ್ವದ ಬಗ್ಗೆ ಜಿಫ್ರಿ ತಂಙಳ್ ನಡೆಸಿದ ಪರಾಮರ್ಶೆಯು ತಗುಲಬೇಕಾದ ಬಿಂದುವಿಗೆ ತಲುಪಿದೆ ಎನ್ನುವುದು ಸಾರ.
ಐಕ್ಯತೆಯ ಕುರಿತು ಉಲಮಾಗಳು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವರು ಮತ್ತು ಸಮ್ಮತಾರ್ಹವಾದ ಐಕ್ಯತೆಗೆ ಸಂಪುರ್ಣವಾಗಿ ಸಹಕಾರ ನೀಡುವೆವು ಎಂದು ತಂಙಳ್ ರು ತಮ್ಮ ಭಾಷಣದಲ್ಲಿ ಹೇಳಿದ್ದರು. ಅದರ ವಿರುದ್ದ ಕುಞಾಲಿ ಕುಟ್ಟಿ ಸಾಹಿಬ್ ತನ್ನ ಕೋಪವನ್ನು ತೋಡಿಕೊಂಡರು ಅಷ್ಟೇ.

ಏನೇ ಆಗಲಿ ಇದೆಲ್ಲವನ್ನೂ ಅರ್ಥೈಸಿದ ನಂತರ ಇ.ಕೆ ವಿಭಾಗದ ಉಲಮಾಗಳು ಲೀಗ್ ವಿರುದ್ದ ಕೆಲವು ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದಾರೆ. ಹಲತಾದ ಕೌಶಲಗಳನ್ನು ಅಪ್ಡೇಟ್‌ ಮಾಡುವ ಸಮಯ ಯಾವತ್ತೋ ಬಂದಿದೆ ಎನ್ನುವುದನ್ನು ಎಲ್ಲಾ ತಂತ್ರಜ್ಞರು ಅರಿತುಕೊಳ್ಳುವುದು ಒಳ್ಳೆಯದು. ಶಂಸುಲ್ ಉಲಮಾರನ್ನು ಹೊರಗೆ ಹಾಕಿ ಸಮಸ್ತದ ವಿರುದ್ದ ಕತ್ತಿ ಮಸೆಯಲು ಅಂದು ಸಾಹಿಬ್‌ ನ ಪಾರ್ಟಿಗೆ ಇದ್ದ ಶಕ್ತಿ ಇಂದು ಇಲ್ಲವೆಂಬುವುದು ದಿಟ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!