janadhvani

Kannada Online News Paper

‘ಮದನೀಸ್’ ಮಂಗಳೂರು ಸಮಿತಿಗೆ ನವ ಸಾರಥ್ಯ

ಮಂಗಳೂರು : ಉಳ್ಳಾಲ ಸೈಯ್ಯಿದ್ ಮದನಿ ತಂಙಳ್ ರವರ ಪಾದಸ್ಪರ್ಶದಿಂದ ಅನುಗ್ರಹಿತವಾಗಿ ಉಳ್ಳಾಲ ಮದನಿ ಅರಬಿಕ್ ಕಾಲೇಜಿನಲ್ಲಿ ಶೈಖುನಾ “ತಾಜುಲ್ ಉಲಮ”ರ ಶಿಷ್ಯರಾಗಿ ಕಲಿತು “ಮದನಿ” ಬಿರುದು ಪಡೆದು ಜಗತ್ತಿನಾದ್ಯಂತ ಸೇವೆ ಸಲ್ಲಿಸುತ್ತಿರುವ ಮದನಿಗಳ ಅಧಿಕೃತ ಸಂಘಟನೆಯಾದ “ಮದನೀಸ್ ಅಸೋಸಿಯೇಷನ್” ಇದರ ಮಂಗಳೂರು ತಾಲೂಕು ಸಮಿತಿಯು ಇತ್ತೀಚೆಗೆ ತಾಜುಲ್ ಉಲಮಾ ತೊಕ್ಕೊಟ್ಟು ಮಸ್ಜಿದ್ ನಲ್ಲಿ ಕೇಂದ್ರ ಸಮೀತಿ ಮೇಲುಸ್ತುವಾರಿಯಾಗಿ ನೇಮಿಸಲ್ಪಟ್ಟ ಜಲಾಲುದ್ದೀನ್ ಮದನಿ ಉಳ್ಳಾಲ ಇವರ ಅಧ್ಯಕ್ಷತೆಯಲ್ಲಿ ಕೂಳೂರು ಬಶೀರ್ ಮದನಿಯವರ ಉದ್ಗಾಟನೆಯೊಂದಿಗೆ ಆರ್ ಕೆ ಮದನಿ ಅಮ್ಮೆಂಬಳ ರವರ ಸ್ವಾಗತ ದೊಂದಿಗೆ ಅಬ್ದುಲ್ ರಝಾಕ್ ಮದನಿ ಮಂಜನಾಡಿ ಯವರ ದಿಕ್ಸೂಚಿ ಭಾಷಣದೊಂದಿಗೆ ಜರುಗಿತು.

ತದನಂತರ 2019-21 ರ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು ಗೌರವಧ್ಯಕ್ಷರಾಗಿ ಅಬ್ದುಲ್ ರಝಾಕ್ ಮದನಿ ಮಂಜನಾಡಿ, ನಿರ್ದೇಶಕರಾಗಿ ಹಾಜಿ ಸಲೀಮ್ ಮದನಿ ಕುತ್ತಾರ್, ಅಧ್ಯಕ್ಷರು ವಿ ಯು ಅಬ್ದುನ್ನಾಸಿರ್ ಮದನಿ ಸೂರಿಂಜೆ, ಪ್ರ.ಕಾರ್ಯದರ್ಶಿ ಮುಹಮ್ಮದ್ ಮುದ್ರಿಕ ಮದನಿ ಪಾವೂರ್, ಕೋಶಾಧಿಕಾರಿ ಅಬ್ದುಲ್ಲಾ ಮದನಿ ಕೊಮರಂಗಳ.

ಉಪಾಧ್ಯಕ್ಷರುಗಳಾಗಿ, ಹಮೀದ್ ಮದನಿ ಉಳ್ಳಾಲ, ಹಸನ್ ಮದನಿ ಉಳ್ಳಾಲ, ಅಶ್ರಫ್ ಮದನಿ ಅಡ್ಯಾರ್ ಕಣ್ಣೂರು, ಜೊತೆ ಕಾರ್ಯದರ್ಶಿಗಳಾಗಿ ಇರ್ಫಾನ್ ಮದನಿ ಪಾವೂರ್,
ಇಶ್ಹಾಕ್ ಮದನಿ ಮಂಜನಾಡಿ, ಸಿದ್ದೀಖ್ ಮದನಿ ಉರುಮಣೆ,
ಸಂಘಟನಾ ಕಾರ್ಯದರ್ಶಿ ಅಕ್ಬರ್ ಮದನಿ ನಂತೂರು, ಪತ್ರಿಕಾ ಕಾರ್ಯದರ್ಶಿ ಆರ್ ಕೆ ಮದನಿ ಅಮ್ಮೆಂಬಳ, ಕ್ಷೇಮನಿಧಿ ಚಯರ್ಮೇನ್.ಕೂಳೂರು ಬಶೀರ್ ಮದನಿ,
ಕನ್ವೀನರ್ ಜಲಾಲ್ ಮದನಿ ಉಳ್ಳಾಲ, ಹನೀಫ್ ಮದನಿ ಪೆರಿಮಾರ್, ಪಬ್ಲೀಶಿಂಗ್ ಬ್ಯೂರೋ
ಚಯರ್ಮಾನ್ ಪೂಡಲ್ ಮುಹಮ್ಮದ್ ಮದನಿ, ಕನ್ವೀನರ್, ಮುಫತ್ತಿಸ್ ಸಿದ್ದೀಖ್ ಮದನಿ
ಹಾಗೂ ತಾಜುದ್ದೀನ್ ಮದನಿ ಉಳ್ಳಾಲ, ಕಬೀರ್ ಮದನಿ ಮೂಡಶೆಡ್ಡಿಯ, ನೌಶಾದ್ ಮದನಿ ಅಡ್ಯಾರ್ ಪದವು ಆಯ್ಕೆಯಾದರು.

ಲೆಕ್ಕಪತ್ರ ಮಂಡನೆಯನ್ನು ಹೈದರ್ ಮದನಿ ಸೂರಿಂಜೆ ವಾಚಿಸಿದರು. ಮುಹಮ್ಮದ್ ಮುದ್ರಿಕ ಮದನಿ ಪಾವೂರ್ ಕೊನೆಯಲ್ಲಿ ಧನ್ಯವಾದವಿತ್ತರು.

ವರದಿ:ಆರ್.ಕೆ.ಮದನಿ ಅಮ್ಮೆಂಬಳ

error: Content is protected !! Not allowed copy content from janadhvani.com