janadhvani

Kannada Online News Paper

ಅಯೋಧ್ಯೆ ವಿವಾದ- ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಸುಪ್ರೀಂ ಸಲಹೆ

ನವದೆಹಲಿ, ಫೆ.26:- ಅಯೋಧ್ಯೆಯಲ್ಲಿಯ ಬಾಬರಿ ಮಸೀದಿ- ರಾಮಜನ್ಮಭೂಮಿ ಬಿಕ್ಕಟ್ಟನ್ನು ಮಧ್ಯವರ್ತಿಗಳ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಸುಪ್ರೀಂ ನ್ಯಾಯಪೀಠ ಇಂದು ಮತ್ತೊಮ್ಮೆ ಎರಡೂ ಪಕ್ಷಗಳಿಗೆ ಸಲಹೆ ನೀಡಿದೆ.

ಈ ಪ್ರಕರಣ ಕುರಿತಂತೆ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ನೇತೃತ್ವದ ನ್ಯಾಯಪೀಠ ಈ ಪ್ರಕರಣವನ್ನು ನ್ಯಾಯಾಲಯ ನೇಮಕದ ಮಧ್ಯವರ್ತಿಗೆ ವಹಿಸಬೇಕೆ ಎಂಬುದನ್ನು ಕುರಿತಂತೆ ಮಾರ್ಚ್ 5 ರಂದು ತೀರ್ಪು ನೀಡುವುದಾಗಿ ಹೇಳಿದೆ.ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದ 5 ಮಂದಿ ನ್ಯಾಯಮೂರ್ತಿಗಳ ಸಂವಿಧಾನ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್. ಬೊಡ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಅಬ್ದುಲ್ ನಜೀರ್ ಅವರಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ತರ್ಜುಮೆ ಮಾಡಲು ನ್ಯಾಯಪೀಠ ನ್ಯಾಯಾಲಯದ ರಿಜಿಸ್ಟಾರ್ ಅವರಿಗೆ ಸೂಚಿಸಿದೆ. ಹಾಗೂ ಈ ಕಾರ್ಯ 6 ವಾರಗಳಲ್ಲಿ ಮುಗಿಸಲು ಗಡುವು ನೀಡಿದೆ.
ಇದೇ ವೇಳೆ, ಈ ಪ್ರಕರಣದ ಎರಡೂ ಕಕ್ಷಿದಾರರಿಗೆ, ತರ್ಜುಮೆಗೊಂಡ ದಾಖಲಾತಿಗಳನ್ನು ಪರಿಶೀಲಿಸಿ, ಅಭ್ಯಂತರಗಳಿದ್ದರೆ ಅದನ್ನು 8 ವಾರಗಳ ಒಳಗೆ ನ್ಯಾಯಾಲಯದ ಮುಂದಿಡಲೂ ನ್ಯಾಯಪೀಠ ಸೂಚಿಸಿದೆ.

error: Content is protected !! Not allowed copy content from janadhvani.com