janadhvani

Kannada Online News Paper

ಕುವೈತ್ ಕೆಸಿಎಫ್ ಡೇ ಹಾಗೂ ಪ್ರತಿಭೋತ್ಸವ- ಸೌತ್ ಝೋನ್ ಚ್ಯಾಂಪಿಯನ್

ಕುವೈಟ್ ಸಿಟಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ಕೆಸಿಎಫ್ ಡೇ ಮತ್ತು “ಪ್ರತಿಭೋತ್ಸವ- 2019″ಕಾರ್ಯಕ್ರಮವು ಫೆಬ್ರವರಿ 21,22 ದಿನಾಂಕಗಳಲ್ಲಿ ಕಬದ್ ನಲ್ಲಿ ನಡೆಯ್ತು.

ಸಯ್ಯಿದ್ ಸಾದಿಕ್ ತಂಙಳ್ ರವರ ದುವಾದೊಂದಿಗೆ ಜನಾಬ್ ಯೂಸುಫ್ ಅಬ್ಬಾಸ್ ಮಂಚಿಕಲ್ ಕಿರಾಹತ್ ಪಠಿಸಿದರು.ಕೆಸಿಎಫ್ ಮಹಬುಲ ಸೆಕ್ಟರ್ ಇದರ ಅಧ್ಯಕ್ಷರಾದ ಅಹ್ಮದ್ ಬಾವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು.

ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ಉಲಮಾ ನಾಯಕರಾದ ಬಹು: ಉಮರ್ ಝುಹ್ರಿ ಉಸ್ತಾದರು ಉದ್ಘಾಟಿಸಿದರು. ಕುವೈತ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಜನಾಬ್ ಇಬ್ರಾಹಿಮ್ ವೇಣೂರ್ ಸ್ವಾಗತಿಸಿದರು.ಕೆಸಿಎಫ್ ಅಂತರರಾಷ್ಟ್ರೀಯ(INC) ಕೌನ್ಸಿಲರ್ ಜನಾಬ್ ಯಾಕೂಬ್ ಕಾರ್ಕಳ ಕೆಸಿಎಫ್ ಡೇ ಮಹತ್ವ ವಿವರಿಸಿದರು. ಕೆಸಿಎಫ್ ಕುವೈತ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಕನ್ವೀನರ್ ಬಹುಮಾನ್ಯ ಬಾದುಷ ಸಖಾಫಿ ನೇತ್ರತ್ವದಲ್ಲಿ ಪ್ರತಿಭೊತ್ಸವ ನಡೆಸಲಾಯಿತು.

ಫೆ.22 ರಂದು ಬೆಳಿಗ್ಗೆ ಯಾಸೀನ್ ಪಾರಾಯಣ ಹಾಗೂ ದುವಾದೊಂದಿಗೆ ಕಾರ್ಯಕ್ರಮ ಚಾಲನೆಗೊಂಡು,ಬಹು: ಬಾದುಷ ಸಖಾಫಿ ಅಲೈಕುಂ ಬಿಲ್ ಜಮಾಅಃ ಎಂಬ ಘೋಷಣೆಯೊಂದಿಗೆ ನಡೆಯಲಿರುವ ಸದಸ್ಯತ್ವ ಅಭಿಯಾನದ ಬಗ್ಗೆ ತಿಳಿಸಿದರು.
SYS ಬೆಂಗಳೂರು ಜಿಲ್ಲಾ ಅಧ್ಯಕ್ಷರಾದ ಬಹು:ಬಶೀರ್ ಸಅದಿ ಉಸ್ತಾದರ ನೇತ್ರತ್ವದಲ್ಲಿ ಸಂಘಟನೆಯಲ್ಲಿ ಕಾರ್ಯಕರ್ತರ ಪಾತ್ರ ಎಂಬ ವಿಷಯದಲ್ಲಿ ತರಗತಿ ನಡೆಯ್ತು.ನಂತರ ಆಟೋಟ ಸ್ಫರ್ದೆಗಳು ನಡೆಯಿತು.

ಸಯ್ಯಿದ್ ಹಸನ್ ಅಸ್ಸಖಾಫ್ ತಂಙಳ್(ಅಧ್ಯಕ್ಷರು ದಾರುಲ್ ಹುದಾ ಬೆಳ್ಳಾರೆ ತಂಬಿನಮಕ್ಕಿ)ರವರ ನೇತ್ರತ್ವದಲ್ಲಿ ಸಮಾರೋಪ ಸಮಾರಂಭ ನಡೆಯಿತು.ಬಹು: ಬಾದುಷ ಸಖಾಫಿ ಅವರ ಅಧ್ಯಕ್ಷತೆಯಲ್ಲಿ, ಕೆಸಿಎಫ್ ಅಂತರಾಷ್ಟ್ರಿಯ(INC) ಆಡಳಿತ ವಿಭಾಗದ ಕಾರ್ಯದರ್ಶಿ ಬಹು: ಹುಸೈನ್ ಎರ್ಮಾಡ್ ರವರು ಉದ್ಘಾಟಿಸಿದರು.

ವೇದಿಕೆಯಲ್ಲಿ ಬಹು: ಜಬ್ಬಾರ್ ಮದನಿ,ಇಬ್ರಾಹಿಮ್ ಸಅದಿ, ಯೂಸುಫ್ ಮಂಚಕಲ್ ಹಾಗೂ ಕೆಸಿಎಫ್ ಕುವೈತ್ ರಾಷ್ಟ್ರೀಯ ನಾಯಕರು, ಝೋನ್ ನಾಯಕರು ಉಪಸ್ಥಿತರಿದ್ದರು.

ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ನೀಡಲಾಯಿತು.ಕೆಸಿಎಫ್ ಕುವೈತ್ ಪ್ರತಿಭೊತ್ಸವ ಚ್ಯಾಂಪಿಯನ್ ಟ್ರೋಫಿ ಕುವೈತ್ ಸೌತ್ ಝೋನ್ ತನ್ನದಾಗಿಸಿಕೊಂಡಿತು.ಊಟೋಪಚಾರ ವ್ಯವಸ್ಥೆ ಕಲ್ಪಿಸಿದ ಅಹ್ಮದ್ ಬಾವ ರವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಕೆಸಿಎಫ್ ಕುವೈತ್ ರಾಷ್ಟ್ರೀಯ ಸಂಘಟನಾ ಕನ್ವೀನರ್ ಜನಾಬ್ ತೌಫೀಕ್ ಅಡ್ಡೂರ್ ಕಾರ್ಯಕ್ರಮ ನಿರೂಪಿಸಿ, ಸೌತ್ ಝೋನ್ ಕನ್ವೀನರ್ ಜನಾಬ್ ಹಸೈನಾರ್ ಮೊಂಟೆಪದವು ಧನ್ಯವಾದಗೈದರು.

error: Content is protected !! Not allowed copy content from janadhvani.com