janadhvani

Kannada Online News Paper

ಯುಎಇಯ ಕಂಪೆನಿಗಳ ಹೆಸರಲ್ಲಿ ಉದ್ಯೋಗ ಬರವಸೆ-ದೂತವಾಸ ಎಚ್ಚರಿಕೆ

ದುಬೈ: ಯುಎಇಯಲ್ಲಿನ ಕಂಪೆನಿಗಳ ಹೆಸರಲ್ಲಿ ಭಾರತೀಯ ವಲಸಿಗರಿಂದ ಕೆಲಸ ನೀಡುವುದಾಗಿ ಆಮಿಷ ನೀಡಿ ಹಣ ಕಬಳಿಸುತ್ತಿರುವ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ದುಬೈಯಲ್ಲಿನ ಭಾರತೀಯ ದೂತಾವಾಸ ಕೇಂದ್ರವು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ತಿಳಿಸಿದ್ದಾರೆ. ಉದ್ಯೋಗದ ಕೊಡುಗೆಗಳನ್ನು ನೀಡಿ ಅಭ್ಯರ್ಥಿಗಳನ್ನು ತಪ್ಪು ದಾರಿಗೆಳೆಯಲಾಗುತ್ತಿದೆ ಎನ್ನಲಾಗಿದೆ.

ಯುಎಇಯ ಅತ್ಯುತ್ತಮ ಸಂಸ್ಥೆಗಳ ಹೆಸರಿನಲ್ಲಿ ಉದ್ಯೋಗಿಗಳಿಗೆ ನಕಲಿ ಪ್ರಸ್ತಾಪ ಪತ್ರಗಳನ್ನು ಮೋಸಗಾರರು ಕಳುಹಿಸುತ್ತಿದ್ದಾರೆ. ಉತ್ತಮ ಸಂಬಳ, ವಾರ್ಷಿಕ ರಜೆ ಮತ್ತು ಆಕರ್ಷಕ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಆದರೆ, ವೀಸಾ ನಿರ್ವಹಣಾ ಖರ್ಚುಗಳನ್ನು ಅಭ್ಯರ್ಥಿಗಳೇ ವಹಿಸಬೇಕಾಗಿದ್ದು, ಪ್ರಸ್ತಾವ ಪತ್ರಕ್ಕಾಗಿ ಟ್ರಾವೆಲ್ ಏಜೆನ್ಸಿಯನ್ನು ಸಂಪರ್ಕಿಸುವಂತೆ ತಿಳಿಸಲಾಗುತ್ತದೆ.

ಅಂತಹ ಉದ್ಯೋಗ ಕೊಡುಗೆಗಳನ್ನು ನೀಡಿದರೆ, ದೂತಾವಾಸ ಕೆಂದ್ರಕ್ಕೆ ತೆರಲಿ ಆ ಬಗ್ಗೆ ಸ್ಪಷ್ಟನೆ ಪಡೆಯಬೇಕು ಎಂದು ಅಧಿಕಾರಿ ಹೇಳಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಅಂತಹ ಎರಡು ಘಟನೆಗಳು ವರದಿಯಾಗಿದೆ. Labour.dubai@mea.gov.in ಮತ್ತು cgoffice.dubai@mea.gov.in ನಲ್ಲಿ ಕೆಳಸ ಸಂಬಂಧಿತ ಸಂಶಯಗಳಿಗೆ ಉತ್ತರ ಪಡೆಯಬಹುದಾಗಿದೆ.

error: Content is protected !! Not allowed copy content from janadhvani.com