ವಿಮಾನದಿಂದ ಬಿದ್ದ ಮಲವನ್ನು ಕೊಂಡು ಹೋಗಿ ಫ್ರಿಡ್ಜ್ ನಲ್ಲಿಟ್ಟರು…!

ಜನಧ್ವನಿ – ಗುರಗಾಂವ್ ಜಿಲ್ಲೆಯ ಫಜಿಲ್ಪುರ್ ಜಿಲ್ಲೆಯ ಮೇಲೆ ಹಾರುತ್ತಿದ್ದ ವಿಮಾನದಿಂದ ಬಿದ್ದ ಮಲದಿಂದ ಜನರು ತೀವ್ರ ಆತಂಕಗೊಂಡ ಘಟನೆ ನಡೆದಿದೆ. ಕೆಲದಿನದ ಹಿಂದೆ ಆಕಾಶದಿಂದ ವಸ್ತುವೊಂದು ಕೆಳಗೆ ಬಿದ್ದಿದೆ. ಇದು ಇಡೀ ಇಲಾಖೆಯ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಇದು ಬೀಳುವ ವೇಳೆ ದೊಡ್ಡ ಶಬ್ಧ ಬಂದಿದ್ದರಿಂದ ಜನರು ಇದು ಬಾಂಬ್, ಮಿಸೈಲ್, ದೊಡ್ಡ ಕಲ್ಲು ಹೀಗೆ ತಮಗೆ ತೋಚಿದ್ದನ್ನು ಹೇಳಿ ಭಯಭೀತರಾಗಿದ್ದಾರೆ.

ಇದನ್ನು ಮೊದಲು ನೋಡಿದ ಯಾದವ್ ಎಂಬಾತ ಗ್ರಾಮದ ಮುಖ್ಯಸ್ಥರ ಬಳಿ ಓಡಿ ಬಂದು ವಿಷಯ ತಿಳಿಸಿದ್ದಾನೆ. ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದೆ. ವಸ್ತು ಬಿದ್ದ ಸ್ಥಳಕ್ಕೆ ನೋಡ ನೋಡುತ್ತಿದ್ದಂತೆ ಜನರ ಗುಂಪೇ ಹರಿದು ಬಂದಿದೆ. ಕೆಲವರು ಕಲ್ಲು ಎಂದರೆ ಮತ್ತೆ ಕೆಲವರು ದೇವರು ನೀಡಿದ ವರ ಎಂದಿದ್ದಾರೆ.

ಕೆಲವರು ಇದರ ಚೂರನ್ನು ಮನೆಗೆ ತೆಗೆದುಕೊಂಡು ಹೋಗಿ ಫ್ರಿಜ್ ನಲ್ಲಿಟ್ಟಿದ್ದಾರೆ. ಗ್ರಾಮದ ಮುಖಂಡರು ವಿಷಯವನ್ನು ಜಿಲ್ಲಾಡಳಿತ ಹಾಗೂ ಹವಾಮಾನ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ನಂತರ ಇದೊಂದು ವಿಮಾನದಿಂದ ಕೆಳಗೆ ಬಿದ್ದ ಮಾನವನ ಮಲ ಎಂಬುದು ಗೊತ್ತಾಗಿದೆ. ಶೌಚಾಲಯದಲ್ಲಿ ಹೆಪ್ಪುಗಟ್ಟಿದ್ದ ತ್ಯಾಜ್ಯವೆಂದು ಇದನ್ನು ಕರೆಯಲಾಗುತ್ತದೆ. ಸದ್ಯ ಪ್ರಯೋಗಾಲಯಕ್ಕೆ ಇದನ್ನು ಕಳುಹಿಸಲಾಗಿದ್ದು, ಇಂದು ಅಥವಾ ಇನ್ನೆರಡು ದಿನದಲ್ಲಿ ವರದಿ ಬರುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

error: Content is protected !!