janadhvani

Kannada Online News Paper

ನವದೆಹಲಿ: ಏರ್‌ ಇಂಡಿಯಾದ ಮುಂಬೈ ನಿಯಂತ್ರಣ ಕೇಂದ್ರಕ್ಕೆ ಶನಿವಾರ ವಿಮಾನ ಅಪಹರಣ ಮಾಡುವುದಾಗಿ ಬೆದರಿಕೆ ಕರೆ ಬಂದಿದ್ದು, ನಂತರ ಭದ್ರತಾ ಕ್ರಮ ಕೈಗೊಳ್ಳಲಾಯಿತು ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.

ಬೆದರಿಕೆ ಕರೆ ಬರುತ್ತಿದ್ದಂತೆ ಜಾಗೃತಗೊಂಡ ನಾಗರಿಕ ವಿಮಾನಯಾನ ಭದ್ರತಾ ವಿಭಾಗ (ಬಿಸಿಎಎಸ್‌) ಎಲ್ಲಾ ವಿಮಾನಗಳಲ್ಲಿ ಭದ್ರತೆ ಕೈಗೊಳ್ಳುವಂತೆ ಕೇಂದ್ರಿಯ ಕೈಗಾರಿಕಾ ಪಡೆಗೆ ಆದೇಶಿಸಿತು.

‘ಏರ್‌ ಇಂಡಿಯಾದ ವಿಮಾನ ನಿಲ್ದಾಣ ಕಾರ್ಯಾಚರಣಾ ನಿಯಂತ್ರಣ ಕೇಂದ್ರಕ್ಕೆ ಸಂದೇಶವೊಂದು ಬಂದಿತ್ತು. ಅದರಲ್ಲಿ ಶನಿವಾರ ವಿಮಾನವನ್ನು ಪಾಕಿಸ್ತಾನಕ್ಕೆ ಅಪಹರಣ ಮಾಡುವುದಾಗಿ ಬೆದರಿಕೆ ಒಡ್ಡಲಾಗಿತ್ತು’ ಎಂದು ಬಿಸಿಎಎಸ್‌ ತಿಳಿಸಿದೆ.

ವಿಮಾನ ನಿಲ್ದಾಣ ಭದ್ರತಾ ಘಟಕ (ಎಪಿಎಸ್‌ಯು), ವಿಮಾನಯಾನ ಭದ್ರತಾ ಸಮೂಹ (ಎಎಸ್‌ಜಿ) ಮತ್ತು ಎಲ್ಲಾ ವಿಮಾನಗಳ ಕಾರ್ಯಾಚರಣಾ ಘಟಕಗಳಲ್ಲಿ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಲಾಯಿತು.

ಎಪಿಎಸ್‌ಯು ಮತ್ತು ಎಎಸ್‌ಜಿಗಳು ಕೇಂದ್ರಿಯ ಕೈಗಾರಿಕಾ ಪಡೆಯ ಭಾಗಗಳಾಗಿವೆ.

error: Content is protected !! Not allowed copy content from janadhvani.com