janadhvani

Kannada Online News Paper

ಫೈರ್ ಸೇಫ್ಟಿ ಇಲ್ಲದ ಮಂಗಳೂರು ‘ಸಿಟಿ ಸೆಂಟರ್’ ನಲ್ಲಿ ಬೆಂಕಿ ಆಕಸ್ಮಿಕ

ಮಂಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದ ಮಂಗಳೂರಿನ ಪ್ರಸಿದ್ಧ ಸಿಟಿ ಸೆಂಟರ್ ಮಾಲ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸ್ಥಳದಲ್ಲಿ ಉಸಿರು ಗಟ್ಟಿಸುವ ವಾತಾವರಣ ನಿರ್ಮಾಣವಾಗಿತ್ತು.

ಕೆ.ಎಸ್ ರಾವ್ ರಸ್ತೆಯಲ್ಲಿರುವ ಸಿಟಿ ಸೆಂಟರ್ ಮಾಲ್‍ನ ಮಾಲ್‍ನ ನಾಲ್ಕನೇ ಮಹಡಿಯಲ್ಲಿವ ಫುಡ್ ಕೋರ್ಟಿನಲ್ಲಿ ಶಾರ್ಟ್ ಸರ್ಕ್ಯೂಟ್‌ ಆಗಿ ಈ ಅಗ್ನಿ ಅನಾಹುತವಾಗಿದ್ದು, ಮಾಲ್ ತುಂಬೆಲ್ಲ ಹೊಗೆ ಆವರಿಸಿಕೊಂಡ ಪರಿಣಾಮ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು.

ಅಗ್ನಿ ಅವಘಡ ಸಂಭವಿಸಿದ ಕೂಡಲೇ ಮಾಲ್‍ನಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದ ಸಾವಿರಾರು ಸಿಬ್ಬಂದಿಯನ್ನು ಹಾಗೂ ಜನರನ್ನು ಪೊಲೀಸರು ಹೊರಕ್ಕೆ ಕಳುಹಿಸಿದರು. ಸ್ಥಳಕ್ಕೆ 3 ಅಗ್ನಿಶಾಮಕ ದಳದ ವಾಹನ ಆಗಮಿಸಿ ಬೆಂಕಿ ನಂದಿಸಿವೆ.

ಸಿಟಿ ಸೆಂಟರ್ ಮಾಲ್ ಆರಂಭಗೊಂಡು ಏಳೆಂಟು ವರ್ಷಗಳೇ ಕಳೆದರೂ ಇಂದಿನವರೆಗೂ ಈ ಮಳಿಗೆಗೆ ಫೈರ್ ಸೇಫ್ಟಿ ಕ್ಲಿಯರೆನ್ಸ್ ಅನ್ನು ಅಗ್ನಿಶಾಮಕ ಇಲಾಖೆ ನೀಡಿಲ್ಲ.

ಅಧಿಕಾರಿಗಳ, ಜನಪ್ರತಿನಿಧಿಗಳ ಶಿಫಾರಸ್ಸಿನ ಮೇಲೆ ಇಂದಿನವರೆಗೂ ನಡೆದುಕೊಂಡು ಬಂದಿರುವ ಈ ಮಳಿಗೆಯಲ್ಲಿ ಇದೀಗ ಬೆಂಕಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಸಂಪೂರ್ಣ ಬಂದ್ ಆಗಿರುವ ಈ ಮಳಿಗೆಯಲ್ಲಿ ಬೆಂಕಿ ಅವಘಡ ಸಂಭವಿಸಿದಲ್ಲಿ ಅಗ್ನಿಶಾಮಕ ದಳಕ್ಕೂ ಕಂಟ್ರೋಲ್ ಮಾಡಲಾರದಂತಹ ಸ್ಥಿತಿಯಿರುವ ಕಾರಣ ಅಗ್ನಿಶಾಮಕ ದಳ ಇಂದಿನವರೆಗೂ ಈ ಮಳಿಗೆಗೆ ಫೈರ್ ಸೇಫ್ಟಿ ಕ್ಲಿಯರೆನ್ಸ್ ನೀಡಿಲ್ಲ.

error: Content is protected !! Not allowed copy content from janadhvani.com