ಗಾಂಧೀಜಿಯ ನಾಡಲ್ಲಿ ಹೀರೊ ಗಳಾಗುತ್ತಿರುವ ‘ಗೋಡ್ಸೆ’ಗಳು – ದೇವನೂರು ಮಹಾದೇವ

ಜನಧ್ವನಿ – ದೇಶದಲ್ಲಿ ಪೇಶ್ವೆ ರೀತಿ ಆಡಳಿತ ನಡೆಯುತ್ತಿದೆ. ಗಾಂಧೀಜಿ ನಾಡಲ್ಲಿ ಗೋಡ್ಸೆ ಹೀರೋ ಆಗುತ್ತಿದ್ದಾನೆ ಎಂದು ಸಾಹಿತಿ ದೇವನೂರು ಮಹದೇವ್ ಅವರು ರಾಜಕೀಯ ಪಕ್ಷಗಳ ವಿರುದ್ಧ ಕಿಡಿಕಾರಿದರು. ಸ್ವರಾಜ್ ಇಂಡಿಯಾ ಪಕ್ಷ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ನಡೆದುಕೊಂಡಿಲ್ಲ. ನಿರೀಕ್ಷಿತ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಿಲ್ಲ. ಇದರಿಂದ ಯುವಕರು ಸಮಸ್ಯೆಗೆ ಸಿಲುತ್ತಿದ್ದಾರೆಂದು ಹೇಳಿದರು.

ಪ್ರಧಾನಿ ಮೋದಿ ಅವರು ವಚನಭ್ರಷ್ಟರಾಗಿದ್ದಾರೆ. ಕಾಂಗ್ರೆಸ್ ಪಕ್ಷದವರು ಇದಕ್ಕೆ ಹೊರತಾಗಿಲ್ಲ. ಅವರು ಭರವಸೆ ನೀಡುತ್ತಾರೆ ಆದರೆ ಜಾರಿಗೆ ತರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು,ಇಂತಹ ಸ್ಥಿತಿಯಲ್ಲಿ ಹೊಸ ರಾಜಕೀಯ ಶಕ್ತಿಯ ಅಗತ್ಯವಿದೆ ಎಂದರು

Leave a Reply

Your email address will not be published. Required fields are marked *

error: Content is protected !!