ಟಿಪ್ಪು ಸುಲ್ತಾನ್ ರನ್ನು ಹೊಗಳಿದ ರಾಷ್ಟ್ರಪತಿ ಯವರ ಭಾಷಣ ತಯಾರು ಮಾಡಿದವರು ಯಾರು ಗೊತ್ತೇ?

ಇತ್ತೀಚೆಗೆ ನಡೆದ ವಿಧಾನಸೌಧದ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಸದನವನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಂದರ್ಭ ನೆಲ, ಜಲ, ಸಂಸ್ಕೃತಿ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಕೊಂಡಾಡುತ್ತಾ, ಟಿಪ್ಪು ಸುಲ್ತಾನ್‌ ರ ಸಾಧನೆ ಮತ್ತು ಶೌರ್ಯವನ್ನು ಸ್ಮರಿಸಿದ್ದು, ಟಿಪ್ಪು ಸುಲ್ತಾನ್ ಓರ್ವ ಕ್ಷಿಪಣಿ ಜನಕ, ಅದನ್ನು ಯುರೋಪಿಯನ್ನರು ಕೂಡಾ ತಮ್ಮ ತಂತ್ರಜ್ಞಾನದಲ್ಲಿ ಅಳವಡಿಸಿಕೊಂಡಿದ್ದರು. ಟಿಪ್ಪು ಸುಲ್ತಾನ್ ‘ಅಪ್ರತಿಮ ವೀರನಾಗಿದ್ದರು’ ಬ್ರಿಟಿಷರ ವಿರುದ್ಧ ಹೋರಾಡುತ್ತಲೇ ವೀರ ಮರಣವನ್ನಪ್ಪಿದರೆಂದು ಹಾಡಿ ಹೊಗಳಿದ್ದರು.

ಕರ್ನಾಟಕ ಮೂಲದ ಪಿ ಆದಿತ್ಯ ನಾರಾಯಣ್ ಎನ್ನುವವರು ಈ ಕುರಿತು ಮಾಹಿತಿ ಕೋರಿ ರಾಷ್ಟ್ರಪತಿ ಭವನಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರಪತಿ ಭವನದ ಮೂಲಗಳು, ಕರ್ನಾಟಕ ವಿಧಾನಸೌಧದಲ್ಲಿ ರಾಷ್ಟ್ರಪತಿಗಳು ಮಾಡಿದ್ದ ‘ಭಾಷಣವನ್ನು ತಯಾರಿಸಿದ್ದು ರಾಷ್ಟ್ರಪತಿಗಳ ಸೆಕ್ರೆಟರಿಯೇಟ್’ ಎಂಬ ಮಾಹಿತಿ ಲಭ್ಯವಾಗಿದೆ.ವಿಧಾನಸಭೆಯ ಸಚಿವಾಲಯದ ಕರಡನ್ನು ಉಪಯೋಗಿಸಿಕೊಂಡು ರಾಷ್ಟ್ರಪತಿ ಭವನದ ಸೆಕ್ರೆಟರಿಯೇಟ್ ಈ ಭಾಷಣವನ್ನು ಸಿದ್ಧಪಡಿಸಿರುವುದು ರಾಷ್ಟ್ರಪತಿ ಭವನವೇ ಖಚಿತಪಡಿಸಿದೆ.

Leave a Reply

Your email address will not be published. Required fields are marked *

error: Content is protected !!