janadhvani

Kannada Online News Paper

ಐದು ತಿಂಗಳಲ್ಲಿ 35 ಲಕ್ಷ ಉಮ್ರಾ ಯಾತ್ರಾರ್ಥಿಗಳ ಆಗಮನ-ಸಚಿವಾಲಯ

ಜಿದ್ದಾ: ಈ ಬಾರಿಯ ಉಮ್ರಾ ಯಾತ್ರೆ ಆರಂಭಿಸಿ,ಈವರೆಗೆ ಮೂವತ್ನಾಲ್ಕು ಲಕ್ಷ ಉಮ್ರಾ ಯಾತ್ರಿಕರು ಸೌದಿಗೆ ತಲುಪಿರುವುದಾಗಿ ಸಚಿವಾಲಯ ತಿಳಿಸಿದೆ.

ಕಳೆದ ಐದು ತಿಂಗಳುಗಳಲ್ಲಿ ಸುಮಾರು 34 ಲಕ್ಷಕ್ಕೂ ಮಿಕ್ಕಿದ ವಿದೇಶೀ ಯಾತ್ರಾರ್ಥಿಗಳು ಆಗಮಿಸಿದ್ದಾರೆ. ಪಾಕಿಸ್ತಾನ ಮತ್ತು ಇಂಡೋನೇಷ್ಯಾದ ನಂತರ, ಹೆಚ್ಚಿನ ಉಮ್ರಾ ಯಾತ್ರಿಗಳು ಭಾರತೀಯ ಮೂಲದವರಾಗಿದ್ದಾರೆ.

ಈ ವರ್ಷದ ಉಮ್ರಾ ಯಾತ್ರೆಯು 2018 ಸೆಪ್ಟೆಂಬರ್ 11ರಿಂದ ಪ್ರಾರಂಭವಾಗಿದ್ದು, ಅಲ್ಲಿಂದ ಎರಡು ದಿನಗಳ ಮುಂಚಿನ ವರೆಗರ 35 ಲಕ್ಷಕ್ಕೂ ಹೆಚ್ಚು ಉಮಾರಾ ಯಾತ್ರಿಕರು ಮಕ್ಕಾಗೆ ತಲುಪಿದ್ದಾರೆ.

ಸೌದಿ ದೂತಾವಾಸ ಮತ್ತು ವಿದೇಶದಲ್ಲಿನ ಎಂಬಸಿಗಳ ಮೂಲಕ 39 ಮಿಲಿಯನ್ ವೀಸಾಗಳನ್ನು ಹೊರಡಿಸಲಾಗಿದೆ.
ಮೂರು ಲಕ್ಷ ಎಪ್ಪತ್ತೈದು ಸಾವಿರ ಯಾತ್ರಿಕರು ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ್ದಾರೆ.

error: Content is protected !! Not allowed copy content from janadhvani.com