janadhvani

Kannada Online News Paper

ಕಣ್ಣೂರು-ದೋಹಾ: ಇಂಡಿಗೋದಿಂದ ದೈನಂದಿನ ಹಾರಾಟ

ದೋಹಾ: ಕಣ್ಣೂರು-ದೋಹಾ ಸೆಕ್ಟರ್ನಲ್ಲಿ ಹೆಚ್ಚಿನ ಸೇವೆಗಳನ್ನು ಪ್ರಾರಂಭಿಸಲು ವಿಮಾನ ಕಂಪನಿಗಳು ಯೋಜಿಸುತ್ತಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ತನ್ನ ಹೊಸ ಸೇವೆಯನ್ನು ಏಪ್ರಿಲ್ 1 ರಿಂದ ಆರಂಭಿಸಲಿದೆ.ಖಾಸಗಿ ವಿಮಾನ ಕಂಪೆನಿಯಾದ ಇಂಡಿಗೊ ತನ್ನ ಕಣ್ಣೂರು-ದೋಹಾ ದೈನಂದಿನ ಸೇವೆಯನ್ನು ಮಾರ್ಚ್ ನಲ್ಲಿ ಆರಂಭಿಸಲಿದೆ.

ಪ್ರಸ್ತುತ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಾರದಲ್ಲಿ ನಾಲ್ಕು ಯಾನಗಳನ್ನು ದೊಹಾ-ಕಣ್ಣೂರು ಮಾರ್ಗದಲ್ಲಿ ನಿರ್ವಹಿಸುತ್ತಿದ್ದು, ಕಂಪನಿಯು ಅದನ್ನು ಐದಕ್ಕೇರಿಸಲು ಯೋಚಿಸಿದೆ. ಹೊಸ ಸೇವೆಯು ಏಪ್ರಿಲ್ ಮೊದಲ ವಾರದಿಂದ ಪ್ರಾರಂಭವಾಗಲಿದ್ದು, ಈ ಮೂಲಕ ಕಣ್ಣೂರಿನಿಂದ ದೋಹಾಕ್ಕೆ ಏರ್ ಇಂಡಿಯಾ ವಾರಕ್ಕೆ ಐದು ಹಾರಾಟಗಳನ್ನು ನಡೆಸಲಿದೆ.

ಶನಿವಾರ, ಸೋಮವಾರ, ಮಂಗಳವಾರ, ಬುಧವಾರ ಮತ್ತು ಶುಕ್ರವಾರಗಳಲ್ಲಿ ಏರ್ ಇಂಡಿಯಾ ಕಾರ್ಯನಿರ್ವಹಿಸಲಿದೆ. ಕಂಪನಿಯು ಪ್ರಯಾಣಿಕರ ಟಿಕೆಟ್ ದರವನ್ನು ಕಡಿತಗೊಳಿಸುವ ಬಗ್ಗೆಯೂ ಚಿಂತಿಸುತ್ತಿದೆ.

ಈ ಮಧ್ಯೆ ಕಣ್ಣೂರು ದೋಹಾ ವಲಯದಲ್ಲಿ ದೈನಂದಿನ ಸೇವೆಯನ್ನು ಒದಗಿಸಲು ಇಂಡಿಗೊ ನಿರ್ಧರಿಸಿದೆ. ಮಾರ್ಚ್ 15 ರಂದು ಸೇವೆ ಪ್ರಾರಂಭವಾಗಲಿದ್ದು, ದೋಹಾದಿಂದ ರಾತ್ರಿ 10:05ಕ್ಕೆ ಹೊರಡುವ ವಿಮಾನವು ಬೆಳಗ್ಗೆ 4.55 ಕ್ಕೆ ಕಣ್ಣೂರ್ ತಲುಪಲಿದೆ. ಅದೇ ರೀತಿ ಕಣ್ಣೂರ್‌ನಿಂದ ಬೆಳಿಗ್ಗೆ 7:05 ಕ್ಕೆ ಹೊರಟು,ಖತಾರ್ ಸಮಯ ಬೆಳಿಗ್ಗೆ 9.05ಕ್ಕೆ ದೋಹಾ ತಲುಪಲಿದೆ.
ದೋಹಾದಿಂದ ಇದು ಇಂಡಿಗೋದ 9ನೇ ಸೇವೆಯಾಗಿದ್ದು, ಕಣ್ಣೂರಿನ ಸೇವೆ ಆರಂಭಿಸುವ ಬಗ್ಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದ ಕಾರಣದಿಂದಾಗಿ ಇಂಡಿಗೋ ಈ ಸೇವೆಗೆ ಮುಂದಾಗಿದೆ.

error: Content is protected !! Not allowed copy content from janadhvani.com