janadhvani

Kannada Online News Paper

ಒಮಾನ್: ಕೆಸಿಎಫ್ ಡೇ ಆಚರಣೆ

ಮಸ್ಕತ್: ಕೆಸಿಎಫ್ ಡೇ ಹಾಗೂ ಮೆಂಬರ್ಶಿಪ್ 2019 ಕ್ಯಾಂಪೈನ್ ಕಾರ್ಯಾಗಾರವು ಕೆಸಿಎಫ್ ಒಮಾನ್ ಮಸ್ಕತ್ ಝೋನ್ ವತಿಯಿಂದ
ಗೊಬ್ರ ಮದ್ರಸತುಲ್ ಹುದಾ ದಲ್ಲಿ ಫೆಬ್ರವರಿ 15 ಶುಕ್ರವಾರರಂದು ಝೋನ್ ಅಧ್ಯಕ್ಷರಾದ ಮುಕ್ತಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸೈಫುದ್ದೀನ್ ತಂಗಳ್ ಎರುಮಾಡ್ ಇವರ ದುಆ ದೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಮುಸ್ತಫಾ ಸಖಾಫಿ ಉದ್ಘಾಟಿಸಿದರು.

ಪ್ರಸ್ತುತ ಸಭೆಯಲ್ಲಿ ಕೆಸಿಎಫ್ ನ್ಯಾಷನಲ್ ಸೆಕ್ರೆಟರಿ ಹನೀಫ್ ಸಅದಿ ಕೆಸಿಎಫ್ ನಡೆದುಬಂದ ಹಾದಿಯನ್ನು ಹಾಗೂ ಧ್ಯೇಯ ವನ್ನು ಸವಿಸ್ತಾರವಾಗಿ ವಿವರಿಸಿದರು,ಸಭೆಯಲ್ಲಿ ಗಾಲ,ಅಸೈಬ,ರುವಿ,ಅಮೆರಾತ್ ಸೆಕ್ಟರ್ ಪಧಾದಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಸಲೀಂ ಮಿಸ್ಬಾಹಿ ಹಾಗೂ ಕಲಂದರ್ ಬಾವ ಹುಸ್ನಿ ಮತ್ತು ಉಬೈದುಲ್ಲಾ ಸಖಾಫಿಯವರು ಕೆಸಿಎಫ್ ಡೇ ಯ ಮಹತ್ವವನ್ನು ವಿವರಿಸಿದರು.ಮಸ್ಕತ್ ಝೋನ್ ಸದಸ್ಯತ್ವ ಅಭಿಯಾನ ನಿರ್ದೇಶಕರಾಗಿ ಇರ್ಫಾನ್ ಗೊಬ್ರ ಇವರನ್ನು ಆರಿಸಲಾಯಿತು.

ಕೊನೆಯಲ್ಲಿ ಸೆಯ್ಯಿದ್ ಝೈನುಲ್ ಆಬಿದೀನ್ ತಂಗಳ್ ಎನ್ಮೂರ್ ರವರ ದುಆ ಹಾಗೂ ನಸೀಅತ್ತ್ ಕಾರ್ಯಕರ್ತರ ಮನತುಂಬಿಸಿತು.ಹಾಗೂ ಸೆಯ್ಯಿದ್ ರವರನ್ನು ಸಭೆಯಲ್ಲಿ ಗೌರವಿಸಲಾಯಿತು.

ದ್ವಿತೀಯ ಹಂತದ ಅಸ್ಸುಫ್ಫಾ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ರಫೀಖ್ ಸಸ್ತಾನ , ದ್ವೀತಿಯ ಸ್ಥಾನ ಪಡೆದ ನವಾಜ್ ಮಣಿಪುರ ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು.

ಹಾಗೂ ಕೆಸಿಎಫ್ ಪ್ರತಿಭೋತ್ಸವ 2018 ರ ಸ್ವಾಗತ ಸಮಿತಿ ಕಣ್ವೀನರ್ ಅಬ್ಬಾಸ್ ಮರಕಡ ಸುಳ್ಯ ಇವರನ್ನು ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ನಾಯಕರುಗಳಾದ ಇಬ್ರಾಹಿಮ್
ಅತ್ರಾಡಿ ಹಾಜಿ,ಸೆಮೀರ್ ಉಸ್ತಾದ್,ಗಫ್ಫಾರ್ ನಾವುಂದ ಹಾಜಿ,ಆರಿಫ್ ಕೊಡಿ, ಸಂಶುದ್ದೀನ್ ಪಾಲ್ತಡ್ಕ ಇವರು ಸಂದರ್ಭೊಚಿತವಾಗಿ ಮಾತನಾಡಿದರು. ಸಕ್ರೀಯ ಕಾರ್ಯಕರ್ತರಾದ ವಾಸಿಂ ಗಾಲ,ಇರ್ಫಾನ್ ಗೊಬ್ರ,ಹನೀಫ್ ಅಂರಾತ್,ಲತೀಫ್ ತೋಡಾರ್ ರುವಿ ಅವರ ಕೆಸಿಎಫ್ ಅನುಭವವನ್ನು ಹಂಚಿದರು.ಆರಂಭದಲ್ಲಿ ಖಾಸಿಂ ಪೊಯ್ಯತಬೈಲು ಸ್ವಾಗತಿಸಿ ಕೊನೆಗೆ ನವಾಜ್ ಮಣಿಪುರ ವಂದಿಸಿದರು.

error: Content is protected !! Not allowed copy content from janadhvani.com