ದುಬೈ: ಧೂಮಪಾನ ಆರೋಗ್ಯ ಮತ್ತು ಜೇಬಿಗೂ ಹಾನಿಕಾರಕವಾಗಲಿದೆ ಜೋಕೆ!

ದುಬೈ: ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎನ್ನುವ ಎಚ್ವರಿಕೆಯನ್ನು ಕಡೆಗಣಿಸಿದರೆ ಅದು ನಿಮ್ಮ ಜೇಬಿಗೂ ಕತ್ತರಿ ಹಾಕಬಲ್ಲದು. ನೀವು ಸೇದಿ ಬಿಸಾಡಿದ ಸಿಗರೇಟಿಗೆ 500 ದಿರ್‌ಹಂ ದಂಡ ಪಾವತಿಸಬೇಕಾಗುವಂತಹ ಅಪರಾಧವಾಗಿದೆ ಎಂದು ದುಬೈ ಮುನಿಸಿಪಾಲಿಟಿ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ದುಬೈ ನಗರದ ರಸ್ತೆಗಳು, ಬೀದಿಬದಿ, ಪಾರ್ಕುಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದಿ ಬಿಸಾಡಿದರೆ ನೀವು 500 ದಿರ್ಹಂ ದಂಡ ಪಾವತಿಸ ಬೇಕಾಗುತ್ತದೆ.
ಪ್ರಾದೇಶಿಕ ಆಜ್ಞೆ ಸಂಖ್ಯೆ 11/2003 ರನ್ವಯ ದಂಡ ಈಡುಮಾಡಲಾಗುತ್ತದೆ ಎಂದು ಮುನಿಸಿಪಾಲಿಟಿ ವ್ಯಕ್ತಪಡಿಸಿದೆ.

ನಗರವನ್ನು ಸ್ವಚ್ಛವಾಗಿ ಕಾಪಾಡುವ ಉದ್ದೇಶದಿಂದ ಈ ನಿಲುವನ್ನು ತಾಳಲಾಗಿದೆ.
ವಾಹನ ಚಲಾಯಿಸುವ ವೇಳೆ ಮತ್ತು ಶಾಪಿಂಗ್ ನಡೆಸುವ ವೇಳೆ ಸೀಗರೇಟ್ ಸೇದುಗರು ಅದರ ವೇಸ್ಟ್ ನ್ನು ಬಿಸಾಡದಂತೆ ಎಚ್ಚರ ವಹಿಸಿದರೆ ದಂಡದಿಂದ ಪಾರಾಗಬಹುದು. ಅನ್ಯತಾ ನಿಮ್ಮ ಜೇಬಿಗೂ ಅದು ಹಾನಿಕಾರಕವಾಗಿ ಪರಿಣಮಿಸಬಹುದು.

Leave a Reply

Your email address will not be published. Required fields are marked *

error: Content is protected !!