janadhvani

Kannada Online News Paper

ಸುನ್ನತ್ ಜಮಾಅತ್ತಿನ ಕರ್ಮಧೀರ ಯೋಧರ ಪಡೆ ಕೆಸಿಎಫ್ ಗಿಂದು ಆರರ ಸಂಭ್ರಮ

ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ

ಸುಂದರವಾದ ಇಸ್ಲಾಮಿನ ತತ್ವ ಆದರ್ಶಗಳನ್ನು ಬದಿಗೊತ್ತಿ ಇಸ್ಲಾಮಿನ ಶತ್ರುಗಳಾದ ಯಹೂದ್ಯರಿಂದ ದತ್ತು ಪಡೆದ ವಹ್ಹಾಬಿ ಆಶಯವನ್ನು ಸ್ವೀಕರಿಸಿ,ಪಾಶ್ಚಾತ್ಯ ಸಂಸ್ಕೃತಿಗೆ ಹೊಂದಿಕೊಂಡು ಬದುಕುತ್ತಿದ್ದ ಆಧುನಿಕ ಅರಬ್ ಜಗತ್ತಿನಲ್ಲಿ ಕೊನೆಯುಸಿರೆಳೆಯುತ್ತಿದ್ದ ನೈಜ ಇಸ್ಲಾಮಿಕ್ ತತ್ವ ಸಿದ್ದಾಂತವನ್ನು ಪ್ರಚಾರ ಪಡಿಸುತ್ತಾ, ಇತ್ತ ತವರಿನಲ್ಲಿ ಕಾರ್ಯಚರಿಸುತ್ತಿರುವ ಸಂಘ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಯಲ್ಲಿ ತಮ್ಮದೇ ಆದ ಸಹಾಯ ಸಹಕಾರವನ್ನು ನೀಡುತ್ತ, ಧಾರ್ಮಿಕತೇಯ ಗಂಧಗಾಳಿ ಇಲ್ಲದೆ ಇಸ್ಲಾಮಿನ ಬಾಲ ಪಾಠವೇ ಗೊತ್ತಿಲ್ಲದೆ ಅಂಧಕಾರದಲ್ಲಿ ಮುಳುಗಿ ಅನಿಸ್ಲಾಮಿಕ ಆಚರಣೆಗಳನ್ನು ಮಾಡುತ್ತಾ ಬದುಕುತ್ತಿದ್ದ. ಉತ್ತರ ಕರ್ನಾಟಕದ ಮುಸ್ಲಿಮರ ಧಾರ್ಮಿಕ-ಲೌಕಿಕ ಶಿಕ್ಷಣಕ್ಕಾಗಿ ಅವಿಶ್ರಾಂತ ಹಗಲಿರುಳು ಶ್ರಮಿಸುತ್ತಿರುವ ಇಹ್ಸಾನ್ ದಾಯಿಗಳ ಬೆನ್ನೆಲುಬಾಗಿ, ಸ್ವಂತ ಕುಟುಂಬದ ಬೇಕು ಬೇಡಗಳನ್ನು ಪೂರೆಯಿಸುತ್ತ,ಕಷ್ಟಪಟ್ಟು ದುಡಿಯುತ್ತಿರುವ ಪ್ರವಾಸಿ ಸಹೋದರರ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಗಿಂದು (ಫೆ 15) ಆರರ ಸಂಭ್ರಮ.

ಬೆರಳೆಣಿಕೆಯ ವರ್ಷದಲ್ಲಿ ಝಿಕ್ರ್ , ಸ್ವಲಾತ್ ಮಜ್ಲಿಸ್ , ಮಹ್ಲರತುಲ್ ಬದ್ರಿಯ , ರಜಬ್ ಶಹಬಾನ್ ರಮಳಾನ್ , ಮೊಹರ್ರಂ ಸಂದೇಶ ಈದ್ ಮಿಲಾದ್ ಸ್ನೇಹ ಸಂಗಮ , ಅಸ್ಸುಫ್ಫ ತರಗತಿಗಳು , ಹಜ್ಜಾಜಿಗಳ ಸೇವೆ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ನಡೆಸುತ್ತ. ಧಾರ್ಮಿಕ ಕ್ರಾಂತಿಯನ್ನೆ ಸೃಷ್ಟಿಸಿದೆ.
ಜಿಸಿಸಿ ರಾಷ್ಟ್ರವಲ್ಲದೆ ಮಲೇಶ್ಯ, ಲಂಡನ್ ನ್ಯೂಜಿಲ್ಯಾಂಡ್ ಸಹಿತ ಯುರೋಪಿನದಿತ್ಯಂತ. ಇಸ್ಲಾಮಿನ ಶಾಂತಿಯ ಸಂದೇಶವನ್ನು ಸಾರುತ್ತ ಧರ್ಮ ಕ್ರಾಂತಿಯ ಕಹಳೆ ಮೂಲಗಿಸುತ್ತ ಸಂಘಟನೆಯ ಬೇರುಗಳನ್ನು ಗಟ್ಟಿಗೊಳಿಸುತ್ತ ಇದೆ.
ಹಿಂದೆ ಗಲ್ಪಿಗೆ ಹೋದವರು ಮರಳಿ ಊರಿಗೆ ಬರುವಾಗ ನೂತನವಾದದ ಮಹಾಮಾರಿ ಸೋಂಕು ರೋಗಕ್ಕೆ ತುತ್ತಾಗಿ ಈಮಾನ್ ನಷ್ಟಪಡಿಸುತ್ತಿದ್ದರು. ಅಲ್ಹ್ಂದುಲಿಲ್ಲಾಹ್ ಈಗ ಕಾಲ ಬದಲಾಗಿದೆ ಕೆಸಿಎಫ್ ಉದಯಿಸಿದ ನಂತರ ಗಲ್ಪಿಗೆ ಹೋದರೂ ಮರಳಿ ಬರುವಾಗ ಕೆಸಿಎಫ್ ನಿಂದಾಗಿ ಅಪ್ಪಟ ಸುನ್ನಿಯಾಗಿಯೇ ಉಳಿಯುವಂತಾಗಿದೆ. ವಿಶ್ವದ ಅಗ್ರಗಣ್ಯ ವಿದ್ವಾಂಸರಾದ ಸುಲ್ತಾನುಲ್ ಉಲಮಾರ ನೇತೃತ್ವದಲ್ಲಿ ಕೆಸಿಎಫ್ ನಂತ ಸುನ್ನಿ ಸಂಘಟನೆಗಳು ಮಾಡಿದ ಧಾರ್ಮಿಕ ಕ್ರಾಂತಿಯ ಫಲವಾಗಿ ಇಂದು ಹೆಮ್ಮೆಯಿಂದ ನಮ್ಮ ಸುನ್ನತ್ ಜಮಾಅತಿನ ಉಲಮಾಗಳು ರಾಜಾರೋಷವಾಗಿ ನಡೆಯಲು ಬಹಿರಂಗವಾಗಿ ಸುನ್ನತ್ ಜಮಾಅತಿನ ಕಾರ್ಯಕ್ರಮಗಳನ್ನು ಸಂಘಟಿಸಲು ಸಾಧ್ಯವಾಗಿದೆ. ಮಾತ್ರವಲ್ಲ ಆರಬ್ ಜಗತ್ತು ಸಂಘಟಿಸುತ್ತಿರುವ ಅಂತರಾಷ್ಟ್ರೀಯ ಇಸ್ಲಾಮಿಕ್ ವೇದಿಕೆಗಳಲ್ಲಿ ಸುನ್ನತ್ ಜಮಾಅತಿನ ಉಲಮಾಗಳು ಕೇಂದ್ರಬಿಂದುವಾಗಿರುತ್ತಾರೆ. ಕೆ ಸಿ ಎಫ್ ನ ಆರು ವರ್ಷಗಳ ನಿಸ್ವಾರ್ಥ ಸೇವೆಯು ಸಾರ್ಥಕವಾಗಿದೆ ನಿಸ್ಸಂದೇಹ .ಕೆ ಸಿ ಎಫ್ ಡೇಗೆ ನನ್ನ ಹೃದಯಾಂತರಾಳದ ಶುಭಾಶಯಗಳನ್ನು ಕೋರುತ್ತಾ……
ಅಲ್ಲಾಹು ಕೆ ಸಿ ಎಫ್ ಕಾರ್ಯಕರ್ತರಿಗೆ ದೀರ್ಘಾಯುಷ್ಯ ಆಯುರಾರೋಗ್ಯ ನೀಡಿ ಅನುಗ್ರಹಿಸಲಿ ಇನ್ನಷ್ಟು ಕಾಲ ಸುನ್ನತ್ ಜಮಾಅತಿನ ಕಾರ್ಯಚಟುವಟಿಕೆಗಳಲ್ಲಿ ಕಾರ್ಯಪ್ರವೃತ್ತರಾಗಲು ಅಲ್ಲಾಹು ತೌಫೀಖ್ ನೀಡಲಿ ಸಮುದಾಯದ ಹಿತಕ್ಕಾಗಿ ಮಾಡುವ ಸೇವೆಯನ್ನು ಅಲ್ಲಾಹು ಸ್ವೀಕರಿಸಲಿ.

error: Content is protected !! Not allowed copy content from janadhvani.com