ಕೆಸಿಎಫ್ ಬಹರೈನ್ ಮುಹರ್ರಕ್ ಸೆಕ್ಟರ್ ವತಿಯಿಂದ ಮಾಸಿಕ ಸ್ವಲಾತ್ ಹಾಗೂ ಅನುಸ್ಮರಣಾ ಸಂಗಮ

 

ಬಹರೈನ್ : ಕೆ ಸಿ ಎಫ್ ಮುಹರ್ರಕ್ ಸೆಕ್ಟರ್ ನ ಮಾಸಿಕ ಸ್ವಲಾತ್ ಮಜ್ಲಿಸ್ , ಜೀಲಾನಿ ಅನುಸ್ಮರಣೆ ಹಾಗೂ ತಾಜುಲ್ ಉಲಮಾ, ನೂರುಲ್ ಉಲಮಾ ಅನುಸ್ಮರಣಾ ಕಾರ್ಯಕ್ರಮ ಹಾಗೂ ಸಾಹಿತ್ಯ ಸಮಾಜ ಕಾರ್ಯ ಕ್ರಮ ಇತ್ತೀಚೆಗೆ ಅರಾದ್ ಹಾಲತ್ ಮಜ್ಲಿಸ್ ನಲ್ಲಿ ನಡೆಯಿತು.ಕೆ ಸಿ ಎಫ್ ಮುಹರ್ರಕ್ ಸೆಕ್ಟರ್ ಅಧ್ಯಕ್ಷರಾದ ಬಹು|ಸಿದ್ದಿಕ್ ಉಸ್ತಾದರ ದುಃಅ ದೊಂದಿಗೆ ಆರಂಭಿಸಿದ ಆಧ್ಯಾತ್ಮಿಕ ಮಜ್ಲಿಸ್ ಕಾರ್ಯಕ್ರಮವು ಬಹು|ಹೈದರ್ ಸಅದಿ ಉಸ್ತಾದ್ ಹಾಗೂ ಅಬೂಬಕ್ಕರ್ ಮದನಿ ಉಸ್ತಾದ್ ರವರ ಸಾನಿಧ್ಯದಲ್ಲಿ ನಡೆಯಿತು.
ಸಾಹಿತ್ಯ ಸಮಾಜ ಕಾರ್ಯಕ್ರಮ ದಲ್ಲಿ ಅಝೀಮ್ ಕಾಪು ಕಿರಾಹತ್ ಪಠಿಸಿದರು, ಅಝೀಝ್ ಮಂಜೇಶ್ವರ ಸ್ವಾಗತ ಕೋರಿದರು , ರಶೀದ್ ಈಶ್ವರಮಂಗಲ ಉದ್ಘಾಟನೆಗೈದರು. ಖಲಂದರ್ ಕಕ್ಕೇಪದವು , ಹಾರೀಸ್ ಸಂಪ್ಯ,ಜಮಾಲ್ ವಿಠ್ಠಲ್ ಹಾಗೂ ಇತರ ಸೆಕ್ಟರು ಗಳ ನೇತಾರರು ಅನುಭವ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕೆಸಿಎಫ್ ಬಹರೈನ್ ಐಎನ್ ಸಿ ಪ್ರತಿನಿಧಿ ಜಮಾಲ್ ವಿಟ್ಟಲ್ ,ಫಕ್ರುದ್ದೀನ್ ಹಾಜಿ, ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪದಾಧಿಕಾರಿಗಳು, ಝೋನ್ ಹಾಗೂ ಸೆಕ್ಟರು ಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಸಾಹಿತ್ಯ ಸಮಾಜ ಕಾರ್ಯಕ್ರಮದ ನಿರೂಪಣೆಯನ್ನು ಲತೀಫ್ ಪೇರೊಲಿ ನೆರವೇರಿಸಿದರು , ಕೊನೆಗೆ ರಶೀದ್ ಅಡ್ಯಾರ್ ವಂದನಾರ್ಪಣೆ ಗೈದರು.

Leave a Reply

Your email address will not be published. Required fields are marked *

error: Content is protected !!