janadhvani

Kannada Online News Paper

ಕೆ.ಸಿ.ಎಫ್: ದುಬೈ ಮಾಯಾನಗರಿಯಲ್ಲಿ ಹೊತ್ತಿದ ಕಿಡಿ!!!

✍🏻Nizzu4ever
ಉರವಾಲು ಪದವು
niznam4ever@gmail.com

ಯುನೈಟೆಡ್ ಅರಬ್ ಎಮಿರೇಟ್ಸ್!!! ವಾಯುವ್ಯ ಏಷ್ಯಾದ ಮಧ್ಯ ಪ್ರಾಚ್ಯದಲ್ಲಿ ಏಳು ಸ್ವಯಾಡಳಿತ ಎಮಿರ್ ಪ್ರಭುತ್ವ ಸಂಸ್ಥಾನಗಳನ್ನು ಒಳಗೊಂಡಿರುವ ಯು.ಎ.ಇ, ಅಭಿವೃದ್ಧಿಯ ಶಿಖರವೇರಿದ ವಿಶ್ವದ ಸಂಪದ್ಭರಿತ ರಾಷ್ಟ್ರಗಳ ಸಾಲಲ್ಲಿ ಗುರುತಿಸಿಕೊಂಡ ಮುಸ್ಲಿಂ ರಾಷ್ಟ್ರವಾಗಿದೆ. ಮನುಷ್ಯ ಶಕ್ತಿಗೂ ಮೀರಿದ ಅಸಾಮಾನ್ಯ ವೈಭವಗಳು, ಗಗನಚುಂಬಿ ಕಟ್ಟಡಗಳು, ಮಾನವ ನಿರ್ಮಿತ ಜಲಪಾತಗಳು, ವಿದ್ಯುತ್ ದ್ವೀಪಗಳಿಂದ ಅಲಂಕೃತಗೊಂಡ ರಸ್ತೆಯ ಇಕ್ಕೆಲಗಳು, ಬಣ್ಣ ಬಣ್ಣದ ನೀರಿನ ಕಲರವಗಳು, ನಂಬಲಸಾಧ್ಯ ಬದಲಾವಣೆಗಳು, ಮೋಜು ಮಸ್ತಿ ರಸಿಕ ತಾಣಗಳು, ಭೋರ್ಗರೆವ ಸಮುದ್ರದ ಅಲೆಗಳು, ನಿಬ್ಬೆರಗಾಗಿಸುವಂತಹ ಬದಲಾವಣೆಗಳು ಹೀಗೆ ವರ್ಣನೆಗೂ ಮೀರಿದ ರೀತಿಯಲ್ಲಿ ಯು.ಎ.ಇ ಯ ಸೌಂದರ್ಯಗಳು ನೋಡಿ ಕಣ್ಣು ತುಂಬಿಕೊಳ್ಳುತ್ತಿದೆ. ಪ್ರವಾಸಿಗಳ ನೆಚ್ಚಿನ ತಾಣವಾಗಿರುವ ಯು.ಎ.ಇ ದಿನಂಪ್ರತೀ ಲಕ್ಷಗಟ್ಟಲೆ ಪ್ರವಾಸಿಗಳನ್ನು ಸ್ವಾಗತಿಸುತ್ತಿದೆ.

ಉದ್ಯೋಗ ಹರಸಿ ಬರುವ ಪ್ರವಾಸಿಗಳಿಗೆ ಉದ್ಯೋಗ ನೀಡಿ ಬೆಳೆಸಿದ ನಾಡು, ಹಸಿದವನಿಗೆ ಅನ್ನ ನೀಡಿ ಬೆಳೆಸಿದ ಅನ್ನದಾತ ಈ ನಾಡು, ಬದುಕಿನ ದಡ ತಲುಪಿಸಿದ ಅಂಬಿಗ, ಸಣ್ಣ ನೌಕರಿಗಳಿಂದ ಹಿಡಿದು ಉದ್ಯಮ ಕ್ಷೇತ್ರಗಳಿಗೂ ಅವಕಾಶ ಕಲ್ಪಿಸಿಕೊಟ್ಟ ನಾಡು. ಕಮರಿ ಹೋಗಿದ್ದ ಕನಸುಗಳ ಮೂಟೆಗಳಿಗೆ ಮರು ಜೀವ ಕೊಟ್ಟು ಜೀವನದ ನೌಕೆಯನ್ನು ದಡ ತಲುಪಿಸಿ ಜೀವನದ ಯಶಸ್ವಿಗೆ ಮುನ್ನುಡಿ ಬರೆದ ಈ ನಾಡು ಹಲವರ ಬದುಕಿಗೆ ಆಸರೆಯಾಗಿ ನಿಂತಿದೆ. ಸ್ವದೇಶಿಗರಿಗಿಂತ ಹೆಚ್ಚಾಗಿ ವಿದೇಶಿಗರೇ ತುಂಬಿರುವ ಯು.ಎ.ಇ ಯಲ್ಲಿ ಸಾಮಾನ್ಯ ಪೌರನಿಗೂ ವಿದೇಶಿಗನಿಗೂ ಒಂದೇ ಕಾನೂನು ಒಂದೇ ನಿಯಮ.
ಸ್ವತಃ ಕಣ್ಣುಗಳನ್ನೇ ನಂಬಲಸಾಧ್ಯವಾದ ರೀತಿಯಲ್ಲಿ ಅಭಿವೃದ್ಧಿಯ ಪಥದಲ್ಲಿ ಚಲಿಸುತ್ತಿರುವ ಯು.ಎ.ಇ ಯ ಪ್ರಗತಿಗೆ ಶ್ರಮ ವಹಿಸಿದವರಲ್ಲಿ ಹೆಚ್ಚು ವಿದೇಶಿಗರೇ ಆಗಿರುತ್ತಾರೆ. ಭಾರತೀಯರು ಸೇರಿದಂತೆ ಪ್ರಪಂಚದ ಎಲ್ಲಾ ರಾಷ್ಟ್ರಗಳಿಂದಲೂ ಉದ್ಯೋಗ ಹರಸಿ ಯು.ಎ.ಇ ಪ್ರವೇಶಿಸುತ್ತಾರೆ. ಕೆಲವರು ಉದ್ಯಮಿಗಳಾದರೆ ಇನ್ನು ಕೆಲವರು ಸಣ್ಣ ಪುಟ್ಟ ಕೈಗಾರಿಕೆಗಳನ್ನು ಮಾಡಿ ಜೀವನ ನಡೆಸುತ್ತಿರುತ್ತಾರೆ. ಎಲ್ಲರನ್ನೂ ಸಮಾನ ರೀತಿಯಲ್ಲಿ ಗೌರವಿಸುವ ಈ ನಾಡು ಅವರವರ ಧರ್ಮಕ್ಕನುಸಾರ ಜೀವಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ಮುಸ್ಲಿಂ, ಹಿಂದೂ, ಕ್ರೈಸ್ತ, ಫಾರಿಸಿ, ಬೌದ್ಧ ಎಂಬ ವ್ಯತ್ಯಾಸವಿಲ್ಲದೆ ಮಾನವೀಯ ಮೌಲ್ಯಗಳಿಗೆ ಬೆಲೆ ಕಲ್ಪಿಸಿ ಜೀವಿಸುವಂತೆ ಇಲ್ಲಿನ ಕಾನೂನು ಪ್ರೇರಣೆಯನ್ನು ನೀಡುತ್ತದೆ. ಸಂಘಟನಾ ವ್ಯವಸ್ಥೆಯಲ್ಲೂ ಅವರವರ ಸಂಪ್ರದಾಯಕ್ಕನುಸಾರವಾಗಿ ಊರಿನ ಅಭಿವೃದ್ಧಿ ಬಯಸಿ ಸಾಂಘಿಕವಾಗಿ ಒಟ್ಟುಗೂಡುವ ಪ್ರವಾಸಿಗಳು ಪರಸ್ಪರ ಸಹಕಾರ ಮನೋಭಾವದಿಂದ ಒಂದುಗೂಡುತ್ತಾರೆ.

ಕರ್ನಾಟಕದಿಂದಲೂ ಹಲವಾರು ಸಂಘ ಸಂಸ್ಥೆಗಳ ಅಭಿವೃದ್ದಿಗಾಗಿ ಸಂಘಟನೆಗಳನ್ನು ಕಟ್ಟಿಕೊಂಡು ಅದರ ಮೂಲಕ ಸಾಮಾಜಿಕ ಶೆಕ್ಷಣಿಕ ಸೇವೆಗಳಲ್ಲಿ ಭಾಗಿಯಾಗಿ ಊರಿನ ಅಭಿವೃದ್ದಿಗಾಗಿ ಶ್ರಮಿಸುತ್ತಾರೆ. ಆದರೆ, ಅನಿವಾಸಿ ಕನ್ನಡಿಗರಿಗೆ ಒಂದುಗೂಡಲು ಬೇಕಾದ ಏಕೀಕೃತ ಸಂಘಟನೆಯ ಕೊರತೆಯಿತ್ತು. ಕರ್ನಾಟಕದಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ಸಂಘ ಸಂಸ್ಥೆಗಳ ಹೆಸರಿನಲ್ಲಿ ಕನ್ನಡಿಗರು ಒಂದುಗೂಡುತ್ತಿದ್ದರು. 2007 ರಲ್ಲಿ ಕರ್ನಾಟಕ ಸುನ್ನಿ ಯುವಜನ ಸಂಘ ಎಂಬ ಹೆಸರಿನಲ್ಲಿ ಸಂಘಟನಾ ವ್ಯವಸ್ಥೆಯು ಚಾಲ್ತಿಗೆ ಬಂತು. ಹಲವಾರು ಸುನ್ನಿ ಕಾರ್ಯಕರ್ತರು, ನಾಯಕರು ಈ ಸಂಘಟನೆಯಲ್ಲಿ ಗುರುತಿಸಿಕೊಂಡರು. ಇದರ ಭಾಗವಾಗಿ 2009 ರಲ್ಲಿ ಮಾಯಾನಗರಿ ದುಬೈಯಲ್ಲಿ ಸಯ್ಯದ್ ಕೂರತ್ ತಂಘಳ್ ನೇತೃತ್ವದಲ್ಲಿ ಬ್ರಹತ್ ಹುಬ್ಬುರಸೂಲ್ ಕಾನ್ಫರೆನ್ಸ್ ನಡೆಯಿತು. ಜನಸಾಗರವೇ ಹರಿದು ಬಂತು. ಈ ವಿಜಯವೇ ಪ್ರವಾಸಿಗರಲ್ಲಿ ಸಂಘಟನಾ ಶಕ್ತಿ ಇನ್ನಷ್ಟು ಬೆಳೆಯಲು ಕಾರಣವಾಯಿತು.

ವಿವಿಧ ಸಂಘ ಸಂಸ್ಥೆಗಳ ಹೆಸರಿನಲ್ಲಿ ಗುರುತಿಸಿಕೊಂಡು ಕಾರ್ಯಚರಿಸುತ್ತಿದ್ದ ಸುನ್ನತ್ ಜಮಾಅತ್ತಿನ ಪ್ರವಾಸೀ ಕಾರ್ಯಕರ್ತರನ್ನು ಒಂದೇ ವ್ರಕ್ಷದಡಿಯಲ್ಲಿ ಒಗ್ಗೂಡಿಸುವ ಫಲವಾಗಿ 2013 ರಲ್ಲಿ ತಾಜುಲ್ ಫುಕಹಾಆ ಉಡುಪಿ ಸಂಯುಕ್ತ ಖಾಝಿ ಬೇಕಲ್ ಉಸ್ತಾದರ ನೇತೃತ್ವದಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಎಂಬ ಹೆಸರಿನಲ್ಲಿ ಮಾಯಾನಗರಿ ದುಬೈಯ ಪ್ರಶಾಂತ ವಾತಾವರಣದಲ್ಲಿ ಸಂಘಟನೆಯು ಅಧಿಕೃತವಾಗಿ ಘೋಷಣೆಯಾಯಿತು. ಅರಬ್ ರಾಷ್ಟ್ರಗಳಾದ್ಯಂತ ದುಡಿಯುತ್ತಿರುವ ಅನಿವಾಸಿ ಕನ್ನಡಿಗರು ಕೆ.ಸಿ.ಎಫ್ ನೆರಳಿನಲ್ಲಿ ಕಾರ್ಯಾಚರಿಸತೊಡಗಿದರು.

ಕಾರ್ಯಕರ್ತರ ಉತ್ಸಾಹ ಇಮ್ಮಡಿಯಾಯಿತು. ಜನಪ್ರಿಯ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಮಾನಸದಲ್ಲಿ ಕೆ.ಸಿ.ಎಫ್ ಸ್ಥಾನ ಹಿಡಿಯಿತು. ಕೇವಲ ಐದು ವರ್ಷಗಳ ಅವಧಿಯಲ್ಲಿ ಜಿ.ಸಿ.ಸಿ ಮಾತ್ರವಲ್ಲದೆ ಲಂಡನ್ ಮಲೇಶ್ಯಾದಲ್ಲೂ ಸಂಘಟನೆ ವಿಸ್ತರಿಸಿತು. ಸಾಂಘಿಕವಾಗಿ ಕನ್ನಡಿಗರು ಹಿಂದುಳಿದವರು ಎಂದು ಹೇಳುತ್ತುದ್ದವರನ್ನು ಮೂಗಿನ ಮೇಲೆ ಬೆರಳಿಟ್ಟು ನೋಡುವಂತೆ ಸಂಘಟನೆ ಬೆಳೆದು ಬಂತು.

ಮುಂದುವರಿಯುವುದು…….

ಭಾಗ 2

error: Content is protected !! Not allowed copy content from janadhvani.com