ಶೈಖ್ ಹಂದಾನ್ ಬಿನ್ ಝಾಹಿದ್ ಅಲ್ ನಹ್ಯಾನ್‌ರಿಗೆ ‘ಅಲ್ ಖೈರ್’ ಚಾರಿಟಿ ಅವಾರ್ಡ್: ಕಾಂತಪುರಂ ಎ.ಪಿ ಉಸ್ತಾದ್ ರಿಂದ ಹಂಸ್ತಾಂತರ

ದುಬೈ: ಅಬುಧಾಬಿ ಆಡಳಿತಾಧಿಕಾರಿಯವರ  ಅಲ್ ದಫ್ರಾ ವಲಯದ ಪ್ರತಿನಿಧಿ ಮತ್ತು ಎಮಿರೇಟ್ಸ್‌ ರೆಡ್ ಕ್ರೆಸೆಂಟ್ ಅಧ್ಯಕ್ಷರೂ ಆದ ಶೈಖ್ ಹಂದಾನ್ ಬಿನ್ ಝಾಹಿದ್ ಅಲ್ ನಹ್ಯಾನ್ ರೊಂದಿಗೆ ಕಾಂತಪುರಂ ಎ. ಪಿ ಅಬುಬಕರ್ ಮುಸ್ಲಿಯಾರ್ ಬತೀನ್ ಅಲ್ ನಖೀಲ್ ಅರಮನೆಯಲ್ಲಿ ಇತ್ತೀಚೆಗೆ ಮಾತುಕತೆ ನಡೆಸಿದರು.

ಕಾರಂದೂರ್ ಮರ್ಕಝುಸ್ಸಖಾಫತಿ ಸುನ್ನಿಯ್ಯಾದ ರುಬಿ ಜ್ಯುಬಿಲಿ ಸಮ್ಮೇಳನದ ಭಾಗವಾಗಿ ನಡೆದ ‘ಶೈಖ್ ಝಾಹಿದ್ ಇಂಟರ್ ನ್ಯಾಶನಲ್ ಪೀಸ್ ಕಾನ್ಫರೆನ್ಸ್’ ನಲ್ಲಿ ಶೈಖ್ ಹಂದಾನ್ ಬಿನ್ ಝಾಹಿದ್ ರನ್ನು ‘ಅಲ್ ಖೈರ್ ಚಾರಿಟಿ ಅವಾರ್ಡ್’ ನೀಡಿ ಗೌರವಿಸಲಾಗಿತ್ತು. ಆ ಅವಾರ್ಡ್ ನ್ನು ನೇರವಾಗಿ ನೀಡುವ ಸಲುವಾಗಿ ಕಾಂತಪುರಂ ಉಸ್ತಾದರು ಅಬುಧಾಬಿ ಗೆ ತಲುಪಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ರೆಡ್ ಕ್ರೆಸೆಂಟ್ ನೀಡಿದ ಸೇವೆಯನ್ನು ಆಧರಿಸಿ ಪ್ರಸ್ತುತ ಅವಾರ್ಡ್ ನೀಡಲಾಗಿತ್ತು.

ಯುಎಇ ‘ದಾನ ವರ್ಷ’ದ ಭಾಗವಾಗಿ ನಡೆಸಿದ ಸೇವಾ ಚಟುವಟಿಕೆಗಳನ್ನು ಗಮನಿಸಿ ಶೈಖ್ ಹಂದಾನ್ ರನ್ನು ಪರಿಗಣಿಸಲಾಗಿತ್ತು ಎಂದು ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ ಹೇಳಿದರು. ಈ ಸಂದರ್ಭದಲ್ಲಿ ಮರ್ಕಝ್ ಡಯರಕ್ಟರ್ ಡಾ.ಅಬ್ದುಲ್ ಹಕೀಂ ಅಝ್ಹರಿ ಉಪಸ್ಥಿತರಿದ್ದರು.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!