ಸೌಂದರ್ಯ ವರ್ಧಕವಾಗಿ ಉಪಯೋಗಿಸುವ ‘ಫೈಝ’ ಮಾರಕ: ದುಬೈ ಮುನಿಸಿಪಾಲಿಟಿ ಎಚ್ಚರಿಕೆ

ದುಬೈ: ಶರೀರದಲ್ಲಿ ಗಾಯ ಉಂಟು ಮಾಡುವ, ಸ್ಪಷ್ಟ ನೋಂದಣಿ ಮಾಡಿಸದ ‘ಫೈಝ’ ಎನ್ನುವ ಸೌಂದರ್ಯ ವರ್ಧಕ ಕ್ರೀಂ ಉಪಯೋಗಿಸದಂತೆ ದುಬೈ ಮುನಿಸಿಪಾಲಿಟಿ ಯ ಹೆಲ್ತ್ ಆ್ಯಂಡ್ ಸೇಫ್ಟಿ ಡಿಪಾರ್ಟ್‌ಮೆಂಟ್ ಜನತೆಗೆ ಎಚ್ಚರಿಕೆ ನೀಡಿದೆ.

ಚರ್ಮ ಕಾಂತಿಯನ್ನು ಹೆಚ್ಚಿಸಲು ಉಪಯೋಗಿಸಲಾಗುವ ಕ್ರೀಂ ನ ಪ್ರಚಾರವು ಸಾಮಾಜಿಕ ಜಾಲ ತಾಣಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಲೈಸೆನ್ಸ್ ಇರುವ ಕ್ರೀಂಗಳ ಪಟ್ಟಿಯಲ್ಲಿ ಫೈಝ ಒಳಪಟ್ಟಿಲ್ಲ. ಅದಲ್ಲದೆ ಆ ಕ್ರೀಂ ಗಾಗಿ ಉಪಯೋಗಿಸಲಾದ ರಾಸಾಯನಿಕ ಪದಾರ್ಥಗಳು ಅತ್ಯಂತ ಮಾರಕ ಎಂದು ಎಚ್ಚರಿಸಲಾಗಿದೆ.

ಹೈಡ್ರೋಕ್ವಿನೋನ್, ಮರ್ಕ್ಯುರಿ ಮುಂತಾದವು ಅತ್ಯಂತ ಅಪಾಯಕಾರಿ ರಾಸಾಯನಿಕ ವಸ್ತುಗಳಾಗಿವೆ. ಈ ಮಾರಕ ವಸ್ತುಗಳು ಫೈಝ ಕ್ರೀಂ ನಲ್ಲಿ ಅಡಕವಾಗಿದೆ ಎಂದು ಮುನಿಸಿಪಾಲಿಟಿ ತಿಳಿಸಿದ್ದು, ಹೈಡ್ರೋಕ್ವಿನೋನ್ ಎನ್ನುವ ವಸ್ತು ಚರ್ಮದಲ್ಲಿನ ಮೆಲಾನ್‌ಗೆ ಅಪಾಯ ಎನ್ನಲಾಗಿದೆ.

ಫೈಝ ಹಚ್ಚಿದರೆ ಮೃದುವಾಗಿ, ಚರ್ಮವು ಬೆಳ್ಳಗೆ ಕಾಣಿಸುತ್ತದೆ. ಆದರೆ ನಿರಂತರ ಉಪಯೋಗಿಸುವ ಮೂಲಕ ಯುವಿಎ, ಯುವಿಬಿ ರಶ್ಮಿಗಳು ಸರೀರಕ್ಕೆ ಪ್ರವೇಶಿಸಿ ಸೂರ್ಯ ತಾಪದ ಅಪಾಯವಿದೆ. ಚರ್ಮದಲ್ಲುಂಟಾಗುವ ಕ್ಯಾನ್ಸರ್ ಗೂ ಅದು ಕಾರಣವಾಗಬಲ್ಲದು. ಪೈಝ ಉತ್ಪನ್ನವನ್ನು ಎಲ್ಲಾದರೂ ಮಾರಾಟ ಮಾಡುವುದಾಗಿ ಕಂಡು ಬಂದರೆ ಮಾಹಿತಿ ನೀಡುವಂತೆ ದುಬೈ ಮುನಿಸಿಪಾಲಿಟಿ ತಿಳಿಸಿದೆ.

Leave a Reply

Your email address will not be published. Required fields are marked *

error: Content is protected !!