ಇಬ್ಬಗೆಯ ಪಾಸ್‌ಪೋರ್ಟ್: ಅನಿವಾಸಿಗಳಲ್ಲಿ ಆತಂಕ; ವ್ಯಾಪಕ ಆಕ್ರೋಶ

ದುಬೈ: ಎಮಿಗ್ರೇಷನ್ ಸ್ಟೇಟಸ್ ಅನುಸಾರ ನವೀನ ರಂಗುಗಳ ಆವರಣಗಳುಳ್ಳ ಭಾರತೀಯ ಪಾಸ್‌ಪೋರ್ಟ್ ಅನಿವಾಸಿಗಳಲ್ಲಿ ಆತಂಕ ಉಂಟುಮಾಡಿದೆ. ಇದಕ್ಕೆ ಬೇಕಾದ ತಯಾರಿಯನ್ನು ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯ ಪ್ರಾರಂಭಿಸಿದೆ.
ಈ ಕುರಿತು ವರದಿಗಳು ಬರುತ್ತಲೇ ಅನಿವಾಸಿ ಜೀವನ ನಡೆಸುವವರ ನಡುವೆ ವಾದ್ವಾದಗಳು ತೊಡಗಿದೆ. ಪ್ರತಿರೋಧ ದಿಂದ ಇಂತಹ ನಿಲುವನ್ನು ಬಹಿಷ್ಕರಿಸಲು ಸಾಧ್ಯವಿದೆ ಎನ್ನುವುದು ಅನಿವಾಸಿಗಳ ನಿರೀಕ್ಷೆಯಾಗಿದೆ.

ಹೊಸ ಮಾದರಿಯ ಜೊತೆಗೆ ವಿಳಾಸ ಮತ್ತು ಕೌಟುಂಬಿಕ ಮಾಹಿತಿಗಳನ್ನು ಕೂಡ ಬಿಟ್ಟು ಬಿಡಲು ಸರಕಾರ ಗುರಿ ಹೊಂದಿದೆ. ವಿದ್ಯಾಭ್ಯಾಸ ಯೋಗ್ಯತೆಯನ್ನು ಮಾನದಂಡ ವಾಗಿಸಿ ಪ್ರಜೆಗಳನ್ನು ವಿಂಗಡಿಸುವುದನ್ನು ಒಪ್ಪಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎನ್ನುವುದು ಅನಿವಾಸಿಗಳ ನಿಲುವಾಗಿದೆ. ಈಗಾಗಲೆ ಅನಿವಾಸಿ ಸಂಘಟನೆಗಳು ತಮ್ಮ ಖಂಡನೆಯನ್ನು ವ್ಯಕ್ತ ಪಡಿಸಿದೆ. ಸಾಮಾಜಿಕ ತಾಣಗಳ ಮೂಲಕ ಕೂಡ  ಇದರ ವಿರುದ್ದ ಧ್ವನಿ ಮೊಳಗುತಿದೆ.

ಪಾಸ್‌ಪೋರ್ಟ್ ಹೊಂದಿದಾತನ ತಂದೆ ತಾಯಿಗಳ ಮತ್ತು ಹೆಂಡತಿಯ ಹೆಸರುಗಳು, ವಿಳಾಸ, ಎಮಿಗ್ರೇಷನ್ ಪರಿಶೀಲನಾ ಅವಶ್ಯಕತೆ (ಇಸಿಆರ್) ಹಳೆ ಪಾಸ್‌ಪೋರ್ಟ್ ಸಂಖ್ಯೆ, ಪ್ರಕಟಗೊಂಡ ದಿನಾಂಕ ಮತ್ತು ಸ್ಥಳಗಳ ವಿವರಗಳನ್ನು ಒಳಗೊಂಡ ಕೊನೆಯ ಪುಟವು ಈ ಕಾನೂನು ಜಾರಿಗೆ ಬಂದ ನಂತರದ ಪಾಸ್‌ಪೋರ್ಟ್ ಗಳಲ್ಲಿ ಅಪ್ರತ್ಯಕ್ಷ ಗೊಳ್ಳಲಿದೆ. ಎಮಿಗ್ರೇಷನ್ ಅವಶ್ಯಕತೆ ಇರುವ ವ್ಯಕ್ತಿಗಳಿಗೆ ಕಿತ್ತಳೆ ರಂಗಿನ ಪಾಸ್‌ಪೋರ್ಟ್ ಲಭಿಸಲಿದೆ. ಇಸಿಆರ್ ಅಲ್ಲದ ಪಾಸ್ಪೋರ್ಟ್  ಈಗಿರುವ ಅದೇ ರಂಗಿನಲ್ಲಿ ಮುಂದುವರಿಯಲಿದೆ.

ವಿದೇಶಾಂಗ ಸಚಿವಾಲಯ ಮತ್ತು ಮಹಿಳಾ-ಮಕ್ಕಳ ಪರಿಪಾಲನಾ ಸಚಿವಾಲಯದ ಮೂವರು ಅಧಿಕಾರಿಗಳನ್ನೊಳಗೊಂಡ ಸಮಿತಿಯ ಶಿಫಾರಸ್ಸಿಗೆ ಸರಕಾರ ಅಂಗೀಕಾರ ನೀಡಿದೆ. ಆದರೆ ಅದನ್ನು ಜಾರಿಗೆ ತರುವ ಬಗ್ಗೆ ದಿನಾಂಕವನ್ನು ಇದುವರೆಗೂ ತಿಳಿಸಿಲ್ಲ. ಈ ನಿಲುವಿನಿಂದ ಹಿಂಜರಿಯುವಂತೆ ಶಾರ್ಜಾದ ಐಎಂಸಿಸಿ ರಾಜ್ಯ ಜನರಲ್ ಕಾರ್ಯದರ್ಶಿ ತ್ವಾಹಿರಲಿ ಪುರಪ್ಪಾಡ್ ಆಗ್ರಹಿಸಿದ್ದಾರೆ.

ಈ ಕಾನೂನಿನ ವಿರುದ್ಧ ಉಗ್ರ ಪ್ರತಿಭಟನೆ ನಡೆಯ ಬೇಕಿದೆ. ಭಾರತೀಯ ಸಮುದಾಯ ಒಮ್ಮತದಿಂದ ಬೀದಿಗಿಳಿಯ ಬೇಕು. ಭಾರತೀಯ ಪ್ರಜೆಗಳನ್ನು ಎರಡು ವಿಧದಲ್ಲಿ ವಿಂಗಡಿಸುವುದನ್ನು ಒಕ್ಕೊರಲಿನಿಂದ ಪ್ರತಿಭಟಿಸಬೇಕು. ಕೇಂದ್ರ ಸರ್ಕಾರದ ಈ ನಿಲುವು ಭಾರತೀಯ ರಲ್ಲಿ ಮಾತ್ರವಲ್ಲದೆ ಯುಎಇ ಸಮೇತ ವಿದೇಶ ರಾಜ್ಯಗಳಲ್ಲಿ ಭಾರತದ ಮಹತ್ವಕ್ಕೆ ಕುಂದು ತರಲಿದೆ. ವಿಶ್ವವು ನೂತನ ತಂತ್ರಜ್ಞಾನದತ್ತ ಮುನ್ನುಗ್ಗುತ್ತಿರುವಾಗ ಭಾರತದಂತಹ ಅಭಿವೃದ್ಧಿಶೀಲ ದೇಶದಲ್ಲಿ ಇಂತಹ ಕೀಳುಮಟ್ಟದ ಕಾನೂನು ಜಾರಿಗೆ ತರುವುದು ಪ್ರಜಾಪ್ರಭುತ್ವಕ್ಕೆ ಕಳಂಕ. ಈ ನಿಲುವು ಖಂಡನೀಯವಾಗಿದ್ದು, ಇದರ ವಿರುದ್ದ ಯಾವುದೇ ಪ್ರತಿಭಟನೆಗೆ ಐಎಂಸಿಸಿ ಮುಂಚೋಣಿಯಲ್ಲಿರಲಿದೆ ಎಂದು ತ್ವಾಹಿರಲಿ ತಿಳಿಸಿದ್ದಾರೆ.

ಭಾರತೀಯ ಪಾಸ್‌ಪೋರ್ಟ್ ನಲ್ಲಿ ತರಲು ಉದ್ದೇಶಿಸಲಾದ ಬದಲಾವಣೆಯು ಅನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ ಎಂದು ದುಬೈನಲ್ಲಿರುವ ಎಡಪಕ್ಷ ಚಿಂತಕ ಅಬ್ದುಲ್ ರಹ್ಮಾನ್ ತಿಳಿಸಿದ್ದಾರೆ. ರಂಗು ಬದಲಾಯಿಸುವುದು ಮತ್ತು ಪುಟವನ್ನು ತೆಗೆದು ಹಾಕುವ ವಿಧಾನವು ಪರಿಷ್ಕೃತ ಸಮಾಜಕ್ಕೆ ಹೇಳಿಸಿದ್ದಲ್ಲ ಎಂದು ಅವರು ಹೇಳಿದ್ದಾರೆ. ಜಾತಿಯ ಹೆಸರಲ್ಲಿ ನಡೆಸಲಾಗುವ ತಾರತಮ್ಯತೆಯಂತೆ ಇದು ಕೂಡ ಸಮಾನವಾದ ಬದಲಾವಣೆಯಾಗಿದೆ ಎಂದು ತಿಳಿಸಿದ್ದಾರೆ.

ವಿದೇಶಾಂಗ ಸಚಿವಾಲಯದ ಮರು ಪರಿಶೀಲನೆ ಗೊಳಪಡಿಸಬೇಕು. ಭಾರತದಿಂದ ದುಡಿಮೆಗಾಗಿ ಬಂದ ಕಾರ್ಮಿಕರನ್ನು ಎರಡನೆಯ ದರ್ಜೆಯ ಪ್ರಜೆಗಳನ್ನಾಗಿಸುವುದು ಅನ್ಯಾಯವಾಗಿದೆ ಮತ್ತು ಈ ನಿಲುವಿನಿಂದ ಕೇಂದ್ರ ಸರಕಾರ ಹಿಂಜರಿಯಬೇಕು ಎಂದು ದುಬೈ ಕೆಎಂಸಿಸಿ ಆಗ್ರಹಿಸಿದೆ. ಸಂಪನ್ನರಿಗೆ ನ್ಯಾಯ ಮತ್ತು ಬಡವರಿಗೆ ಅನ್ಯಾಯ ಮಾಡುವಂತಹ ಬಿಜೆಪಿ ಸರಕಾರದ ಈ ನಿಲುವು ವಿಭಜನಾ ಮನೋಭಾವವನ್ನು  ಸೂಚಿಸುತ್ತದೆ. ಅನಿವಾಸಿ ಕಾರ್ಮಿಕರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ವಿಂಗಡಿಸುವ ವಿದೇಶಾಂಗ ಸಚಿವಾಲಯದ ಈ ತೀರ್ಮಾನವು ಆರ್ಥಿಕ ವಲಯಸಲ್ಲಿ ದೇಶವನ್ನು ಸಂಪನ್ನಗೊಳಿಸಿದ ಅನಿವಾಸಿಗಳಿಗೆ ನೀಡುವ ಅಪಚಾರವಾಗಿದೆ ಎಂದು ಕೆಎಂಸಿಸಿಯ ಅಧ್ಯಕ್ಷ ಆವಯಿಲ್ ಉಮರ್ ಹಾಜಿ ಮತ್ತು ಕಾರ್ಯದರ್ಶಿ ಇಬ್ರಾಹೀಂ ಮುರಿಚ್ಚಾಂಡಿ ತಿಳಿಸಿದ್ದಾರೆ.

ಈ ಅನ್ಯಾಯದ ವಿರುದ್ಧ ಯುವಕಲಾ ಸಾಹಿತಿ ಯುಎಇ ಸಮಿತಿಯ ಅಡ್ವಕೆಟ್ ನಜೀಮುದ್ದೀನ್ ಮತ್ತು ರಾಸಲ್ ಖೈಮಾದ ಸೆಕ್ರೆಟರಿ ಸಂದೀಪ್ ವೆಳ್ಳಲ್ಲೂರ್ ತಮ್ಮ ಖಂಡನೆ ಯನ್ನು ವ್ಯಕ್ತಪಡಿಸಿದ್ದಾರೆ. ಭಾರತವು ಬ್ರಿಟಿಷ್ ಆಳ್ವಿಕೆಯತ್ತ ಮರಳುತ್ತಿದೆ, ಭಾರತೀಯ ಸಂವಿಧಾನದ 14ರಿಂದ 18ರವರೆಗಿನ ಸಮತ್ವ ಎನ್ನುವ ಅವಕಾಶವನ್ನು ಈ ನಿಲುವು ಇಲ್ಲವಾಗಿಸಲಿದೆ. ಸಾಧಾರಣ ಕಾರ್ಮಿಕ ಮತ್ತು ವಿದ್ಯಾವಂತರನ್ನು ಇಬ್ಬಗೆಯ ಪ್ರಜೆಗಳನ್ನಾಗಿ ವಿಂಗಡಿಸಲಿದೆ. ಅದೇ ರೀತಿ ವಿದೇಶಗಳಲ್ಲಿ ಭಾರತೀಯರನ್ನು ವಿಂಗಡಿಸಲಿದೆ ಮತ್ತು ವಿಳಾಸವನ್ನು ಕಿತ್ತು ಹಾಕುವುದರಿಂದ ವಿದೇಶದಲ್ಲಿ ಮರಣ ಹೊಂದಿದರೆ ಅವರ ಮೃತದೇಹವನ್ನು ಊರಿಗೆ ಕೊಂಡೊಯ್ಯುವಲ್ಲಿ ಕಾನೂನಾತ್ಮಕ ತಡೆ ಉಂಟುಮಾಡಲಿದೆ ಎನ್ನುವ ಅಭಿಪ್ರಾಯ ಕೇಳತೊಡಗಿದೆ.

ಸಾಧಾರಣವಾಗಿ ಹತ್ತನೇ ತರಗತಿಯಲ್ಲಿ  ಅನುತ್ತೀರ್ಣರಾದವರಿಗೆ  ಎಮಿಗ್ರೇಷನ್ ಕ್ಲಿಯರನ್ಸ್ ಅವಶ್ಯ ಎನ್ನುವ ಮೊಹರು ಹಾಕಲಾಗುತ್ತಿತ್ತು. ಆದರೆ ವಿಧ್ಯಾಭ್ಯಾಸದ ಮರೆಯಲ್ಲಿ ತಾರತಮ್ಯತೆ ಸಲ್ಲದು ಎನ್ನುವ ಅಭಿಪ್ರಾಯ ಎಲ್ಲೆಡೆಯೂ ಕೇಳಿಬರುತ್ತಿದೆ. ಈ ತಾರತಮ್ಯತೆ ವಿರುದ್ದ ಅನಿವಾಸಿಗಳು ಮತ್ತು ಭಾರತದಲ್ಲೇ ಪ್ರತಿಭಟನೆ ಮೊಳಗಲಿದೆ ಎಂದು ಅನುಮಾನಿಸಲಾಗಿದೆ. ಆದರೆ, ಸರಕಾರ ಯಾವ ರೀತಿಯಲ್ಲಿ ಎದುರಿಸಲಿದೆ ಎಂಬುದು ವ್ಯಕ್ತವಲ್ಲ.

ಇವುಗಳನ್ನೂ ಓದಿ

Leave a Reply

Your email address will not be published. Required fields are marked *

error: Content is protected !!